ಒಂದು ತಿಂಗಳೊಳಗೆ ಪತನಗೂಳಲ್ಲಿರುವ ಕುಮಾರಸ್ವಾಮಿಯ ಸರ್ಕಾರ

0
22

ಮಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇನ್ನು 15ರಿಂದ ಒಂದು ತಿಂಗಳೊಳಗೆ ಸರ್ವಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಖಾರವಾಗಿ ನುಡಿದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಜನರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ಮಾಡಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸುವುದಕ್ಕೋಸ್ಕರ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸ್ವಾರ್ಥ ರಾಜಕಾರಣಿಗಳು. ಅಧಿಕಾರ ಹಿಡಿಯಲು ಯಾವುದೇ ಅಡ್ಡದಾರಿ ಹಿಡಿಯಲು ಸಹ ಸಿದ್ಧರಾಗಿದ್ದಾರೆ ಎಂದು ಕಿಡಿಕಾರಿದರು.
ಮೇಲಿನವರ ಒತ್ತಾಯಕ್ಕೆ ಮಣಿದು ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ರಚನೆಗೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಆಗಲೇ ಅವರು ಸ್ವಲ್ಪ ದಿನಗಳಲ್ಲಿ ಸರ್ಕಾರ ಬೀಳಿಸುವ ಬಗ್ಗೆ ಚಿಂತನೆ ಮಾಡಿದ್ದರು. ಅದು ಈಗ ಸಾಬೀತಾಗಿದೆ ಎಂದ ಅವರು, ಮುಂದಿನ 15 ರಿಂದ ಒಂದು ತಿಂಗಳೊಳಗೆ ಸರ್ಕಾರ ಪತನವಾಗಲಿದೆ. ಅದಕ್ಕಾಗಿ ಬಿಜೆಪಿಯನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು .

loading...