ಎನ್‍ಪಿಎಸ್ ರದ್ದುಗೊಳಿಸಲು ಸರಕಾರಿ ನೌಕರರ ಒತ್ತಾಯ

0
36

[vc_video link=”https://youtu.be/NGuBYNmK7-8″]

ಕನ್ನಡಮ್ಮ ಸುದ್ದಿ
ಬೆಳಗಾವಿ : 2004ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಅವೈಜ್ಞಾನಿಕ ಸಿದ್ದಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್‍ಪಿಎಸ್ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ(ಓಪಿಎಸ್) ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರದಾರ ಮೈದ್ಯಾನದಿಂದ ಬೋಗಾರವೆಸ್, ಚನ್ನಮ್ಮ ಸರ್ಕಲ್ ಮೂಲಕ ಬೃಹತ್ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಿದ ನೌಕರರು ಲಕ್ಷಾಂತರ ಸರಕಾರಿ ನೌಕರರು ಅನಿಶ್ಚಿತ ಪಿಂಚಣಿ ಯೋಜನೆಯಾದ ಎನ್‍ಪಿಎಸ್ ರಾಜ್ಯ ಸರಕಾರ ಕೈಬಿಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶಗೌಡಾ ಪಾಟೀಲ, ಜಯಕುಮಾರ ಹೆಬಳಿ, ಎ.ಡಿ.ಚನಗೌಡರ, ಎಂ.ಡಿ.ಉಪ್ಪಿನ, ಶ್ರವಣ ರಾಣವಗೋಳ, ಎಂ.ಜಿ.ಪಾಟೀಲ, ಶಂಕರ ಗೋಕಾವಿ, ತುಕಾರಾಮ ಚವ್ಹಾಣ, ಆರ್.ಐ.ಬಿಸಗುಪ್ಪಿ, ವ್ಹಿ.ಎಂ.ಮಳ್ಳೂರ, ನಂದಾ ಧಾಮುನೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸರಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...