ಕಾಮಗಾರಿ ಕೈಗೊಳ್ಳಲು ಸಂಸದ ಸಂಗಣ್ಣ ಕರಡಿ ಆಗ್ರಹ

0
12

ಕನ್ನಡಮ್ಮ ಸುದ್ದಿ-ಕೊಪ್ಪಳ: ಹೈ.ಕ ಪ್ರದೇಶದ ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಕಂಗ್ಗಾಲಾಗಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಸಂಗಣ್ಣ ಕರಡಿ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಡಿಕೆಗಿಂತ ಶೇ.26 ರಷ್ಟು ಕಡಿಮೆ ಮಳೆಯಾಗಿದ್ದು ಅನ್ನದಾತ ಸಂಕಷ್ಟಕ್ಕೆ ಸಿಲುಕ್ಕಿದ್ದಾನೆ. ಜೂನ್ ತಿಂಗಳಿನಲ್ಲಿ ಶೇ.82 ರಷ್ಟು ಬಿತ್ತನೆಯಾಗಿದ್ದು, ಮಳೆಯ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಿಹೋಗಿದೆ. ಬಿತ್ತಿದ ರೈತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕವನ್ನು ವ್ಯಕ್ತಡಿಸಿದರು.ಒಂದಡೆ ಮಳೆ ಬೆಳೆ ಇಲ್ಲದೇ ರೈತ ಕಂಗಾಲಾದರೆ, ಮೇವು ಇಲ್ಲದೇ ಜಾನುವಾರುಗಳು ಸೋರಗಿ ಹೋಗುವ ಪರಿಸ್ಥಿತಿ ಬಂದಿದೆ, ಗೋಶಾಲೆಗಳನ್ನು ಪ್ರಾರಂಭಿಸಿ, ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವುಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಬರಗಾಲದ ಛಾಯೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಂಕಿಅಂಶ ನೀಡಲಾಗಿದ್ದರೂ ಕೂಡಾ ಗಮನ ಕೊಡದ ಸರ್ಕಾರ ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿದೆ ಎಂದು ದೂರಿದರು.ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮತ್ತು ಕೆ.ಶರಣಪ್ಪ ವಕೀಲರು, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿದರು. ನಂತರದಲ್ಲಿ ಉಪ ವಿಭಾಗಧಿಕಾರಿಗಳಾದ ಸಿ.ಡಿ ಗೀತಾರವರ ಮುಖಾಂತರ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಅಮರೇಶ ಕರಡಿ, ಮಂಜುನಾಥ ಹಂದ್ರಾಳ, ಹಾಲೇಶ ಕಂದಾರಿ, ರಾಜು ಬಾಕಳೆ, ಶಶಿಧರ ಕವಲಿ, ತೋಟಪ್ಪ ಕಾಮನೂರ, ನವೀನ ಗುಳಗಣ್ಣವರ, ಚಂದ್ರಕಾಂತ ನಾಯಕ, ಪಾಲಾಕ್ಷಪ್ಪ ಗುಗಾಂಡಿ, ಬಸವರಾಜ ಈಶ್ವರಗೌಡರ, ಮಾರುತಿ ಆಪ್ಟೆ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಇದ್ದರು.

loading...