ಕನ್ನಡಭಾಷಾ ದಿನ ಆಚರಿಸುವಂತೆ ಕನಸೇ ಒತ್ತಾಯ

0
28

ಬೆಳಗಾವಿ
ಕೇಂದ್ರ ಸರ್ಕಾರ ಯಾವ ರೀತಿ ಹಿಂದಿ ದಿವಸ್ ಆಚರಣೆ ಮಾಡುತ್ತಿದೆಯೋ ಅದೇ ರೀತಿ ಅಂತರಾಷ್ಟ್ರೀಯ ಕನ್ನಡಭಾಷಾ ದಿನವನ್ನೂ ಆಚರಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಕೇಂದ್ರ ಅಂಚೆ ಕಚೇರಿ ಮುಂಭಾಗದಲ್ಲಿ ಅಂತರಾಷ್ಟ್ರೀಯ ಕನ್ನಡ ದಿನ ಆಚರಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು, ಅಂತರಾಷ್ಟ್ರೀಯ ಕನ್ನಡ ದಿನಾಚರಣೆಯ ಭಿತ್ತಿಪತ್ರವನ್ನು ಅಂಟಿಸಿ, ಅಂಚೆ ಇಲಾಖೆ ಅಧಿಕಾರಿಗಳಿಗೆ ಸಿಹಿ ವಿತರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡಿಸಿದರು.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಷ್ಮಾ ಯಾದವಾಡ ಸೇರಿದಂತೆ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

loading...