ಕಮಲ ಕೋಟೆಯಲ್ಲಿ ಕೈ ತಂತ್ರ !

0
14

ಲಿಂಗಾಯತ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ | ಕಗ್ಗಂಟಾದ ಟಿಕೆಟ್ ಗೊಂದಲ

ಮಾಲತೇಶ ಮಟಿಗೇರ

ಬೆಳಗಾವಿ: ಲೋಕಸಭಾ ಕ್ಷೇತ್ರವನ್ನು ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ ತನ್ನ ತೆಕ್ಕೆಯಲ್ಲಿ ಬಿಗಿದಪ್ಪಿಕೊಂಡಿದ್ದು, ಈ ಬಾರಿ ಆ ಕ್ಷೇತ್ರವನ್ನು ಕಾಂಗ್ರೆಸ್ ಕಸಿದುಕೊಳ್ಳುವ ತಂತ್ರಗಾರಿಕೆ ಮುಂದುವರೆದಿದೆ.

ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡ ಬಳಿಕ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ನಾಯಕರು ರಾಜ್ಯ , ಹೈಕಮಾಂಡ್ ಮೊರೆ ಹೊಗುತ್ತಿದ್ದಾರೆ. ಅಲ್ಲದೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಏರತೊಡಗಿದ್ದು, ಕಾಂಗ್ರೆಸ್​ನಲ್ಲಿ ಇನ್ನೂ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರಿದಿದ್ದರೆ. ಇತ್ತ ಬಿಜೆಪಿಯಿಂದ ಗೆಲುವು ದಾಖಲಿಸಿರುವ ಸಂಸದ ಸುರೇಶ್ ಅಂಗಡಿ ನಾಲ್ಕನೇ ಬಾರಿಗೆ ಜಯದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಬಾರಿ ಕೈ ಅಭ್ಯರ್ಥಿಯಾಗಿದ್ದ ಲಕ್ಷ್ಮೀ ಹೆಬ್ಬಾಳಕರ ಈಗ ಬೆಳಗಾವಿ ಗ್ರಾಮೀಣ ಶಾಸಕಿಯಾಗಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರಾದ ರಮೇಶ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರ ಹಾಗೂ ಅಂಜಲಿ ನಿಂಬಾಳಕರ, ವಿವೇಕರಾವ್ ಪಾಟೀಲ ಹೆಸರು ಮೊದಲ ಕೇಳಿ ಬಂದಿದ್ದವು. ಈ ಪಟ್ಟಿಯಲ್ಲಿ ರಮೇಶ ಜಾರಕಿಹೊಳಿ ಚುನಾವಣೆ ಸ್ಪರ್ಧಿಸಲು ನಿರಾಕರಿಸಿದ್ದರು. ಅತೃಪ್ತ ಶಾಸಕ ರಮೇಶ ಜಾರಕಿಹೊಳಿಯು ಸಹ ತಮ್ಮ ಬೆಂಬಲಿಗ ವಿವೇಕರಾವ್ ಪಾಟೀಲ ಟಿಕೆಟ್ ನೀಡುವಂತೆ ಸಿಫಾರಸ್ಸು ಮಾಡಿದ್ದರು. ಆದರೆ ಎಲ್ಲಿಯೂ ಹೆಸರು ಸ್ಪಷ್ಟ ಪಡಿಸದ ಕಾಂಗ್ರೆಸ್ ಹೈಕಮಾಂಡ್ ಈಗ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ನಿಲ್ಲುವಂತೆ ಪಟ್ಟು ಹಿಡಿದ್ದಿದ್ದಾರೆ ಎನ್ನಲಾಗುತ್ತಿದೆ.

“ಹೈಕಮಾಂಡ್ ತಂತ್ರಗಾರಿಕೆ”: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಲೆಕ್ಕಾಚಾರ ಬೇರೆಯೇ ಇದೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ, ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿ ಸೋಲಿಸಬೇಕು ಎಂದು ತಮ್ಮ ಬೆಂಬಲಿಗರಾದ ಶಶಿಕಾಂತ ಸಿದ್ನಾಳ, ಅಥವಾ ಅಂಜಲಿ ನಿಂಬಾಳ್ಕರ ನೀಡಬೇಕೆಂದು ತಂತ್ರ ಹೆಣೆಯುತ್ತಿದ್ದರು. ನಿನ್ನೆ ಬೆಂಗಳೂರಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಶಿಕಾಂತ್ ಸಿದ್ನಾಳ ಹೆಸರು ಕೇಳಿ ಬಂದಿದೆ. ಇನ್ನೊಂಡೇ ರಾಜಕೀಯ ವಲಯದಲ್ಲಿ ಗೆಲ್ಲುವ ಕುದುರೆ ಲಕ್ಷ್ಮೀ ಹೆಬ್ಬಾಳಕರ ಎಂಬ ವರದಿ ಕಾಂಗ್ರೆಸ್ ಹೈ ಕಮಾಂಡ ಕೈ ಸೇರಿದ ಹಿನ್ನಲೆಯಲ್ಲಿ ಶಾಸಕಿಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಿಲ್ಲುವಂತೆ ಕಾಂಗ್ರೆಸ್ ಹೈ ಕಮಾಂಡ್ ಪಟ್ಟು ಹಿಡದಿದೆ ಎನ್ನಲಾಗುತ್ತಿದ್ದರೆ. ಅತ್ತ ಲಕ್ಷ್ಮೀ ಹೆಬ್ಬಾಳಕ ತನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿಯವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.

“ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ”: ಬೆಳಗಾವಿಯ ಮೂರು ತಾಲೂಕಿನಲ್ಲಿ ಮರಾಠಿಗರು ಹೆಚ್ಚಿದ್ದಾರೆ. ಅವರಿಗೆ ಬಿಜೆಪಿ ಮೇಲೆ ಹೆಚ್ಚಿನ ಒಲವು ಇದೆ. ಅದೇ ರೀತಿಯಲ್ಲಿ ಲಿಂಗಾಯತ ಸಮೂದಾಯದ ಜನಾಂಗವು ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ದಿಂದ ಲಿಂಗಾಯತ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರಗೆ ಟಿಕೆಟ್ ನೀಡಿದರೆ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ಹೈ ಕಮಾಂಡದಾಗಿದೆ.

ಒಂದು ಕಾಲಕ್ಕೆ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಲೋಕಸಭಾ ಕ್ಷೇತ್ರವನ್ನು ಮೊಟ್ಟಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿದ್ದ ಶಿವಾನಂದ ಕೌಜಲಗಿ ನೆಲಸಮ ಮಾಡಿದ್ದರು. ಈಗ ಕಳೆದ ಮೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿದ್ದು, ಈ ಬಾರಿ ಯಾರ ಕೈ ಸೇರಲಿದೆ ಕಾದು ನೋಡಬೇಕಿದೆ.

====ಬಾಕ್ಸ್=======

“ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ”

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೭ ಚುನಾವಣೆ ನಡೆದಿದ್ದು, ಒಟ್ಟು ೧೦ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ೧೯೮೦ ರಿಂದ ೧೯೯೧ರವರೆಗೆ ಸತತ ನಾಲ್ಕು ಬಾರಿಗೆ ಕಾಂಗ್ರೆಸ್​ನಿಂದ ಎಸ್.ಬಿ. ಸಿದ್ನಾಳ ಗೆದ್ದಿದ್ದರು. ೧೯೯೮ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಬಾಬಾಗೌಡ ಪಾಟೀಲ ಗೆದ್ದಿದ್ದರು. ೧೯೯೯ರಲ್ಲಿ ಅಮರಸಿಂಹ ಪಾಟೀಲ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿದ್ದರು. ೨೦೦೪ ರಿಂದ ಸತತ ಮೂರು ಬಾರಿ ಸುರೇಶ ಅಂಗಡಿ ಗೆದ್ದಿದ್ದಾರೆ.

loading...