ಕನ್ನಡ ನಾಡು ನುಡಿಗೆ ಧಕ್ಕೆಯಾದರೆ ಒಂದಿಂಚೂ ಜಾಗ ಸಿಗುವುದಿಲ್ಲ

0
24

ಕನ್ನಡ ಸಂಘಟನೆಗಳ ಸಭೆಯಲ್ಲಿ ಸಚಿವ ಪಾಟೀಲ ಎಚ್ಚರಿಕೆ
ಬೆಳಗಾವಿ 26: ಕನ್ನಡಿಗರು ಅನಾವಶ್ಯಕವಾಗಿ ಯಾರ ತಂಟೆಗೂ ಹೋಗುವುದಿಲ್ಲ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಹಾರಾಷ್ಟ್ರದವರು ಮತ್ತು ಎಂಇಎಸ್‍ನವರು ಕನ್ನಡಿಗರಿಗೆ ಹಾಗೂ ಕನ್ನಡ ನಾಡು ನುಡಿಗೆ ಧಕ್ಕೆಯುಂಟು ಮಾಡಿದರೆ ಒಂದಿಂಚೂ ಜಾಗ ಸಿಗುವುದಿಲ್ಲ ಹಾಗೂ ಸುಮ್ಮನೆ ಬಿಡುವವರಲ್ಲ ಎಂದು ಗಡಿ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವ ಎಚ್ ಕೆ ಪಾಟೀಲ ಎಚ್ಚರಿಕೆ ನೀಡಿದರು.
ಅವರು ಶನಿವಾರ ನಗರದ ನೂತನ ಜಿಲ್ಲಾ ಪಂಚಾಯಿತಿ ಸಭಾ ಭÀವನದಲ್ಲಿ ಏ.1 ರಂದು ಗಡಿ ವಿಚಾರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡ ಸಂಘಟನೆ, ಸಾಹಿತಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯ ಪಡೆದುಕೊಂಡ ಮಾತನಾಡಿದರು.
ಎಸ್‍ಆರ್‍ಸಿ ಕಮಿಟಿ ವರದಿಯಲ್ಲಿ ಗಡಿ ವಿಷಯ ಮುಗಿದ ಹೋದ ವಿಷಯ ಎಂದು ಅಂದಿನ ಮುಂಬೈ ರಾಜ್ಯ ಪರಿಷತ್ತಿನಲ್ಲಿ ಹೇಳಲಾಗಿದೆ. ಆದರೆ ತಮ್ಮ ಸ್ವಾರ್ಥಕ್ಕಾಗಿ ಗಡಿ ತಗಾದೆ ತೆಗೆಯುತ್ತಿದೆ. ಹೀಗೆ ಮುಂದುವರೆದರೆ ಕನ್ನಡಿಗರೆಲ್ಲರೂ ಹೃದಯ ಶ್ರೀಮಂತರು ಇವರಿಗೇನಾದರೂ ತೊಂದರೆಯಾದರೇ ನಾವು ಸುಮ್ಮನಿರುವುದಿಲ್ಲ. ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಲು ಹಾಗೂ ಗಡಿ ವಿಷಯಧÀ ಕುರಿತು ಚರ್ಚಿಸಲು ಎರಡು ಸುತ್ತಿನ ಸಭೆ ನಡೆಸಲಾಗಿದೆ. ಅಲ್ಲದೇ ಕನ್ನಡದ ಕೆಲವು ಹಿರಿಯ ಮುಖಂಡರ ಜೊತೆಯೂ ಸಭÉ ಮಾಡಲಾಗಿದೆ. ಒಟ್ಟಿನಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರದವರು ಅನಾವಶ್ಯಕವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾಧದ ಬಗ್ಗೆ ತಗಾದೆ ತೆಗೆದಿದ್ದಾರೆ. ಮಹಾಜನ ವರದಿ ಅನುಷ್ಠಾನವಾದರೆ ಎರಡೂ ಸರಕಾರಗಳು ಒಪ್ಪಿಗೆ ಸೂಚಿಸಬೇಕು ಎಂದು ಅಂದಿನ ನಾಯಕರು ಹೇಳಿದಾಗ ಎರಡೂ ಸರಕಾರಗಳು ಒಪ್ಪಿಗೆ ನೀಡಿದ್ದವು. ರಾಜಕೀಯ ದುರುದ್ದೇಶದಿಂದ ಮಹಾರಾಷ್ಟ್ರದಲ್ಲಿ ಚುನಾವಣೆ ಬಂದರೆ ಇಲ್ಲಿ ಬೆಳಗಾವಿಯಲ್ಲಿ ಗಲಾಟೆ ಮಾಡಿಸುತ್ತಿರುತ್ತಾರೆ. ಗಡಿವಿವಾದ ಮುಗಿದ ಹೋದ ಅಧ್ಯಾಯ. ಇದೇ ವಿಷಯವಿಟ್ಟುಕೊಂಡು ಮಹಾರಷ್ಟ್ರದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಷಯವನ್ನು ಕರ್ನಾಟಕದ ಪರವಾಗಿ ಸಂಬಂಧಪಟ್ಟವರಿಗೆ ಈಗಾಗಲೇ ಗಡಿ ವಿಷಯದ ಕುರಿತು ನಮ್ಮ ನಿಲುವನ್ನು ತಿಳಿಸಲಾಗಿದೆ. ಅಲ್ಲದೇ ಸಮರ್ಥವಾಗಿ ವಾದ ಮಂಡಿಸಲು ಬೇಕಾದ ಸಾಕ್ಷಾಧಾರಗಳು ನಮ್ಮಲ್ಲಿವೆ ಎಂದು ಎಚ್.ಕೆ.ಪಾಟೀಲ ಹೇಳಿದರು.
ಹಿರಿಯ ನ್ಯಾಯವಾದಿ ಜಿನದತ್ತ ದೇಸಾಯಿ ಮಾತನಾಡಿ, ರಾಜ್ಯದ ಸಂಸದರು ಗಡಿವಿಷ ಮುಗಿದ ಹೋದ ಅಧ್ಯಾಯವಾಗಿದೆ ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ. ಮಹಾಜನ ವರದಿಯಿಂದ ಕರ್ನಾಟಕಕ್ಕೆ ಲಾಭವಾಗವುದಕ್ಕಿಂತ ಹೆಚ್ಚು ನಷ್ಟವಾಗಿದೆ. ಕಾರಣ ಎಲ್ಲ ಸಂಸದರು ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಕೇಂದ್ರ ಸರಕಾರದ ಮೇಲೆ ಗಡಿ ವಿಷಯದ ಬಗ್ಗೆ ಒತ್ತಡ ಹೇರಬೇಕು ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಅನಂತಕುಮಾರ ನೇತೃತ್ವದಲ್ಲಿ ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಒತ್ತಡ ಹೆರಲಾಗಿದೆ. ಗಡಿ ವಿಷಯದಲ್ಲಿ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ಧರಿದ್ದು, ಪಕ್ಷಾತೀತವಾಗಿ ಲೋಕಸಭೆಯಲ್ಲಿ ಬೆಂಬಲಿಸಲಾಗುವುದು ಎಂದರು.
ಅನೀಲ್ ಪೆÇೀತದಾರ ಮಾತನಾಡಿ, ಕನ್ನಡಿಗರಿಗೆ ಮರಾಠಿ ಭಾಷಿಕರು ವಿರೋಧಿಗಳಲ್ಲ. ಎಂಇಎಸ್ ವಿರುದ್ಧ ನಮ್ಮ ಹೋರಾಟ. ಜಿಲ್ಲೆಯ ರಾಜಕೀಯ ಮುಖಂಡರು ತಮ್ಮ ಸ್ವಾರ್ಥ ರಾಜಕಾರಣವನ್ನು ಬದಿಗೊತ್ತಿ ಕನ್ನಡ ತಾಯಿಯ ಕೆಲಸ ಮಾಡಲಿ. ಎಂಥಾ ದುರ್ಧೈವ ಸಂಗತಿ ಎಂದರೆ ಮಹಾನಗರ ಪಾಲಿಕೆ ಮಹಾಪೌರ ಸ್ಥಾನದಲ್ಲಿ ಕನ್ನಡಿಗರು ಆಯ್ಕೆಯಾಗುತ್ತಿದ್ದರು. ಆದರೆ ರಾಜಕೀಯ ದುರುದ್ದೇಶÀದಿಂದ ಎಂಇಎಸ್‍ನವರು ಆದರು. ಕಾರಣ ರಾಜಕಾರಣಿಗಳು ತಮ್ಮ ಸ್ವಾರ್ಥದ ಕೆಲಸ ಬದಿಗೊತ್ತಿ ನಾಡು ನುಡಿಗೆ ಕೆಲಸ ಮಾಡಲು ಮುಂದಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಅಶೋಕ ಪಟ್ಟಣ, ಪಿ. ರಾಜೀವ್, ಸಂಜಯ ಪಾಟೀಲ್, ಫಿರೋಜ್ ಸೇಠ್, ಮಹಾಂತೇಶ ಕೌಜಲಗಿ, ನ್ಯಾಯವಾದಿ ಎಂ.ಬಿ ಝಿರಲಿ, ಎಪಿಎಂಸಿ ಅಧÀ್ಯಕ್ಷ ಶಿವನಗೌಡ ಪಾಟೀಲ್, ಮಾಜಿ ಮೇಯರ ಸಿದ್ದನಗೌಡಾ ಪಾಟೀಲ, ಚಿಂಚಣಿಯ ಅಲ್ಲಂಪ್ರಭು ಮಹಾಸ್ವಾಮಿಗಳು, ಉತ್ತರವಲಯ ಐಜಿಪಿ ಉಮೇಶರಾವ, ಜಿಲ್ಲಾಧಿಕಾರಿ ಎನ್ ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡಾ, ಜಿಲ್ಲಾ ಪಂಚಾಯತ ಸಿಇಓ ಡಾ.ಬಗಾದಿ ಗೌತಮ ಸೇರಿದಂತೆ ಕನ್ನಡ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here