ಕಾಕತಿ ಬಳಿ ಗ್ರಾನೈಟ್ ಕಂಪನಿ ಮ್ಯಾನೇಜರ್ ಅನುಮಾನಾಸ್ಪದ ಸಾವು

0
28

ಬೆಳಗಾವಿ : ತಾಲೂಕಿನ ಕಾಕತಿಯ ಶಾಸ್ತ್ರಿ ನಗರದ ನಿವಾಸಿ ಮಾರುತಿ ಹಳಿಮನಿ(52) ಸಂಶಯಾಸ್ಪದ ಸಾವನ್ನಪ್ಪಿದ್ದು, ಬುಧವಾರ ಕಾಕತಿ ಗ್ರಾಮದ ಮಾರ್ಕಂಡೇಯ ನದಿಯ ಹತ್ತಿರ ಇರುವ ನೀರಿನ ತಗ್ಗಿನಲ್ಲಿ ಶವ ಪತ್ತೆಯಾಗಿದೆ.

ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಕಾಕತಿ ಪೊಲೀಸ್ ಎಎಸ್ಐ ಶ್ರೀ ನವಲೆ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಶವ ಹೊರ ತೆಗೆದು ಕುಂಟುಂಬದವರಿಂದ ಪ್ರಕರಣ ದಾಖಲಿಸಿಕೊಂಡಿದ್ದು, ಶವ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ಮೃತ ಮಾರುತಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಗ್ರಾನೈಟ್ ಕಂಪನಿಯೊಂದರಲ್ಲಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದು, ಮಳೆಯ ಕಾರಣದಿಂದಾಗಿ ಕಳೆದ 2 ದಿನಗಳಿಂದ ಕಂಪನಿಗೆ ರಜೆಯಿದ್ದು ಮನೆಯಲ್ಲಿಯೇ ಇದ್ದ ಮಾರುತಿ ಸಂಜೆ ವೇಳೆಗೆ ಕಾಕತಿಯಿಂದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ರಸ್ತೆ ಪಕ್ಕದಲ್ಲಿರುವ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಶವವಾಗಿ ಪತ್ತೆಯಾಗಿದೆ. ಪೊಲೀಸರು ಆಕಸ್ಮಿಕ ಸಾವು ಎಂದು ತಿಳಿಸಿದ್ದಾರೆ.

loading...