ಕರ್ನಾಟಕ ದೇಶದಲ್ಲಿಯೇ ಮಾದರಿ ರಾಜ್ಯ : ಮಾಮನಿ

0
32

ಸವದತ್ತಿ 02: ಕರ್ನಾಟಕ ರಾಜ್ಯೋತ್ಸವದ ಸ್ಥಬ್ದ ಚಿತ್ರಗಳನ್ನು ಪ್ರದರ್ಶಿಸಿದ ಸಾರಿಗೆ ಸಂಸ್ಥೆಯ ಕಾರ್ಯ ಕನ್ನಡದ ಹೆಮ್ಮೆಯನ್ನು ಪ್ರದರ್ಶಿಸುತ್ತದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಎಸ್.ಕೆ.ಹೈಸ್ಕೂಲ್ ಆವರಣದಲ್ಲಿ ಜರುಗಿದ 59 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ದೇಶದಲ್ಲಿಯೇ ಗೌರವಪೂರ್ಣ ಹೊಂದಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಸಾಹಿತ್ಯ, ಕಲೆ, ಶಿಕ್ಷಣ ರಂಗ ಮತ್ತು ಪತ್ರಿಕೆಗಳ ರಂಗಗಳಲ್ಲಿ ಕನ್ನಡ ನಾಡು ಗುರುತಿಸಿಕೊಳ್ಳುವಂತಾಗಿದೆ. ಕನಕದಾಸ ಸೇರಿದಂತೆ ಇತರ ಮಹಾನ್ ಪುರುಷರು ಕರ್ನಾಟಕದಿಂದಲೇ ಗುರುತಿಸಿಕೊಂಡಿರುವದು ನಮ್ಮ ಭಾಗ್ಯವೇ ಸರಿ.
ಶಿರಸಂಗಿ ಕಾಳಿಕಾದೇವಿ, ಯಲ್ಲಮ್ಮ ದೇವಸ್ಥಾನಗಳಂತಹ ದೇವತೆಗಳ ಬೀಡನ್ನು 30 ಜಿಲ್ಲೆಗಳಿಂದ ಕೂಡಿದ ಕರ್ನಾಟಕದಲ್ಲಿಯೇ ನೋಡುವದು ಪುಣ್ಯ ಮತ್ತು ಪ್ರಥಮ. ಕನ್ನಡ ನಾಡು, ನುಡಿ, ನೆಲೆ, ಜಲ, ಸಂಸ್ಕøತಿ ಗೌರವಿಸುವದು ನಮ್ಮ ಆಧ್ಯ ಕರ್ತವ್ಯ.
ತಮಿಳುನಾಡಿಗೆ ನೀರು ಬೀಡುವ ವಿಚಾರದಲ್ಲಿಯೂ ಸಹ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕಾರಣ ಕನ್ನಡಿಗರು ಮೃದು ಸ್ವಭಾವದವರು. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರಿಗೂ ನೀರಿನ ಅವಶ್ಯವಿದೆಯೆಂದು ಭಾವಿಸಿ ಮೃದು ಸ್ವಭಾವದಿಂದಲೇ ಉತ್ತರಿಸಲಾಗುತ್ತಿದೆಂದರು.
ತಹಶೀಲ್ದಾರ ನಾಗನಗೌಡ ಬಿ. ಪಾಟೀಲ ಮಾತನಾಡಿ ಕನ್ನಡ ಭಾಷೆ ಮರೆತರೆ ಏನಾಗಬಹುದೆಂದು ಮಾಧ್ಯಮದಲ್ಲಿ ಕಂಡಿದ್ದೇವೆ. ಕನ್ನಡ ಮರೆತು ಆಂಗ್ಲ ಭಾಷೆ ಬೇಡವೇ ಬೇಡ. ಬೇರೆ ಭಾಷೆ ಕಲಿಬೇಡಿ ಎಂದಂರ್ಥವಲ್ಲ ಬದಲು ಕನ್ನಡ ಮರೆಯವೇಡಿ ಎಂದರ್ಥ. ಮೊದಲು ಕನ್ನಡ ಕಲಿಕೆ ನಂತರ ಬೇರೆ ಭಾಷೆ ಅರಿಕೆಯಿರಲಿ. ಇತರ ರಾಜ್ಯಗಳ ಜೊತೆಗೆ ವ್ಯಾಪಾರಕ್ಕಾಗಿಯಾದರೂ ಸಹಿತ ಬೇರೆ ಭಾಷೆಯೂ ಅವಶ್ಯ ಎಂದರು.
ಈ ವೇಳೆ ಪುರಸಭಾಧ್ಯಕ್ಷ ಬಸಮ್ಮ ಅಮಾತೆಣ್ಣವರ, ಉಪಾಧ್ಯಕ್ಷ ಸುಭಾಸ ರಜಪೂತ, ತಾಲೂಕಾ ಆಡಳಿತದ ಅಧಿಕಾರಿಗಳು ಮತ್ತು ಗಣ್ಯರು ಇದ್ದರು.

loading...

LEAVE A REPLY

Please enter your comment!
Please enter your name here