ಎಫ್-1: ಹ್ಯಾಮಿಲ್ಟನ್ ಆರನೇ ಬಾರಿ ಚಾಂಪಿಯನ್

0
3

ಮಾಸ್ಕೊ:-ಯುಎಸ್ ಗ್ರ್ಯಾಂಡ್ ಪ್ರಿ ಫಲಿತಾಂಶದ ಬಳಿಕ ಸ್ಟಾರ್ ಚಾಲಕ್ ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರು ವೃತ್ತಿ ಜೀವನದಲ್ಲಿ ಆರನೇ ಬಾರಿಗೆ ಫಾರ್ಮುಲಾ ಒನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
ಹ್ಯಾಮಿಲ್ಟನ್ ಅವರು ಸತತ ಮೂರನೇ ವರ್ಷ ಹ್ಯಾಮಿಲ್ಟನ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಹ್ಯಾಮಿಲ್ಟನ್ ಅವರು ಅರ್ಜೆಂಟೀನಾದ ಜುವಾನ್ ಮ್ಯಾನುಯೆಲ್ ಅವರ ಸಾಧನೆಯನ್ನು ಅಳಿಸಿ ಹಾಕಿದ್ದಾರೆ. ಇವರು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಪಟ್ಟಿಯಲ್ಲಿ ಜರ್ಮನಿಯ ಮೈಕೆಲ್ ಶೂಮೇಕರ್ ಮೊದಲಿಗರಾಗಿ ಕಾಣಿಸಿಕೊಳ್ಳಲಿದ್ದು, ಏಳು ಬಾರಿ ಚಾಂಪಿಯನ್ ಪಟ್ಟ ಅಲಂಕಿರಿಸಿದ್ದರು.
ಯು.ಎಸ್ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಫಿನ್ ಲ್ಯಾಂಡ್ ನ ವಾಲ್ಟೆರಿ ಬಾಟಾಸ್ ಮೊದಲ ಸ್ಥಾನವನ್ನು ಅಲಂಕರಿಸಿದರು. ಇವರು ನಿಗದಿತ ಲ್ಯಾಪ್ ಗಳನ್ನು 1 ಗಂಟೆ 33 ನಿಮಿಷ 55.653 ಸೆಕೆಂಡ್ ಗಳಲ್ಲಿ ದೂರವನ್ನು ಕ್ರಮಿಸಿದರು. ಎರಡನೇ ಸ್ಥಾನವನ್ನು ಹ್ಯಾಮಿಲ್ಟನ್ ಪಡೆದರೆ, ಬೆಲ್ಜಿಯಂನ ಮ್ಯಾಕ್ಸ್ ವರ್ಸ್ಟಪ್ಪೆನ್ ಮೂರನೇ ಸ್ಥಾನ ಪಡೆದರು.
ಹ್ಯಾಮಿಲ್ಟನ್ ಆರು ವಿಶ್ವ ಪ್ರಶಸ್ತಿಗಳಲ್ಲಿ ಐದು (2014, 2015, 2017, 2018 ಮತ್ತು 2019) ಗೆದ್ದಿದ್ದಾರೆ.

loading...