ಕರದಂಟದಲ್ಲಿ ಅರಳಿದ ಕಮಲ

0
22

ಕರದಂಟದಲ್ಲಿ ಅರಳಿದ ಕಮಲ
ರಮೇಶ ಸಾಹುಕಾರ್ ಗೋಕಾಕ ಒಡೆಯ
ಸಹೋದರ ತಿಕ್ಕಾಟದಲ್ಲಿ ಜೊಳಿಗೆ ತುಂಬಲಿಲ್ಲ | ರಮೇಶ ಭರ್ಜರಿ ಗೆಲುವು
ಅಶೋಕ ಬಾ. ಮಗದುಮ್ಮ
ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿ ಸಹೋದರ ಕಾಳಗದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹಿನ್ನಡೆ ಕಾಯ್ದುಕೊಂಡ ಸೊಲು ಅನುಭಸಿದರೆ ಜತೆಯಲ್ಲಿ ಲಖನ್ ಸೊತು ಕಮಲ ಅರಳಲು ಕಾರಣರಾದವರು ಕೊನೆಗೂ ರಮೇಶ ಕರದಂಟದಲ್ಲಿ ಕಮಲ ಅರಳಿಸಿದ್ದಾರೆ.
ಈ ಮಧ್ಯದಲ್ಲಿ ಸಹೋದರ ರಮೇಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡು ಗೆಲ್ಲುವಿನ ನಗೆ ಬಿರಿದ್ದು ಗೋಕಾಕ ಕ್ಷೇತ್ರದಲ್ಲಿ ಮತ್ತೇ ಕಮಲ ಅರಳಿಸಿದ್ದಾರೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಮಲ ಭರ್ಜರಿ ಗೆಲುವು ಸಾದಿಸಿದೆ.
ಸಹೋದರ ರಮೇಶ 87,450 ಪಡೆದು ಭರ್ಜರಿ ಗೆಲುವು ಸಾದಿಸಿದ್ದಾರೆ. ಸಹೋದರರ ತಿಕ್ಕಾಟದಲ್ಲಿ ಜೋಳಿಗೆ ಹಿಡಿದ ಅಶೋಕ ಪೂಜಾರಿಗೆ 27948 ಮತಗಳನ್ನು ಪಡೆದು ಸೊಲು ಕಂಡರು.


ಅಥಣಿ ಮತ ಏಣಿಕೆ ವಿಳಂಬವಾಗಿದರೂ ಸುಮಾರು ಮದ್ಯಾಹ್ನ 1 ಗಂಟೆಗೆ ಬಿಜೆಪಿ 99203 ಮತಗಳನ್ನು ಗಳಿಸಿ ಗೆಲುವು ಸಾದಿಸಿದೆ. ಎದುರಾಳಿಯಾಗಿದ್ದ ಗಣೇಶ ಮಂಗಸೂಳಿ ಕೊನೆವರಗೂ ತೀವ್ರ ಪೈಪೋಟಿ ನೀಡಿ, ಕೊನೆಯ ಸುತ್ತಿನಲ್ಲಿ 59,214 ಪಡೆದು ಸೊಲು ಕಂಡರು.
ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಹಾಗೂ ಡಿಸಿಎಂ ಹೊಣೆ ಹೊತ್ತುಕೊಂಡಿದ್ದು ಕಾಗವಾಡಲ್ಲಿ ಮತ್ತೇ ಕಮಲ ಅರಳಿಸುವ ಮೂಲಕ ಕಮಲಕ್ಕೆ ಮೊತ್ತೊಂದು ಖಾತೆ ಭದ್ರ ಪಡಿಸಿಕೊಂಡರು.
ಕಾಗವಾಡ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಮಂತ ಪಾಟೀಲ 76952 ಮತಗಳನ್ನು ಪಡೆದು ಮದ್ಯಾಹ್ನ 11 ರೊಗಳಾಗಿ ಗೆಲುವು ಸಾದಿಸಿದರು. ಈ ಕ್ಷೇತ್ರದಿಂದ ಬದ್ಧವೈರಿಯಾಗಿ ಕಣದಿಂದ ಸ್ಪರ್ಧಿಸಿದ ರಾಜು ಕಾಗೆ 58,395 ಮತಗಳನ್ನು ಗಳಿಸಿ ಸೊಲಿನ ಭೀತಿ ಅನುಭವಿಸಿದ್ದರು.
ಅಥಣಿ ಮತಕ್ಷೇತ್ರದಲ್ಲಿ 1,65,834 ಮತಗಳ ಪೈಕಿ 38 ಮತಗಳು ತಿರಸ್ಕøತಗೊಂಡಿದ್ದು, 99203 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿಜೇತರಾದರು.

ಕಾಗವಾಡ ಮತಕ್ಷೇತ್ರದಲ್ಲಿ 1,42,067 ಮತಗಳ ಪೈಕಿ 37 ಮತಗಳು ತಿರಸ್ಕøತಗೊಂಡಿದ್ದು, 76952 ಮತಗಳನ್ನು ಗಳಿಸಿದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಗೆಲುವು ಸಾಧಿಸಿದ್ದಾರೆ.

ಗೋಕಾಕ ಮತಕ್ಷೇತ್ರದಲ್ಲಿ 1,78,562 ಮತಗಳ ಪೈಕಿ ಯಾವುದೇ ಮತಗಳು ತಿರಸ್ಕøತಗೊಂಡಿರುವುದಿಲ್ಲ. 87450 ಮತಗಳನ್ನು ಪಡೆದುಕೊಂಡ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು.

ರಾಜ್ಯದ ಉಪಕದನಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾದಿಸುವ ಮೂಲಕ ಮೂರುವರೆ ವರ್ಷ ಬಿಜೆಪಿ ಅಧಿಕಾರವನ್ನು ಭದ್ರವಾಗಿಸಿಕೊಂಡಿದ್ದೆ. ಈ ವಾರದಲ್ಲಿ ಎಲ್ಲ ಶಾಸಕರಿಗೆ ಖಾತೆ ಹಂಚಿಯಾಗಲಿದ್ದು, ಯಾವ ಶಾಸಕರಿಗೆ ಉತ್ತಮ ಖಾತೆ ಹಾಗೂ ಸಚಿವ ಸ್ಥಾನ ಸಿಗಲಿದೆ ಎಂಬುವುದೊಂದೆ ಬಾಕಿ ಉಳಿದಿದೆ.

loading...