ಕಡುಬಡವರಿಗೆ ಸರಕಾರದ ಯೋಜನೆಗಳು ತಲುಪಲಿ: ಸಚಿವ ಜಾರಕಿಹೊಳಿ

0
53

ಬೆಳಗಾವಿ:21 ಮಹಾನಗರ ಪಾಲಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರು ರಾಜ್ಯ ಸರ್ಕಾರದ ಸೌವಲತ್ತುಗಳನ್ನು ಕಡು ಬಡವರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಅವರು ರವಿವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಪಾಲಿಕೆಯಿಂದ ಏರ್ಪಡಿಸಿದ್ದ ಎಸ್ಸಿ,ಎಸ್ಟಿ ಮತ್ತು ಹಿಂದುಳಿದ ವರ್ಗದವರಿಗೆ ಚೆಕ್ ವಿತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಡು ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಅನುದಾನವನ್ನು ಕಾಯ್ದಿರಿಸಿದೆ. ಈ ಹೀಗೆ ಸರ್ಕಾರದ ಸೌವಲತ್ತುಗಳನ್ನು ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಕಡು-ಬಡವರಿಗೆ ದೊರೆಯುವಂತೆ ಶ್ರಮಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಫಿರೋಜ್ ಸೇಠ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡವರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಸಚಿವ ಜಾರಕಿಹೊಳಿ ಅವರ ಸೂಚನೆಯಂತೆ ಎಸ್ಸಿ,ಎಸ್ಟಿ ಮತ್ತು ಒಬಿಸಿ ವರ್ಗದವರಿಗೆ ಪ್ರಸಕ್ತ ವರ್ಷದ ಸೌಲಭ್ಯಗಳು ದೊರೆಯುವಂತಾಗಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಜಿ.ಪ್ರಭು ಮಾತನಾಡಿ, ಪಾಲಿಕೆಯಿಂದ ಇವತ್ತು ಎಸ್ಸಿ,ಎಸ್ಟಿ ಶೇ.24.10ರಷ್ಟು ಅನುದಾನ, ಬಡಜನರಿಗಾಗಿ ಶೇ.7.25ರಷ್ಟು ಅನುದಾನ ಹಾಗೂ ವಿಕಲಚೇತನರ ಶೇ.3ರಷ್ಟು ಅದುನಾದಲ್ಲಿ ಒಟ್ಟು 1274 ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರಲ್ಲಿ ಅಡುಗೆ ಅನಿಲ, ಶೌಚಾಲಯ, ಸ್ವಯಂ ಉದ್ಯೋಗಕ್ಕೆ ಸಹಾಯ ಧನ ಕ್ರೀಡಾ ಸಾಧಕರಿಗೆ ಒಟ್ಟು 1.18 ಕೋಟಿ ಮೊತ್ತದ ಸೌವಲತ್ತುಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ 5.50 ಕೋಟಿ ಅನುದಾನದಲ್ಲಿ 3500 ಅರ್ಹಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಪಾಲಿಕೆಯಿಂದ ಒದಗಿಸಲು ಬದ್ಧರಾಗಿz್ದÉೀವೆ ಎಂದು ತಿಳಿಸಿದರು.
ಅತಿಥಿಗಳಾಗಿ ಮೇಯರ್ ಕಿರಣ ಸಾಯಿನಾಕ್, ಉಪ ಮೇಯರ್ ಮೀನಾ ವಾಜ್ ಆಗಮಿಸಿದ್ದರು. ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ಜಯಶ್ರೀ ಮಾಳಗಿ, ಅಧಿಕಾರಿಗಳಾದ ಆರ್.ಎಸ್. ನಾಯಕ, ಲಕ್ಷ್ಮಿ ನಿಪ್ಪಾಣಿಕರ, ಉದಯಕುಮಾರ ತಳವಾರ, ಡಾ. ಶಶಿಧರ ನಾಡಗೌಡ ಸೇರಿದಂತೆ ಮೊದಲಾದವರು ಇದ್ದರು.

=>

ಇಂದಿನಿಂದ ಕಡತ ವಿಲೇವಾರಿ ಮಾಸಾಚರಣೆ

ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಹಾನಗರ ಪಾಲಿಕೆಯಲ್ಲಿ ಫೆ.22 ರಿಂದ ಒಂದು ತಿಂಗಳುಗಳ ಕಾಲ ಕಡತ ವಿಲೇವಾರಿ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಜಿ.ಪ್ರಭು ಹೇಳಿದರು.
ಈಗಾಗಲೇ ಬೆಳಗಾವಿ ಸ್ಮಾರ್ಟಿ ಸಿಟಿಗೆ ಆಯ್ಕೆಯಾಗಿದ್ದು, ಬೆಳಗಾವಿ ನಗರಕ್ಕೆ ಸಿಎಂ ಅವರ ವಿಶೇಷ ಅನುದಾನ ಸಹ ಹರಿದು ಬರುತ್ತಿದೆ. ಹೀಗಾಗಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವುದಕ್ಕಾಗಿ ಕಡತ ವಿಲೇವಾರಿ ಮಾಸಾಚರಣೆ ಆಚರಿಸಲಾಗುತ್ತಿದೆ.

loading...

LEAVE A REPLY

Please enter your comment!
Please enter your name here