ಐನಾಕ್ಸ್ ಚಿತ್ರಮಂದಿರ ಸೀಜ್ ಮಾಡಿದ ಎಸಿ ಕವಿತಾ

0
1199

ಕನ್ನಡಮ್ಮ ಸುದ್ದಿ
ಬೆಳಗಾವಿ:18 ಐನಾಕ್ಸ್ ಮಾಲ್‍ನಲ್ಲಿ ಚಿತ್ರ ನೋಡಲು ಬರುವ ಪ್ರೇಕ್ಷರಿಂದ ದುಬಾರಿ ರದದಲ್ಲಿ ನೀರಿನ ಬಾಟಲ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಉಪವಿಭಾಗಿಯ ಅಧಿಕಾರಿ ಕವಿತಾ ಯೋಗಪ್ಪನವರ ಐ ನಾಕ್ಸ್ ಮೇಲೆ ದಾಳಿ ನಡೆಸಿ ಚಿತ್ರ ಮಂದಿರವನ್ನು ಸೀಜ್ ಮಾಡಿದ್ದಾರೆ.
ಐನಾಕ್ಸ್ ಮಾಲ್‍ನಲ್ಲಿ 20 ರೂ. ಬೆಲೆ ಇರುವ ಕುಡಿಯುವ ನೀರಿನ ಬಾಟಲ್‍ನ್ನು ಪ್ರೇಕ್ಷಕರಿಂದ 50 ರೂ,ಗಳ ವರೆಗೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯೊಂದಿಗೆ ತಹಶಿಲ್ದಾರ ಗಿರೀಶ ಸ್ವಾಧಿ ನೇತೃತ್ವದಲ್ಲಿ ಎಸಿ ಅವರು ದಾಳಿ ಮಾಡಿ ಸೀಜ್ ಮಾಡಿದ್ದಾರೆ.

loading...