ಕಳಸಾ ಬಂಡೂರಿ ಯೋಜನೆ ಬಗ್ಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ

0
28

ಬೈಲಹೊಂಗಲ 17 : ಈ ಭಾಗದ ಜನತೆ ಕಳಸಾ ಬಂಡೂರಿ, ಮಹದಾಯಿ ನದಿ ಜೋಡಣೆಗೆ ಒತ್ತಾಯಿಸಿ, ನಡೆಸುತ್ತಿರುವ ಹೋರಾಟ ಶತಮಾನೋತ್ಸವದತ್ತ ಸಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಸ್ಪಷ್ಟವಾದ ನಿರ್ಧಾರವನ್ನು ತಿಳಿಸದಿರುವದು ತುಂಬಾ ವಿಷಾದನೀಯವಾಗಿದೆ ಎಂದು ಪಟ್ಟಿಹಾಳ ಕೆ.ಬಿ. ಗ್ರಾಮದ ಕೆಎಂಎಫ್ ಅಧ್ಯಕ್ಷ ಆರ್.ಜಿ.ಕತ್ತಿ ಹೇಳಿದರು.
ಅವರು ಗುರುವಾರ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಾ ಕಳಸಾ-ಬಂಡೂರಿ, ಮಹಾದಾಯಿ ನದಿ ಜೋಡಣೆ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ 101 ನೇ ದಿನzಲ್ಲಿ ಪಟ್ಟಿಹಾಳ ಕೆ.ಬಿ. ಗ್ರಾಮಸ್ಥರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಉತ್ತರ ಕರ್ನಾಟಕದ ಸಂಸದರು, ಶಾಸಕರುಗಳು ವಿಧಾನಪರಿಷತ ಸದಸ್ಯರುಗಳು ಒಗ್ಗಟ್ಟಿನಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಯೋಜನೆ ಅನುಷ್ಠಾನಕ್ಕಾಗಿ ತೀವ್ರ ಒತ್ತಡ ತರಬೇಕು. ಅಧಿಕಾರ ಚುಕ್ಕಾಣಿ ಹಿಡಿಯುವಾಗ ಮೈತ್ರಿ ಮಾಡಿಕೊಳ್ಳುವ ಇವರು ಯೋಜನೆ ಅನುಷ್ಠಾನಕ್ಕಾಗಿ ಏಕೆ ಒಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಗ್ರಾಪಂ.ಅಧ್ಯಕ್ಷ ಯಲ್ಲಪ್ಪ ಹರಿಜನ, ಈಶಪ್ರಭು ಸೊಸೈಟಿ ನಿರ್ದೇಶಕ ಎಮ್.ಬಿ.ಕತ್ತಿ ಮಾತನಾಡಿ, ಯೋಜನೆಯು ಅನುಷ್ಠಾನಗೊಳ್ಳುವದರಿಂದ ಮಲಪ್ರಭಾ ನದಿಯ ಅಚ್ಚುಕಟ್ಟಿನ ಪ್ರದೇಶದ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯು ಜನತೆಗೆ ಅನೂಕೂಲವಾಗುತ್ತದೆ. ಇಂತಹ ಯೋಜನೆಗೆ ಸರ್ಕಾರ ಮುಂದಾಗದೇ ಇರುವದು ದುದುಷ್ಟಕರ ವಿಷಯ ಎಂದರು.
ಶಿವಾನಂದ ಗುರ್ಲಕಟ್ಟಿ, ಆರ್.ಎಮ್.ನದಾಫ, ನಿಂಗಪ್ಪ ಕತ್ತಿ, ಶಿವಪ್ಪ ಗಡದವರ, ಎಮ್.ಎಮ್.ಕತ್ತಿ, ಗಂಗಪ್ಪ ಮುರಗೋಡ, ಪ್ರಭು ಕತ್ತಿ, ರುದ್ರಪ್ಪ ಕತ್ತಿ, ರಾಯಪ್ಪ ದಾಸಪ್ಪನವರ, ಪ್ರಮೋದ ಜೈನರ, ಬಸವರಾಜ ಇಂಗಳಗಿ, ಖಾನಗೌಡ ಪಾಟೀಲ, ಎಮ್.ಎಸ್.ಹೆಗಡೆ, ಶಿವಾಜಿ ಗಡದವರ, ದೊಡ್ಡಪ್ಪ ಮಾದರ, ಮಂಜುನಾಥ ಚಿಕ್ಕಮಠ, ಮಂಜುನಾಥ ಬಡಿಗೇರ, ಮಂಜುನಾಥ ಗಡದವರ ಹಾಗೂ ಹೋರಾಟ ಸಮಿತಿ ಮುಖಂಡರು ಇದ್ದರು.

loading...

LEAVE A REPLY

Please enter your comment!
Please enter your name here