ಕಾಂಗ್ರೆಸ್ ನಲ್ಲಿ ಬದಲಾವಣೆ ಸಹಜ: ಸಚಿವ ರಮೇಶ ಜಾರಕಿಹೊಳಿ

0
61

ಕಾಂಗ್ರೆಸ್ ನಲ್ಲಿ ಬದಲಾವಣೆ ಸಹಜ: ಸಚಿವ ರಮೇಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ- ಗೋಕಾಕ: ಕೆಪಿಸಿಸಿ ಮಹಿಳಾ‌ ಘಟಕದ ಅಧ್ಯಕ್ಷ ನೇಮಕ ಬದಲಾವಣೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವೆ ಸಾಮಾನ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು‌.

ಅವರು ಶುಕ್ರವಾರ ಗೋಕಾಕ ನಗರಸಭೆಯ 16 ನೇ ವಾರ್ಡ ವ್ಯಾಪ್ತಿಯ ಮತಗಟ್ಟೆಗೆ ಆಗಮಿಸಿ 34 ನೇ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಮಾಧ್ಯಮರೊಂದಿಗೆ ಮಾತನಾಡಿದ ಅವರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಬದಲಾಯಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
ಕಾಂಗ್ರೆಸ್ಸ್ ನಲ್ಲಿ ಬದಲಾವಣೆ ಸಹಜವಾದದ್ದು , ಆದ್ದರಿಂದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೆರೊಬ್ಬರು ಬರಬಹುದು ಎಂದು ತಿಳಿಸಿದರು.

ದೋಸ್ತಿ ಸರಕಾರದ ಸಮನ್ವಯ ಸಮಿತಿ ಸಭೆ ಕುರಿತಂತೆ ಹೆಚ್ಚಿನ ಮಾಹಿತಿ ಏನೂ ಇಲ್ಲ. ಒಳ್ಳೆಯ ನಿರ್ಣಯ ಕೈಗೊಳ್ಳಲಾಗುತ್ತದೆಂಬ ವಿಶ್ವಾಸವಿದೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಹೈಕಮಾಂಡ್ ಗೆ ದೂರು ನೀಡಿರುವ ವಿಚಾರದ ಬಗ್ಗೆ ಮಾಧ್ಯಮಗಳು ಸುಖಾ ಸುಮ್ಮನೆ ವರದಿ ಮಾಡಿವೆ ಎಂದ ಸಚಿವರು ತಮ್ಮ ವಿರುದ್ದ ಲಕ್ಷ್ಮಿ ಹೆಬ್ಬಾಳಕರ ಹೈಕಮಾಂಡಿಗೆ ದೂರಿರುವ ಬಗ್ಗೆ ತಮಗೇನೂ ಗೊತ್ತಿಲ್ಲವೆಂದರು.

loading...