ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಅಭಿವೃದ್ಧಿಗಾಗಿ ಪ್ರಕಾಶ ಹುಕ್ಕೇರಿಯವರನ್ನು ಬೆಂಬಲಿಸಿ : ಹೊಸಮನಿ

0
85

ಕನ್ನಡಮ್ಮ ಸುದ್ದಿ-ಸಂಕೇಶ್ವರ :ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿಯವರ ಪರವಾಗಿ ಹುಕ್ಕೇರಿ ಮತಕ್ಷೇತ್ರದ ಬೋರಗಲ್ಲ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ರವಿವಾರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಹಾಗೂ ಗ್ರಾ.ಪಂ ಸದಸ್ಯರಾದ ಸಚಿನ ಹೊಸಮನಿ ಮಾತನಾಡಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಮ್ಮೆ ಪ್ರಕಾಶ ಹುಕ್ಕೇರಿ ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ
ಪ್ರದೀಪ ಕಾಮಾನಿ,ಅಪ್ಪಾಸಾಹೇಬ ಚೌಗಲಾ,ಪ್ರಭು ಸಮಾಯಿ,ಯುವ ಮುಖಂಡರಾದ ಮಹೇಶ ಯಡೂರಿ, ದಯಾನಂದ ಬೊಮ್ಮನ್ನವರ,ಬಾಬು ಗಾಡಿವಡ್ಡರ,ಅಮಿತ ಕಾಂಬಳೆ ಮತ್ತಿತರರು ಇದ್ದರು.

loading...