ಉಮೇಶ ಕತ್ತಿ ಬಿಜೆಪಿಯಲ್ಲಿ ಉಳಿಯುದಿಲ್ಲ: ಕೋನರೆಡ್ಡಿ ಬಾಂಬ್

0
27

ಉಮೇಶ ಕತ್ತಿ ಬಿಜೆಪಿಯಲ್ಲಿ ಉಳಿಯುದಿಲ್ಲ: ಕೋನರೆಡ್ಡಿ ಬಾಂಬ್
ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಅಲ್ಲೆ ಇಲ್ಲ, ಮೈತ್ರಿ ಬಿರುಗಾಳಿ ಇದೆ. ಉಮೇಶ ಕತ್ತಿ ಬಹಳದಿನ ಬಿಜೆಪಿಯಲ್ಲಿ ಉಳಿಯುದಿಲ್ಲ ಜೆಡಿಎಸ್ ಅಥವಾ ಕಾಂಗ್ರೆಸ್‌ಗೆ ಬರುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಹೊಸ ಬಾಂಬ್ ಸೀಡಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಮರದಲ್ಲಿ ಮೈತ್ರಿ ಸರ್ಕಾರವು ೨೧ ಸ್ಥಾನವನ್ನು ಗೆಲುವುದು ಖಚಿತ
ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ತರಲು ಸಂಸದ ಸುರೇಶ ಅಂಗಡಿ ಹಿಂದೆಟ್ಟು ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಸಮಯದಲ್ಲಿ ಮಹಾನೀರು ಬಗ್ಗೆ ಮಾತನಾಡುವ ಅರ್ಹತೆ ಸಂಸದರಿಗಿಲ್ಲ್ಲ ಈ ಭಾಗದ ಜನರಿಗೆ ಯಾವುದೇ ಸತ್ಯಾಂಶವನ್ನು ಸಂಸದರರು ಹೇಳುತ್ತಿಲ್ಲ, ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂದು ಕಾಳೆದರು.
ಮುಖ್ಯಮಂತ್ರಿ ಕುಮಾರಸ್ವಾಮಿ ೪೪ ಸಾವಿರ ರೈತರ ಸಾಲ ಮನ್ನಾ ಮಾಡಿದ್ದಾರೆ, ಈಗಾಗಲೇ ರಾಷ್ಟಿçÃಕೃತ ಬ್ಯಾಂಕ್ ಗಳಿಗೆ ೨೦ ರಿಂದ ೫೦ ಸಾವಿರ ರೈತರ ಖಾತೆಗೆ ಜಮಾ ಆಗಿವೆ, ಇನ್ನೂ ೧/೩ ರಷ್ಟು ಮಾತ್ರ ಸಾಲ ಉಳಿದುಕೊಂಡಿದೆ ಚುನಾವಣೆ ಬಳಿಕ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು, ಇಲ್ಲವೆಂದರೆ ಶೀಘ್ರದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೆನೆ. ಬೇರೆಯವರ ಮಾತಿಗೆ ತಲೆಗೂಡುವುದಿಲ್ಲ, ನಾಡಿನ ಜನತೆ ಮೈತ್ರಿ ಸರ್ಕಾರದ ಬೆಂಬಲಿಗಿದೆ.
ಪ್ರಧಾನಿ ಮೋದಿಯವರು ೨ ಸಾವಿರ ಜನತೆಗೆ ಲಾಲಿಪಪ್ ರೀತಿಯಲ್ಲಿ ನೀಡುತ್ತಿದ್ದಾರೆ. ಜನರು ಮರಳಾಗಲು ಸಾಧ್ಯವಿಲ್ಲ ಎಂದರು.
ಶ್ರಿÃಮಂತ ಮಕ್ಕಳ್ಯಾರು ಸೈನ್ಯಕ್ಕೆ ಸೇರುವುದಿಲ್ಲ, ಬಡವರ ಮಕ್ಕಳೇ ಹೆಚ್ಚು ಸೈನ್ಯಯಲ್ಲಿ ಕಾರ್ಯನಿರ್ವಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ.
ಎರಡು ದಿನ ಪ್ರಚಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ತೆರಳಿದ್ದಾರೆ. ಏ. ೧೯ ರಂದು ಕುಮಾರಸ್ವಾಮಿ, ದೇವೆಗೌಡ್ರರು ಹಾಗೂ ಕಾಂಗ್ರೆಸ್ ಸ್ಟಾರ್ ನಾಯಕರು ಬೆಳಗಾವಿಗೆ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿನಯ ನಾವಲಗಟ್ಟಿ, ಶಂಕರ ಮಾಡಲಗಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು
೦೧
^^^^^

loading...