ಕನ್ನಡ ಧ್ವಜಕ್ಕೆ ಕ್ಯಾತೆ ತೆಗೆದ ಮರಾಠಿ ಬಿಸಿ ರಕ್ತದ ಯುವಕ ವಿತಂಡವಾದವೇ ಈತನಿಗೆ ಪ್ರಚೋದನೆ

0
380

ಕನ್ನಡಮ್ಮ ಸುದ್ದಿ
ಬೆಳಗಾವಿ:1 ಮರಾಠಿ ಬಿಸಿ ರಕ್ತದ ಯುವಕನ್ನೊಬ್ಬ ಕನ್ನಡಿಗರಿಗೆ ಈಗ ಸಡ್ಡು ಹೊಡೆದಿದ್ದಾನೆ. ಎಂಇಎಸ್ ಬೆಂಬಲಿತ ಸೂರಜ್ ಕಣಬರಕರ್ ಎಂಬ ಯುವಕ ಈಗ ಕನ್ನಡ ಮರಾಠಿ ಭಾಷಿಕರ ಮಧ್ಯೆ ಇಲ್ಲದ ಕೆಚ್ಚು ಹೊತ್ತಿಸಲು ಮುಂದಾಗಿದ್ದಾನೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಎದುರು ಹಾರಾಡುತ್ತಿರುವ ಕನ್ನಡ ಧ್ವಜವೇ ಈತನ ಗುರಿ. ಪ್ರಾದೇಶಿಕ ಆಯುಕ್ತರ ಕಚೇರಿಯ ಮೇಲೆ ಈಗಾಗಲೇ ರಾಷ್ಟ್ರ ಧ್ವಜ ಹಾರುಡುತ್ತಿದೆ. ಆದರೆ ಆಯುಕ್ತರ ಕಚೇರಿ ಎದುರಿಗೆ ಇರುವ ಕನ್ನಡ ಧ್ವಜ ಪ್ರಾದೇಶಿಕ ಮೇಲಿನ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗುತ್ತಿದೆ ಎನ್ನುವುದು ಇತನ ವಿತಂಡವಾದ ಈ ಬಗ್ಗೆ ಜಿಲ್ಲಾಡಳಿತ, ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಈತ ಈಗ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾನೆ.
ಪ್ರಾದೇಶಿಕ ಆಯುಕ್ತರ ಕಚೇರಿ ಎದುರಿಗಿನ ಎರಡು ಧ್ವಜಗಳ ಭಾವ ಚಿತ್ರಗಳನ್ನು ತನಗೆ ಬೇಕಾದಂತೆ ತೆಗೆದುಕೊಂಡಿದ್ದಾನೆ. ಈತ ತೆಗೆದಿರುವ ಬಾವ ಚಿತ್ರದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯ ಮೇಲಿನ ರಾಷ್ಟ್ರಧ್ವಜಕ್ಕಿಂತ ಕನ್ನಡ ಧ್ವಜ ಹಾರಾಡುವಂತೆ ಕಾಣಿಸುತ್ತಿದೆ. ನಿಜಕ್ಕೆ ಇದು ವಾಸ್ತವಕ್ಕಿಂತ ಬಿನ್ನವಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹೋಗಿ ಗಮನಿಸಿದರೇ ರಾಷ್ಟ್ರ ಧ್ವಜವೇ ಮೇಲ್ಮಟ್ಟದಲ್ಲಿ ಹಾರುತ್ತಿರುವುದನ್ನು ಯಾರಾದರು ಗಮನಿಸಬಹುದು. ಆದರೆ ವಾಸ್ತಾವಂಶವನ್ನು ತಿರುಚಿರುವ ಈ ಯುವಕ ಮರಾಠಿಗರ ಪಾಲಿಗೆ ಹೀರೋ ಆಗಲು ಬಯಸಿದ್ದಾನೆ.
ಕನ್ನಡ ಮರಾಠಿ ಭಾಷಿಕರ ನಡುವೆ ಹಲವು ಸಲ ವಿವಾದ ಎಬ್ಬಿಸಲು ಈ ಹಿಂದೆ ಕೆಲ ಕೃತ್ಯಗಳಲ್ಲಿ ಭಾಗಿಯಾಗಿರುವ ಘಟನೆಗಳಿವೆ. ಮರಾಠಿ ಮಾಧ್ಯಮಗಳು ಈತನನ್ನು ವೈಭವಿಕರಿಸುತ್ತಿರುವುದು ಈತನಿಗೆ ಮತಷ್ಟು ಪ್ರಚೋಧನೆಗೆ ಒಳಗಾಗುವಂತೆ ಮಾಡಿದೆ. ಬೆಳಗಾವಿ ಸದ್ಯ ಶಾಂತವಾಗಿದೆ. ಭಾಷಾ ವಿವಾದಗಳಿಂದ ಮುಕ್ತವಾಗಿದೆ.
ಸದ್ಯ ಭವಿಷ್ಯತ್ತಿನಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ಎದುರಾಗಲಿದೆ ಇದನ್ನೆಲ್ಲ ಗಮನಿಸಿ ಮುಂದಿನ ದಿನಗಳಲ್ಲಿ ವಿವಾದ ಗ್ರಸ್ತ ವಿಚಾರಗಳಿಗೆ ಎಂಇಎಸ್ ಬೆಂಬಲಿತರು ಪ್ರಚೋದನೆ ನೀಡುತ್ತಿದ್ದು, ಜಿಲ್ಲಾಡಳಿತ ಇಂಥ ಸೂಕ್ಷ್ಮ ನಡೆಗಳನ್ನು ಗಮನಿಸಬೇಕು. ನಾಡಧ್ವಜದಂಥ ಸೂಕ್ಷ್ಮ ವಿಷಯಗಳ ಮೂಲಕ ಭಾಷಾ ವಿವಾದ ಸೃಷ್ಠಿಸಲು ಹೊರಟಿರುವ ಸೂರಜ್ ಕಣಬರಕ ವಿರುದ್ಧ ಕನ್ನಡ ಸಂಘಟನೆಗಳು ಪೊಲೀಸ್ ಆಯುಕ್ತರಿಗೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವುದು ಬೆಳಗಾವಿ ಜನತೆಯ ಒತ್ತಾಯವಾಗಿದೆ.

loading...