ಕಣಕುಂಬಿ ಬಳಿ ರಸ್ತೆ ಅಪಘಾತ: ಮೂವರ ದುರ್ಮರಣ

0
29

ಖಾನಾಪುರ 26: ತಾಲೂಕಿನ ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿಯ ಕಣಕುಂಬಿ ಬಳಿ ಗೋವಾರದಿಂದ ಬೆಳಗಾವಿಯತ್ತ ವೇಗವಾಗಿ ಸಾಗುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.
ಅಪಘಾತದಲ್ಲಿ ಅಸುನೀಗಿದವರನ್ನು ಬೆಳಗಾವಿ ಹುಲಬತ್ತಿ ಕಾಲನಿ ನಿವಾಸಿ ಜೀತೇಶ್ ಮನೀಷ್ ಚಿಂಚಣಿಕರ (21), ಇವರ ಸಂಬಂಧಿ ಬೆಳಗಾವಿ ಶಹಾಪುರದ ಮೀರಾಪುರ ಗಲ್ಲಿ ನಿವಾಸಿ ನಿತೀನ ಬಾಬು ಸುತಾರ (35) ಹಾಗೂ ಜೀತೇಶ್ ಸ್ನೇಹಿತ ಆನಂದವಾಡಿ ನಿವಾಸಿ ಕುಂಜನ ವಿವೇಕ ಸಾವಂತ (20) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಜೀತೆಶ್ ತಮ್ಮ ಮನೆಯವರಿಗೆ ಗೋವಾ ಹೋಗಿ ಬರುವುದಾಗಿ ಹೇಳಿ ತನ್ನ ಕಾರಿನಲ್ಲಿ ನಿತೀನ ಹಾಗೂ ಕುಂಜನ ಅವರೊಂದಿಗೆ ತೆರಳಿದ್ದರು. ಗೋವಾದಿಂದ ಮರಳುವಾಗ ಕಣಕುಂಬಿಯಿಂದ 3 ಕಿಮೀ ಅಂತರದಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಎಡಬದಿಯ ಗಿಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here