ಕನಕದಾಸರ ಜಯಂತಿ : ವಿವಿಧ ಇಲಾಖೆಯ ಅಧಿಕಾರಿಗಳು ಗೈರು

0
11

ರಾಜ್ಯ ಸರಕಾರ ದಾಸ ಶ್ರೇಷ್ಠ ಕನಕದಾಸರ ಜಯಂತಿ ಉತ್ಸವವನ್ನು  ಸಾರ್ವತ್ರಿಕವಾಗಿ ಆಚರಿಸಬೇಕೆಂದು ಸರಕಶರದ ಸುತ್ತೌಲೆ ಇದ್ದರು ಸಹ ಚಿಕ್ಕೌಡಿಯಲ್ಲಿ ತಾಲೂಕಾಡಳಿತ ಜವಾಬ್ದಾರಿಯನ್ನು ಹೊತ್ತಿರುವ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸಿ.ನಾಟೀಕರ ಹಾಗೂ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಎಸ್.ಆರ್.ನೀಲಕಂಠಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಾಗದೇ ಗೈರು ಉಳಿದು ದಾಸಶ್ರೇಷ್ಠ ಕನಕ ದಾಸರಿಗೆ ಅವಮಾನವೇಸಗಿದ್ದಾರೆ.

ಸಮಾರಂಭದಲ್ಲಿ ಗೈರು ಹಾಜರಾದ ಅಧಿಕಾರಿಗಲ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ ರಮೇಶ ದೇಸಾಯಿ ಸರಕಾರಿ ಕಾರ್ಯಕ್ರಮದಲ್ಲಿ ಪ್ರತಿಯೋರ್ವ ಅಧಿಕಾರಿಯು ಸಹಭಾಗ ವಹಿಸುವುದು ಆದ್ಯ ಕರ್ತವ್ಯ. ಆದರೆ ಇಂತಹ ಒಂದು ದಾಸ ಶ್ರೇಷ್ಠ ಕನಕದಾಸರ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳದ ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಲಾಗುವುದು ಎಂದು ತಿಳಿಸಿದರು…

loading...

LEAVE A REPLY

Please enter your comment!
Please enter your name here