ಕಬ್ಬಿನ ಬಿಲ್‌ ಪಾವತಿಸುವಂತೆ ರೈತರಿಂದ ಮನವಿ

0
24

ಇಂಡಿ: ರೈತರು 2017-18 ನೇ ಸಾಲಿನಲ್ಲಿ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಡಿದ್ದು. ಆದರೆ ಇಲ್ಲಿಯವರೆಗೆ ರೈತರ ಬಿಲ್‌ ಮಾತ್ರ ಬಂದಿಲ್ಲ. ಆದ್ದರಿಂದ ಕೂಡಲೇ ಬಿಲ್‌ ಪಾವತಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮದ ರೈತರು ನಾದಕೆಡಿ ಹತ್ತಿರವಿರುವ ಜಮಖಂಡಿ ಸುಗರ್ಸ್‌ ಕಾರ್ಖಾನೆಯ ಮುಂದೆ ಪ್ರತಿಭಟನೆ ರವಿವಾರ ನಡೆಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಶ್ರೀಶೈಲ ಮದರಿ ಮಾತನಾಡಿ ತಾಲೂಕಿನ ವಿವಿಧ ಗ್ರಾಮದ ರೈತರು 2017-18 ನೇ ಸಾಲಿನ ಕಾರ್ಖಾನೆಗೆ ಕಳುಹಿಸಿರುವ ರೈತರ ಕಬ್ಬಿನ ಬಿಲ್ಲು ಇಲ್ಲಿಯವರೆಗೆ ಜಮಾ ಮಾಡಿಲ್ಲ. ಕಾರ್ಖಾನೆಗೆ ಕಬ್ಬು ಕಳುಹಿಸಿ ಸುಮಾರು ಎಂಟು ತಿಂಗಳುಗಳಾದವು. ಆದರೆ ರೈತರು ಸರುಯಾದ ಮಳೆ ಇಲ್ಲದ ಕಾರಣ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಸಾಲ ಮಾಡಿ ಮುಂಗಾರು ಹಂಗಾಮಿಗಾಗಿ ಜಮೀನಿನಲ್ಲಿ ಬೀಜ-ಬಿತ್ತನೆ ಮಾಡಿದ್ದರು. ಸಹ ಮಳೆಯ ಕೊರತೆಯಿಂದ ಬೆಳೆಗಳು ಬೆಳೆಗಳು ಬಾರದಂತಾಗಿವೆ. ಇಂತಹ ರೈತರ ಸಂಕಷ್ಟದ ಸ್ಥಿಯಲ್ಲಿದ್ದಾಗ ಜೀವನ ಸಾಗಿಸುವುದು ಹೇಗೆ ಎಂಬುವುದು ಚಿಂತೆಯಾಗಿದೇ ಆದ್ದರಿಂದ ಕೂಡಲೇ ಕಬ್ಬಿನ ಬಾಕಿಯನ್ನು ನೀಡುವಂತೆ ಒತ್ತಾಯಿಸಿದರು.
ಕಬ್ಬಿನ ಮೇಲೆ ಜೀವನ ನಡೆಸುವ ರೈತರ ಬಿಲ್‌ ನೀಡದಿರುವದಕ್ಕಾಗಿ ತೊಂದರೆ ಅನಿಭವಿಸುತ್ತಿದ್ದಾರೆ. ಕಬ್ಬು ಸಾಗಿಸಿದ ಹದಿನೈದು ದಿನದಲ್ಲಿ ಕಬ್ಬಿನ ಬಿಲ್ಲ್‌ ರೈತರ ಖಾತೆಗೆ ಜಮಾ ಮಾಡಬೇಕು ಎಂದು ನಿಯಮ ಇದ್ದರೂ ಸಹ ಕಾರ್ಖಾನೆಗೆ ಕಬ್ಬು ಕಳುಹಿಸಿ ಎಂಟು ತಿಂಗಳು ಕಳೆದರೂ ಬಿಲ್ಲ ಜಮಾ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳು ನೀಡಿರುವ ಬಿಲ್ಲ್‌ನ್ನೇ ತಾಲೂಕಿನ ಎಲ್ಲ ಕಾರ್ಖನೆಯಗಳು ನೀಡಬೇಕು. ಇಲ್ಲವಾದರೆ ರೈತರು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಆದರೆ ಕಬ್ಬು ಖರೀದಿ ಮಾಡುಕೊಳ್ಳುವ ಸಂದರ್ಭದಲ್ಲಿ ಪಕ್ಕದ ಆಲಮೇಲ ಗ್ರಾಮದಲ್ಲಿರುವ ಕೆಪಿಆರ್‌ ಶುಗರ್ಸ್‌ ಕಾರ್ಖಾನೆಯು ನೀಡಿದಂತೆ ನಾವು ನೀಡುತ್ತೇವೆ ಎಂದು ಹೇಳಿದ್ದು ಆದರೆ ಈಗ ಟನ್‌ಗೆ 1800 ರೂ.ಗಳು ಜಮಾ ಮಾಡುತ್ತೇವೆ ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಎಂದು ತಮ್ಮ ಮನವಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ರೈತರ ಕಬ್ಬಿನ ಬಿಲ್ಲ್‌ ಖಾತೆಗೆ ಜಮಾ ಮಾಡಬೇಕು ವಿಳಂಬವಾಗಿದ್ದಲ್ಲಿ ಅ.28 ರಂದು ಕಾರ್ಖಾನೆಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ಮಾಡಲಾಗುವುದು ಹಾಗೂ ತಾಲೂಕು ಮತ್ತು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಈ ಮನವಿ ಪತ್ರವನ್ನು ಜಮಖಂಡಿ ಶುಗರ್ಸ್‌ದ ಅಧಿಕಾರಿಗೆ ಮನವಿ ಪತ್ರವನ್ನು ನೀಡಿದರು.
ಈ ಪ್ರತಿಭಟನೆಯಲ್ಲಿ ವೈಎಸ್‌. ಹಳ್ಳಿ, ಮಲಕಣ್ಣ ಬಳುಂಡಗಿ, ಶಾಮರಾಯ ಪೂಜಾರಿ, ಎ.ಎಂಖೇಡಕರ, ನಿಂಗಪ್ಪ ಕರ್ಜಗಿ, ರಮಜಾನ ನಧಾಫ, ಶಿವಲಿಂಗಪ್ಪ ಆಲಮೇಲ, ಸುನೀಲ ಆಲಮೇಲ, ಪಂಚಪ್ಪ ಹಂಜಗಿ, ಸೇರಿದಂತೆ ನೂರಾರು ರೈತರು ಪಾಲ್ಗೋಂಡಿದ್ದರು.

loading...