ಕಾಂಗೋನಲ್ಲಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ 2,60,000 ಮಕ್ಕಳು: ಯುನಿಸೆಫ್‍ ಕಳವಳ

0
5

ಕಿನ್‍ಶಾಸ. ಮಾರ್ಚ್‍ :- ಡೆಮಾಕ್ರಟಿಕ್‍ ರಿಪಬ್ಲಿಕ್‍ ಆಫ್‍ ಕಾಂಗೋ(ಡಿಆರ್‍ಸಿ)ನ ಕಸಾಯ್‍ ಪ್ರಾಂತ್ಯದಲ್ಲಿ ಸುಮಾರು 2,60,000 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅವರಿಗೆ ಜೀವರಕ್ಷಣೆಯ ಚಿಕಿತ್ಸೆ ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆ ಮಕ್ಕಳ ನಿಧಿ(ಯುನಿಸೆಫ್‍) ಹೇಳಿದೆ.
‘ಸಂಘರ್ಷಗಳು ಹಾಗೂ ಹಿಂಸಾಚಾರಗಳಿಂದ ನಲುಗಿರುವ ಕಸಾಯ್‍ ಪ್ರಾಂತ್ಯದಲ್ಲಿ ಮಕ್ಕಳು ಹಾಗೂ ಕುಟುಂಬಗಳು ಸುಧಾರಿಸಿಕೊಳ್ಳಲು ನಾವು ಸ್ಥಳೀಯ ಸಮುದಾಯಗಳು ಮತ್ತು ಪಾಲುದಾರರೊಂದಿಗೆ ಅವಿರತವಾಗಿ ಶ್ರಮಿಸುತ್ತಿದ್ದೇವೆ.’ ಎಂದು ಕಾಂಗೋದಲ್ಲಿನ ಯುನಿಸೆಫ್‍ ಪ್ರತಿನಿಧಿ ಗಿಯಾನ್‍ಫ್ರಾಂಕೊ ರೊಟಿಗ್ಲಿಯಾನೊ ತಿಳಿಸಿದ್ದಾರೆ.
2016ರಿಂದ 18ರವರೆಗೆ ಉಗ್ರರ ಉಪಟಳದಿಂದ ಹಿಂಸಾಚಾರಗಳು ಹೆಚ್ಚಾಗಿ ಸಾವಿರಾರು ಜನರು ಮನೆಗಳನ್ನು ತೊರೆದಿದ್ದಾರೆ. ಇದರಿಂದ ಜನರ ಹಕ್ಕುಗಳು ದಮನಗೊಂಡು, ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಇದೇ ವೇಳೆ ಕಾಂಗೋನ ಮೂರು ಲಕ್ಷ ಜನರು ಅಂಗೋಲಾದಿಂದ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ಇದರಿಂದ ಕಾಂಗೋನ ಕಸಾಯ್‍ ಪ್ರಾಂತ್ಯದಲ್ಲಿ ಆರೋಗ್ಯಕೇಂದ್ರಗಳು, ಶಾಲೆಗಳು ಮತ್ತು ಇತರ ಮೂಲ ಸೇವಾ ಕೇಂದ್ರಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ.
ಈ ಸಮಸ್ಯೆಯನ್ನು ನೀಗಿಸುವಲ್ಲಿಯೂ ಯುನಿಸೆಫ್‍ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗಿಯಾನ್‍ಫ್ರಾಂಕೊ ರೊಟಿಗ್ಲಿಯಾನೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಸಾಯ್‍ ಪ್ರಾಂತ್ಯದಲ್ಲಿ ಕಳೆದರಡು ವರ್ಷಗಳಲ್ಲಿ ಯುನಿಸೆಫ್‍ ಮತ್ತು ಅದರ ಪಾಲುದಾರಿಕೆ ಸಂಸ್ಥೆಗಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಸುಮಾರು ಎರಡು ಲಕ್ಷ ಮಕ್ಕಳಿಗೆ ಚಿಕಿತ್ಸೆ ಒದಗಿಸಿವೆ. ಹಿಂಸಾಚಾರಗಳಿಂದ ಬೆಂಕಿಗಾಹುತಿಯಾದ, ಧ್ವಂಸಗೊಂಡ 500ಕ್ಕೂ ಹೆಚ್ಚು ಶಾಲಾ ಕಟ್ಟಡಗಳನ್ನು ಪುನರ್‍ ನಿರ್ಮಿಸಲಾಗಿದೆ. ಇದರಿಂದ ಮಕ್ಕಳು ಮತ್ತೆ ಶಾಲೆಗೆ ತೆರಳುವಂತಾಗಿದೆ.

loading...