ಕಾಂಗ್ರೆಸ್‌ದಿಂದ ದಲಿತರ ಅಭಿವೃದ್ಧಿ ಹೇಗೆ ಸಾಧ್ಯ: ಜಗದೀಶ

0
6

ಕನ್ನಡಮ್ಮ ಸುದ್ದಿ-ಬೆಳಗಾವಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಆರು ಮೂರು ಅಡಿ ಜಾಗವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. ಅಂತಹವರು ದಲಿತ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ ಹೀರೆಮನಿ ಹೇಳಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಬಿ ಆರ್ ಅಂಬೇಡ್ಕರ ಜಯಂತಿಯನ್ನು ವಿಜೃಂಭಣೆಯಿಂದ ಏ. ೧೪ರಂದು ಆಚರಣೆ ಮಾಡುವವರು ಇದ್ದಾರೆ. ಅವರಲ್ಲಿ ಭಾರತೀಯ ಜನತಾ ಪಾರ್ಟಿಯು ಒಂದು. ಕಾಂಗೆಸ್ ಕಳೆದ ಎಪತ್ತು ವರ್ಷಗಳಿಂದ ಮಾಡದ ಕೆಲಸವನ್ನು ಬಿಜೆಪಿ ಐದು ವರ್ಷಗಳಲ್ಲಿ ಮಾಡಿದೆ. ಕಾಂಗ್ರೆಸ್ ಸರ್ಕಾರ ದಲಿತರ ಪರವಾಗಿದ್ದವೆ ಎಂದು ಹೇಳುತ್ತಾನೆ ಇಲ್ಲಿಯವರೆಗೂ ಗರಿಬಿ ಹಟಾವೋ ಎಂಬ ಘೋಷಣೆ ಮಾಡುವುದನ್ನು ನಿಲ್ಲಿಸಿಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಸಾಹೇಬರಿಗೆ ಗೌರವವಾರ್ಥವಾಗಿ ಪಂಚತೀರ್ಥ ಎಂಬ ಹೆಸರಿನ ಮೇಲೆ ಅಂಬೇಡ್ಕರ ಸಂಬಂಧಿಸಿದ ಐದು ಪವಿತ್ರ ಕ್ಷೆÃತ್ರಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಭಾರತೀ ಜನತಾ ಪಾರ್ಟಿ ಮಾಡಿದೆ ಎಂದು ಹೇಳಿದರು.
ಮಧ್ಯಪ್ರದೇಶದ ಮಾಹುದಲ್ಲಿ ಬಾಬಾಸಾಹೇಬ್ ಅಂಬೇಡ್ಕರ ಜನ್ಮವಾಗಿತ್ತು. ಅಲ್ಲಿ ಮಿಲಟರಿ ಕ್ಯಾಂಪ್ ಪ್ರದೇಶವನ್ನು ರಾಜ್ಯ ಹಾಗೂ ಕೇಂದ್ರಕ್ಕೆ ಹಸ್ತಾಂತರಿಸಿ ಭವ್ಯ ಶಿಲಾವಿನ್ಯಾಸ , ಅಂಬೇಡ್ಕರ ಅವರು ಅತೀ ಹೆಚ್ಚು ಅಧ್ಯಯನ ಮಾಡಿದಂತಹ ಅಲಿಪುರದಲ್ಲಿನ ಮನೆಯನ್ನು ಕೇಂದ್ರ ಸರ್ಕಾರ ಖರೀದಿಸಿ , ಅಲ್ಲಿ ಭನವ ನಿರ್ಮಿಸಿ ಎಸ್ಸಿ,ಎಸ್ಟಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಕೆವಲ ಒಂದೇ ವರ್ಷದಲ್ಲಿ ಮಾಡಲಾಗಿದೆ.
ಬಿಜೆಪಿಯವರು ಕೋಮುವಾದಿಗಳು,ದಲಿತ ವಿರೋಧಿಗಳು, ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ ಅವರು ,ಕಾಂಗೆಸ್ ಅಂಬೇಡ್ಕರ ಅವರಿಗೆ ನಿಜವಾಗಲೂ ಗೌರವ ಕೊಡುವಂತಹದ್ದೆ ಆಗಿದ್ದರೆ ಚುನಾವಣೆಗೆ ನಿಂತಾಗ ಒಬ್ಬ ಹೆಬ್ಬಟಿನ ಕಾಂಗ್ರೆಸ್ ವ್ಯಕ್ತಿಯನ್ನು ನಿಲ್ಲಿಸಿ ಅವರನ್ನು ಸೋಲಿಸಿದರು. ಅಂದು ಅಂಬೇಡ್ಕರ ಅವರನ್ನು ಸೋಲಿಸಿದ ಕಾಂಗ್ರೆಸ್ ದಲಿತ ಉದ್ದಾರ ಹೇಗೆ ಮಾಡುತ್ತಾರೆ ಎನ್ನುವುದು ಸಾಧ್ಯ ಎಂದರು.ಶಾಸಕ ಅನಿಲ ಬೆನಕೆ, ರಾಜು ಚಿಕ್ಕನಗೌಡ್ರ, ಬಸವರಾಜ ರೊಟ್ಟಿ ಹಾಜರಿದ್ದರು.

loading...