ಎಚ್ಚರ ಪ್ರಯಾಣಿಕ ಎಚ್ಚರ ರೇಲ್ವಾ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ

0
13

ಎಚ್ಚರ ಪ್ರಯಾಣಿಕ ಎಚ್ಚರ
ರೇಲ್ವಾ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ-ಬೆಳಗಾವಿ:ಪ್ರಯಾಣಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮವನ್ನು ಭಾರತೀಯ ರೇಲ್ವೆ ಸುರಕ್ಷಾ ದಳದ ವತಿಯಿಂದ ಏರ್ಪಡಿಸಿ ಕಿರು ನಾಟಕದ ಪ್ರದರ್ಶನದ ಮೂಲಕ ಪ್ರಯಾಣಿಕರಿಗೆ ಅರಿವು ಮೂಡಿಸಿದರು .

ಸೋಮವಾರ ನಗರದ ರೇಲ್ವೆ ನಿಲ್ದಾಣದಲ್ಲಿ ಸುರಕ್ಷಾ ದಳದವರಿಂದ ನಡೆದ ಎಚ್ಚರ ಪ್ರಮಾಣಿಕ ಎಚ್ಚರ ಎಂಬ ಕಿರು ನಾಟಕ ಪ್ರದರ್ಶನ ಮಾಡಿ ರೇಲ್ವೆದಲ್ಲಿ ಪ್ರಯಾಣಿಸುವಾಗ ಕಳ್ಳತನ ,ವಂಚನೆ ,ಮಹಿಳೆರಿಗೆ ಕಿರುಕುಳ ಸೇರಿದಂತೆ ಜಾಗೃತರಾಗಲೂ ರೇಲ್ವೆ ಸಹಾಯವಾಣಿ 182 ಸಂಪರ್ಕಿಸಲು ನಾಟಕದಲ್ಲಿ ತಿಳಿಸಿದರು .

ಈ ಸಂದರ್ಭದಲ್ಲಿ ರೇಲ್ವೆ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ ಮಂಜಾ,ದೇವರಾಜ,ಭಾನುಪ್ರಕಾಶ, ಚನ್ನಬಸು,ರವಿ,ಬಸವರಾಜ,ಲಕ್ಷ್ಮಿ ಸೇರಿದಂತೆ ಇತರರು ಇದ್ದರು .

loading...