ಕಣ್ಣುಗಳ ಸುರಕ್ಷತೆ ಬಗ್ಗೆ ಕಾಳಜಿ ಇರಲಿ : ರಾಜೇಂದ್ರ

0
17

ಕಣ್ಣುಗಳ ಸುರಕ್ಷತೆ ಬಗ್ಗೆ ಕಾಳಜಿ ಇರಲಿ : ರಾಜೇಂದ್ರ

ಕನ್ನಡಮ್ಮ ಸುದ್ದಿ- ರಾಮದುರ್ಗ: ಕಣ್ಣು ಮನುಷ್ಯರ ಪ್ರಮುಖವಾಗ ಅಂಗಗಳು ಅವುಗಳ ಸುರಕ್ಷತೆ ಮಾಡುವುದು ಮತ್ತು ಅವುಗಳ ಸಂರಕ್ಷಣೆ ಮಾಡುವುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕೆಂದು ಸರ್ಕಾರಿ ವೈದ್ಯಾಧಿಕಾರಿ ಡಾ| ರಾಜೇಂದ್ರ ಕಿಲಬನೂರ ತಿಳಿಸಿದರು.
ತಾಲೂಕಿನ ರೇವಡಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸನೆ ಹಾಗೂ ಉಚಿತ ನೊಟು ಬುಕ್ಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಟಿಮಿನ ಎ ಕೊರತೆಯಿಂದ ಮಕ್ಕಳಿಗೆ ಬಾಲ್ಯದಲ್ಲಿಯೇ ಕಣ್ಣಿನ ದೃಷ್ಟಿ ದೋಷ ಕಾಡುತ್ತಿದೆ ಎಂದರೆ ಅದಕ್ಕೆ ಸೇವನೆ ಮಾಡುವ ಆಹಾರದ ಪದ್ದತಿಯಿಂದ ದೃಷ್ಟಿದೋಷ ಕಂಡು ಬರುತ್ತಿದೆ ಮಕ್ಕಳು ಇದನ್ನು ತಡೆಗಟ್ಟಬೇಕಾದರೆ ಉತ್ತಮ ಆಹಾರ ಪದ್ದತಿಯನ್ನು ರೂಡಿ ಮಾಡಿಕೊಳ್ಳಬೇಕು, ಹಣ್ಣು ಹಾಲು, ತರಕಾರಿಯನ್ನು ಸೇವನೆ ಮಾಡಬೇಕು ಅಂದಾಗ ಕಣ್ಣಿನ ದೃಷ್ಟಿಯಿಂದ ಮುಕ್ತಿಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ನೂರಕ್ಕು ಹೆಚ್ಚು ನಾಗರಿಕರ ಕಣ್ನಿನ ತಪಾಷಣೆ ಮಾಡಲಾಯಿತು ನೇತ್ರ ಪರಿಕ್ಷಕರಾದ ಯರೇತಾತ ಕಂಬಾರ, ಪ್ರಬಾಕರ ಕಂಬಾರ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ ಎಸ್. ಕೊಟ್ರನ್ನವರ, ನಿಯೋಜಿತ ಅಧ್ಯಕ್ಷ ಬಿ.ಪಿ ಅರಳಿಮಟ್ಟಿ, ಧನಲಕ್ಷಿö್ಮÃ ಸಕ್ಕರೆ ಖಾರ್ಕಾನೆಯ ನಿರ್ದೇಶಕ ಗೀರಿಯಪ್ಪ ಹನಸಿ ಪದಾಧಿಕಾರಿಗಳಾದ ರವಿಂದ್ರ ಬಿಳಗಿ, ಎಸ್.ಡಿ.ಎಂಸಿ ಅಧ್ಯಕ್ಷ ಕುಮ್ಮವ್ವ ಬಾಳಿಕಾಯಿ, ರಮೇಶ ಹನಸಿ,ದ್ಯಾವಪ್ಪ ಜಾಳಿಹಾಳ, ಸೇರಿಂದತೆ ಉಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಂ ಎಸ್ ಜಂಗವಾಡ ಸ್ವಾಗತಿಸಿದರು, ಆರ್ ಎಸ್ ಪಿಟಗಿ ನಿರೂಪಿಸಿದರು, ಆಋ ಎಚ್, ಅಜಗುಂಡಿ ವಂದಿಸಿದರು.

loading...