ಕಡಿಮೆ ಬೆಲೆಗೆ ಸಿಗುತ್ತೆ ರೆಸ್ಟೋರೆಂಟ್ ನಲ್ಲಿ ಮಿಕ್ಕ ಆಹಾರ

0
31

ಇಂಗ್ಲೆಂಡ್ ನಲ್ಲಿ ಆಹಾರ ಹಾಳಾಗದಂತೆ ತಡೆಯಲು ವಿನೂತನ ಕಾರ್ಯವೊಂದು ಶುರುವಾಗಿದೆ. ಆಡಮ್ ಸ್ಮಿತ್ ಹಾಗೂ ಜೋ ಹರ್ಕ್ಬರ್ಗ್ ಎಂಬ ಇಬ್ಬರು ವ್ಯಕ್ತಿಗಳು ಜಂಕ್ ಫುಡ್ ಸ್ಟೋರ್ ಚೈನ್ ಶುರು ಮಾಡಿದ್ದಾರೆ. ರೆಸ್ಟೋರೆಂಟ್ ನಲ್ಲಿ ಉಳಿದ ಆಹಾರವನ್ನು ಈ ಮಳಿಗೆಗೆ ತರಲಾಗುತ್ತದೆ.

ಅಗತ್ಯವಿರುವವರು ಕಡಿಮೆ ಬೆಲೆಗೆ ಈ ಆಹಾರವನ್ನು ಖರೀದಿ ಮಾಡುತ್ತಾರೆ. ಹಣ್ಣು, ತರಕಾರಿ, ಬ್ರೆಡ್, ಕೇಕ್ ಹಾಗೂ ಚಿಕನ್ ಸೇರಿದಂತೆ ಎಲ್ಲ ರೀತಿಯ ಆಹಾರ ಸಿಗುತ್ತದೆ. ಇದೊಂದು ಸಣ್ಣ ಸೂಪರ್ ಮಾರ್ಕೆಟ್ ನಂತೆ ಕೆಲಸ ಮಾಡುತ್ತಿದೆ. ದಿ ರಿಯಲ್ ಜಂಕ್ ಫುಡ್ ಪ್ರಾಜೆಕ್ಟ್ ಎಂದು ಹೆಸರಿಡಲಾಗಿದೆ.

ಸೋಮವಾರದಿಂದ ಶನಿವಾರದವರೆಗೆ ಎರಡು ಗಂಟೆಗಳ ಕಾಲ ಮಾತ್ರ ಇದ್ರ ಬಾಗಿಲು ತೆರೆದಿರುತ್ತದೆ. ಮಳಿಗೆ ಬಾಗಿಲು ತೆರೆಯುವ ಮೊದಲೇ ಖರೀದಿದಾರರು ಕ್ಯೂ ನಿಲ್ಲುತ್ತಾರೆ. ಹೆಚ್ಚು ಸಾಮಗ್ರಿ ಬಂದಿದೆ ಎಂಬ ಸುದ್ದಿ ಮಳಿಗೆ ಬಾಗಿಲು ತೆರೆಯುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ.ಇದನ್ನು ನೋಡಿ ಮಳಿಗೆಗೆ ಬರುವ ಜನರು 10-15 ನಿಮಿಷದಲ್ಲಿ ಮಳಿಗೆ ಖಾಲಿ ಮಾಡ್ತಾರೆ.

ತಿನ್ನಲು ಯೋಗ್ಯವಾದ ಆಹಾರವನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಆದ್ರೆ ಸೂಪರ್ ಮಾರ್ಕೆಟ್ ಗುಣಮಟ್ಟದಲ್ಲಿರುವುದಿಲ್ಲ. 2016 ರಲ್ಲಿ ಮೊದಲ ಮಳಿಗೆ ಶುರುವಾಗಿದ್ದು ಈಗ ಇಂಗ್ಲೆಂಡ್ ನಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿದ್ದಾರೆ ಸ್ನೇಹಿತರು.

loading...