ಕರ್ತವ್ಯ ಲೋಪವೆಸಗಿದರೆ ಪೌರಕಾರ್ಮಿಕರ ವಿರುದ್ಧ ಶಿಸ್ತು ಕ್ರಮ

0
22

ಕನ್ನಡಮ್ಮ ಸುದ್ದಿ-ಗದಗ: ಪೌರ ಕಾರ್ಮಿಕರು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಪ್ರಕಾಶ ಬಾಕಳೆ ಎಚ್ಚರಿಕೆ ನೀಡಿದರು.
ನಗರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ವಿರುದ್ಧ ಯಾವುದೇ ದೂರು ಕೇಳಿ ಬರದಂತೆ ಶಿಸ್ತು ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಆದೇಶಿಸಿದರು. ಕಳೆದ 5 ತಿಂಗಳಿಂದ ಬಾಕಿ ಇರುವ ಪೌರಕಾರ್ಮಿಕರ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಪೌರಾಯುಕ್ತ ಮನ್ಸೂರಲಿ ಅವರಿಗೆ ಗದಗ-ಬೆಟಗೇರಿ ನಗರಸಭೆ ಅದ್ಯಕ್ಷ ಪ್ರಕಾಶ ಬಾಕಳೆ ಸೂಚಿಸಿದರು.
ನಗರದಲ್ಲಿ ಸೌಂದರ್ಯದ ಪರಿಸರ ಬೀರುವಲ್ಲಿ £ಮ್ಮ ಪಾತ್ರ ಪ್ರಮುಖವಾಗಿದೆ. ನಮ್ಮ ಪಾಲಿನ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಶುಭ್ರ ನಗರ ನಿರ್ಮಿಸಲು ಸಾದ್ಯವಾಗಲಿದೆ. ನಿಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ನಾವು ಬದ್ದರಾಗಿದ್ದೇವೆ. ಶಿಸ್ತುಬದ್ದಿನ ಸೇವಾಕಾರ್ಯಕ್ಕೆ ಬೇಕಾಗಿರುವ ಗುರುತಿನ ಚೀಟಿ ಮತ್ತು ಸಮವಸ್ತ್ರಗಳನ್ನು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ನಿಮ್ಮ ಪಾಲಿನ ಕರ್ತವ್ಯವನ್ನು £ೕವು ಮಾಡಿದರೇ ಗದಗ ನಗರಸಭೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಬಹದು. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ನಗರಸಭೆ ಬದ್ದವಾಗಿದೆ. ವೇತನ ವಿಳಂಬವಾಗದಂತೆ ಕ್ರಮ ವಹಿಸಲಾಗುವದು ಎಂದರು.
ಪೌರಾಯುಕ್ತ ಮನ್ಸೂರಲಿ ಮಾತನಾಡಿ, ಗದಗ- ಬೆಟಗೇರಿಯನ್ನು ಶುಭ್ರವಾಗಿಡುವದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಕರ್ತವ್ಯಲೋಪ ಕೇಳಿ ಬಂದವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ ಹುಯಿಲಗೋಳ, ಕೃಷ್ಣಾ ಪರಾಪೂರ, ಮಂಜುನಾಥ ಪೂಜಾರ, ಬರಕತಲಿ ಮುಲ್ಲಾ, ಸುರೇಶ ಕಟ್ಟಿಮನಿ, ಅನೀಲ ಶಿಂಗಟಾಲಕೇರಿ ಸೇರಿದಂತೆ ಪೌರಕಾರ್ಮಿಕರು ಸಭೆಯಲ್ಲಿದ್ದರು.

loading...