ಐಫಾ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದ ಶ್ರೀದೇವಿ

0
21

ಬ್ಯಾಂಕಾಂಕ್ : ಬ್ಯಾಂಕಾಂಕ್‍ನಲ್ಲಿ ನಡೆದ ವರ್ಣರಂಜಿತ ಐಫಾ (ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು) ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಹಿರಿಯ ಅಭಿನೇತ್ರಿ ದಿವಂಗತ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಾಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇರ್ಫಾನ ಖಾನಗೆ ಶ್ರೇಷ್ಠ ನಟ ಗೌರವಕ್ಕೆ ಭಾಜನರಾಗಿದ್ದಾರೆ. ವಿದ್ಯಾಬಾಲನ್ ಅಭಿನಯದ ತುಮ್ಹಾರಿ ಸುಲು ಉತ್ತಮ ಚಲನಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ. 500ಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗ ಗಮನಾರ್ಹ ಕೊಡುಗೆ ನೀಡಿದ ಹಿರಿಯ ನಟ ಅನುಪಮ್ ಖೇರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂತಾರಾಷ್ಟ್ರೀಯ ಪ್ರವಾಸಿ ತಾಣ ಬ್ಯಾಂಕಾಂಕ್ನ ಸಿಯಾಮಿ ನಿರಾಮಿತ್ ಥಿಯೇಟರ್ನಲ್ಲಿ ಬಾಲಿವುಡ್ನ ಬೃತಹ್ ಪ್ರಶಸ್ತಿ ಪುರಸ್ಕಾರ ಸಮಾರಂಭಗಳಲ್ಲಿ ಒಂದಾದ ಐಫಾ ಅವಾರ್ಡ್ ಸೆರೆಮನಿ ನಡೆಯಿತು. ಕಳೆದ ರಾತ್ರಿ ಟಿವಿಯಲ್ಲಿ ಪ್ರಸಾರವಾದ ಈ ಅದ್ಧೂರಿ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು.
ಅಕಾಲಿಕ ವಿಧಿವಶರಾದ ದಿವಂಗತ ಶ್ರೀದೇವಿ, ಶಶಿಕಪೂರ್ ಮತ್ತು ವಿನೋದ್ ಖನ್ನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭಾವಪೂರ್ಣ ಕಾರ್ಯಕ್ರಮದಿಂದ 20 ವರ್ಷಗಳ ನಂತರ ಹಿರಿಯ ಅಭಿನೇತ್ರಿ ರೇಖಾ ಅವರು ವೇದಿಕೆಯಲ್ಲಿ ಆಕರ್ಷಕ ನೃತ್ಯದ ಮೂಲಕ ಅನೇಕ ಸ್ಮರಣೀಯ ಸಂಗತಿಗಳಿಗೆ ಈ ಪ್ರಶಸ್ತಿ ಸಮಾರಂಭ ಸಾಕ್ಷಿಯಾಯಿತು.
ಮಾಮ್ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಹಾಗೂ ಹಿಂದಿ ಮೀಡಿಯಂ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಇರ್ಫಾನ್ ಖಾನ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಮ್ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಜೀವತುಂಬಿ ನಟಿಸಿದ ನವಾಜುದ್ಧೀನ್ ಸಿದ್ಧಿಖಿ ಅವರಿಗೆ ಅತ್ಯುತ್ತಮ ಪೋಷಕ ಕಲಾವಿದ ಪುರಸ್ಕಾರ ನೀಡಲಾಯಿತು.
ಕೊಂಕಣ್ ಸೇನ್ ಶರ್ಮಾ ಉದಯೋನ್ಮುಖ ನಿರ್ದೇಶಿಕ ಪ್ರಶಸ್ತಿ ಪಡೆದರೆ, ಮೋಹಕ ನಟಿ ಕೃತಿ ಸನೋನ್ ಐಫಾ ಸ್ಟೈಲಿಷ್ ಐಕಾನ್ ಪುರಸ್ಕಾರಕ್ಕೆ ಪಾತ್ರರಾದರು. ಜಗ್ಗ ಜಾಸೂಸ್ ಸಿನಿಮಾದ ಹಿನ್ನೆಲೆ ಸಂಗೀತಕ್ಕಾಗಿ ಪ್ರೀತಂ ಬೆಸ್ಟ್ ಬ್ಯಾಕ್ಗ್ರೌಂಡ್ ಸ್ಕೋರ್, ಬರೇಲಿ ಕಿ ಬರ್ಫಿ ಚಿತ್ರಕ್ಕಾಗಿ ನಿತೇಶ್ ತಿವಾರಿ ಮತ್ತು ಶ್ರೇಯ ಜೈನ್ ಅತ್ಯುತ್ತಮ ಚಿತ್ರಕಥೆ, ಶುಭ್ ಮಂಗಲ್ ಸಾವಧಾನ್ ಸಿನಿಮಾಕ್ಕಾಗಿ ಹಿತೇಷ್ ಕೆವಲ್ಯ ಶ್ರೇಷ್ಠ ಸಂಭಾಷಣೆಕಾರ ಪ್ರಶಸ್ತಿ, ಜಗ್ಗ ಜಾಸೂಸ್ ಚಿತ್ರದಲ್ಲಿನ ಗಲ್ತಿ ಸೇ ಮಿಸ್ಟೆಕ್ಟ್ ಹಾಡಿನ ನೃತ್ಯ ಸಂಯೋಜನೆಗಾಗಿ ವಿಜಯ್ ಗಂಗೂಲಿ ಮತ್ತು ರ್ಯೂಲಿ ದೌಸನ್ ವರಿಂಧಾನಿ ನೃತ್ಯ ನಿರ್ದೇಶನ ಪ್ರಶಸ್ತಿಗಳನ್ನು ಗಳಿಸಿದರು.
ಇತರ ಪ್ರಶಸ್ತಿ-ಪುರಸ್ಕಾರಗಳು :
ಅತ್ಯುತ್ತಮ ಛಾಯಾಗ್ರಹಣ-ಮರ್ಸಿನ್ ಲಾಸ್ಕಾವೀಕ್(ಟೈಗರ್ ಝಿಂದಾ ಹೈ)
ಅತ್ಯುತ್ತಮ ಸಂಕಲನ-ಶ್ವೇತಾ ವೆಂಕಟ್ ಮಾಥ್ಯೂ(ನ್ಯೂಟನ್)
ಅತ್ಯುತ್ತಮ ಗೀತರಚನೆ – ನಸ್ರತ್ ಫತೇ ಅಲಿ, ಎ-1 ಮೆಲೊಡಿಯ ಫನಾ ಮತ್ತು ಮನೋಜ್ ಮುಂಟಾಸಿರ್ (ಸಿನಿಮಾ ಬಾದ್ಶಾಹೂ, ಹಾಡು-ಮೆರೆ ರಕ್ಷೆ ಕಾಮರ್)
ಅತ್ಯುತ್ತಮ ಗಾಯಕ-ಅರಿಜಿತ್ ಸಿಂಗ್(ಸಿನಿಮಾ ಜಬ್ ಹ್ಯಾರಿ ಮೆಟ್ ಸೆಜಲ್, ಹಾಡು ಹವಾಯೀನ್), ಅತ್ಯುತ್ತಮ ಗಾಯಕಿ-ಮೇಘನಾ ಮಿಶ್ರಾ (ಸಿನಿಮಾ ಸೀಕ್ರೆಟ್ ಸೂಪರ್ಸ್ಟಾರ್, ಹಾಡು ಮೇ ಕೌನ್ ಹೂನ್), ಧ್ವನಿ ವಿನ್ಯಾಸ-ದಿಲೀಪ್ ಸುಬ್ರಹ್ಮಣ್ಯಂ ಮತ್ತು ಗಣೇಶ್ ಗಂಗಾಧರನ್(ವೈಆರ್ಎಫ್ ಸ್ಟುಡಿಯೋಸ್)-ಟೈಗರ್ ಝಿಂದಾ ಹೈ ಹಾಗೂ ಸ್ಪೆಷಲ್ ಎಫ್ಟೆಕ್ಸ್-ಎನ್ವೈ ವಿಎಫ್ಎಕ್ಸ್ ವಾಲಾ(ಪ್ರಸಾದ್ ವಸಂತ್ ಸುತರ್)-ಜಗ್ಗ ಜಾಸೂಸ್.

loading...