ಕಂದಾಯ ಅದಾಲತ್ ಹಾಗೂ ಲೋಕ ಅದಾಲತ್

0
76

24 SGN 02 (2)ಶಿಗ್ಗಾವಿ,25: ಕಂದಾಯ ಅದಾಲತ್, ಕಾನೂನು ಅರಿವು ನೆರವು ಹಾಗೂ ಲೋಕ ಅದಾಲತ್ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸ್ನೇಹ, ಬಾಂಧವ್ಯ, ಹಾಗೂ ಸಹಬಾಳ್ವೆ ನಡೆಸುವಂತೆ ಸ್ಥಳಿಯ ನ್ಯಾಯಾಲಯದ ನ್ಯಾಯಾಧೀಶರಾದ ಮಮತಾ.ಡಿ ಗ್ರಾಮಸ್ಥರಿಗೆ ತಿಳಿಸಿದರು.
ಮಂಗಳವಾರ ತಾಲೂಕಿನ ಕಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ದುಂಡಸಿ ಹೋಬಳಿ ಆರ್.ಟಿ.ಸಿ. ತಿದ್ದುಪಡಿ ಆಂದೋಲನ, ಕಂದಾಯ ಅದಾಲತ್, ಕಾನೂನು ಅರಿವು ನೆರವು ಹಾಗೂ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆಕಾರಬಂದ, ಪಹಣಿ, ವಿಸ್ತೀರ್ಣ, ಎ ಕರಾಬ,ಬಿ ಕರಾಬ, ವಿಸ್ತೀರ್ಣ ಹೊಂದಾಣಿಕೆ, ಉಳಿಕೆ ಆಸ್ಥಿ ವಿಸ್ತೀರ್ಣ ಹೊಂದಾಣಿಕೆ ಇಲ್ಲದಿದ್ದರೆ, ಸರ್ವೆ ನಂಬರ್ ಪ್ರಕರಣಗಳು, ಆಕಾರ ಬಂದ ಮತ್ತು ಪಹಣಿಯ ಕಾಲಂ ನಂ 3 ವಿಸ್ತೀರ್ಣ ತಾಳೆಮಾಡಿ ಕಾಲಂ 9ರ ವ್ಯತ್ಯಾಸಗಳು, ವ್ಯತ್ಯಾಸಗಳನ್ನು ಸರ್ವೆ ನಂ ಸಂಖ್ಯೆ ಪೋಡಿಯಾದರೂ ಪಹಣಿಯಲ್ಲಿ ಇಂಡಿಕರಣವಾಗದಿರುವ ಪ್ರಕರಣಗಳು, ಪಹಣಿಯಲ್ಲಿ ಕಾಲಂ 9 ಮತ್ತು 12ಕ್ಕೆ ಸಮನ್ವಯಗೊಳಿಸುವದು, ಪಹಣಿಯಲ್ಲಿ 9 ರಲ್ಲಿನ ಹೆಸರುಗಳ ತಪ್ಪುಗಳು, ಖಾತೆದಾರರು ಪೋತಿಯಾದರು ವಾರಸುದಾರರಿಗೆ ಪೋತಿ ಖಾತೆ ಮಾಡದಿರುವದು, 2006ನೇ ಸಾಲಿನ ಹಿಂದೆ ಜಮೀನು ಕ್ರಯವಾಗಿದ್ದರು ಕ್ರಯಪತ್ರವಿದ್ದರು ಕ್ರಯ ಖಾತೆಯಾಗದೆ ಬಾಕಿ ಇರುವ ಪ್ರಕರಣಗಳು, ಬೆಳೆ ವಿವರಗಳ ಇಂಡಿಕರಣ, ಹೆಸರುಗಳ ಕಾಗುಣಿತ ತಪ್ಪುಗಳು ಇವುಗಳ ಕುರಿತು ಅರ್ಜಿ ಸಲ್ಲಿಸಿ ಸರಿಪಡಿಸಿಕೊಂಡು ತಂಟೆ ತಕರಾರುಗಳಿರದ ಸುಂದರ ಬದುಕು ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶಿಲ್ದಾರ ಕೆ.ಎಮ್. ಸ್ವಾದಿ ಮಾತನಾಡಿದರು. ಶಿರಸ್ತೇದಾರ ರವಿ ಕೊರವರ ಒಟ್ಟು ಎಂಟು ಪ್ರಕರಣಗಳ ಅರ್ಜಿ ಬಂದಿದ್ದು ಅದರಲ್ಲಿ ಮೂರು ಪ್ರಕರಣಗಳು ಇತ್ಯರ್ಥವಾಗಿರುವದಾಗಿ ತಿಳಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕುರ್ಡಿಕೇರಿ ಗ್ರಾಮದ ಹಿರಿಯರು ವೇದಿಕೆಲ್ಲಿದ್ದರು.
ಕಂದಾಯ ಇಲಾಖೆ ಬಸವರಾಜ ಹೊಂಕಣದವರ, ರಾಜಶೇಖರ ಎಲಿ, ಸಜ್ಜನ, ನ್ಯಾಯಾಲಯ ಸಿಬ್ಬಂದಿ ಎಚ್.ವಾಯ್.ಮುಳಗುಂದ, ಸಿದ್ದಣ್ಣ ಕೊಣ್ಣೂರ, ನಿರಂಜನ, ಪೋಲಿಸ ಇಲಾಖೆ ಸಿಬ್ಬಂದಿ ಮುಳಗುಂದಮಠ ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here