ಎರಡನೇ ಹಂತದ ಚುನಾವಣೆ: ಶೇ.೧೬ರಷ್ಟು ಅಭ್ಯರ್ಥಿಗಳು ಅಪರಾಧಿ ಹಿನ್ನಲೆಯವರು

0
2

ಕೋಲ್ಕತ್ತಾ:-ಇದೇ ೧೮ರಂದು ಲೋಕಸಭೆಗೆ ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಒಟ್ಟು ೧೫೯೦ ಅಭ್ಯರ್ಥಿಗಳ ಪೈಕಿ ಕನಿಷ್ಠ ೨೫೧ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂಬ ಸಂಗತಿಯನ್ನು ಕೋಲ್ಕತಾದ ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ (ಎಡಿಆರ್) ಬಹಿರಂಗ ಪಡಿಸಿದೆ.
ಒಟ್ಟಾರೆ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳ ಪೈಕಿ ಶೇ.೧೬ ರಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ ಎಂಬ ಸಂಗತಿ ಬೆಳಕಿದೆ ಬಂದಿದೆ. ಪ್ರಜಾಪ್ರಭುತ್ವ ಸುಧಾರಣೆಗೆ ಮುಂದಾಗಿರುವ ಸಂಸ್ಥೆ ಒಟ್ಟು ೧೬೪೪ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಪೈಕಿ ೧೫೯೦ ಪ್ರಮಾಣಪತ್ರಗಳನ್ನು ಪರಿಶೀಲಿಸಿ, ವಿಶ್ಲೆÃಷಣೆಗೆ ಮಾಡಿ ಈ ಮಾಹಿತಿಯನ್ನು ಹೆಕ್ಕಿ ತೆಗೆದಿದೆ.
೧೫೯೦ ಅಭ್ಯರ್ಥಿಗಳಲ್ಲಿ ಕನಿಷ್ಠ ೨೫೧ ಶೇ.೧೬ ರಷ್ಟು ಮಂದಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ೧೫೯೦ರಲ್ಲಿ ೧೬೭ ಶೇ.೧೧ರಷ್ಟು ಅಭ್ಯರ್ಥಿಗಳು ಜನರು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ. ಕನಿಷ್ಠ ೩ ಅಭ್ಯರ್ಥಿಗಳು ತಮ್ಮನ್ನು ತಪ್ಪಿತಸ್ಥರೆಂದು ಘೋಷಿಸಿಕೊಂಡಿದ್ದಾರೆ. ಕೊಲೆಗೆ ಸಂಬಂಧಿಸಿದ ಪ್ರಕರಣವನ್ನು ೬ ಅಭ್ಯರ್ಥಿಗಳು ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ೨೫ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂಬ ಅಂಶ ಬಹಿರಂಗ ಪಡಿಸಲಾಗಿದೆ.
ದ್ವೆÃಷದ ಮಾತುಕತೆಗೆ ಸಂಬಂಧಿಸಿದಂತೆ ೧೫ ಮಂದಿ ಅಭ್ಯರ್ಥಿಗಳನ್ನು ತಮ್ಮವಿರುದ್ಧ ದಾಖಲಾಗಿವೆ ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿಯಿಂದ ೨೩ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ನಿಂದ ೧೬ ಅಭ್ಯರ್ಥಿಗಳು ಮತ್ತು ಬಿಎಸ್ ಪಿಯಿಂದ ೩ ಹಾಗೂ ಅಣ್ಣಾಡಿಎಂಕೆಯಿಂದ ೧೧ ಡಿಎಂಕೆಯಿಂದ ೪ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾದ ಪ್ರಕರಣ ಮಾಹಿತಿಯನ್ನು ಪ್ರಮಾಣ ಪತ್ರದಲ್ಲಿ ಬಹಿರಂಗ ಪಡಿಸಿದ್ದಾರೆ
ಎರಡನೆ ಹಂತದದಲ್ಲಿ ೯೭ ಕ್ಷೆÃತ್ರಗಳ ಪೈಕಿ ೪೧ ಕ್ಷೆÃತ್ರಗಳು ಅತಿ ಸೂಕ್ಷವೆಂದು ಘೋಷಿಸಲಾಗಿದೆ ಅತಿಸೂಕ್ಷ÷್ಮ ಲೋಕಸಭಾ ಕ್ಷೆÃತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ನಾಲ್ಕು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂಬುದನ್ನೂ ಪ್ರಮಾಣಪತ್ರದ ಮೂಲಕ ಘೋಷಣೆ ಮಾಡಿಕೊಂಡಿದ್ದಾರೆ.

loading...