ಕಾಯಕದಲ್ಲಿ ಶೃದ್ಧೆ, ನಿಷ್ಠೆ ಇರಬೇಕು -ಶಾಸಕ ಜಾರಕಿಹೊಳಿ

0
61

ಗೋಕಾಕ 16: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರದಂದು ಜಿ.ಪಂ. ಬೆಳಗಾವಿ, ತಾಲೂಕಾಡಳಿತ, ತಾ.ಪಂ, ನಗರಸಭೆ, ಭೋವಿ (ವಡ್ಡರ) ಸಮಾಜದ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉತ್ಸವ ಸಮಾರಂಭದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕಾಯಕ ಮಾಡಿದರೆ ಜೀವನ ಪಾವನಮಯವಾಗುತ್ತದೆ. ಅಂದಿನ ಮಹಾನುಭಾವರು ಕಾಯಕದಲ್ಲಿ ಶೃದ್ಧೆ, ನಿಷ್ಠೆಯಿಂದ ನಡೆದವರು. ಸಮಾಜವನ್ನು ಸಂಘಟಿಸಿ ಪ್ರತಿಯೊಬ್ಬರನ್ನು ಶಿಕ್ಷಿತರನ್ನಾಗಿ ಮಾಡುವದರ ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಸಮಾಜ ಅಭಿವೃದ್ದಿ ಹೊಂದುತ್ತದೆ. ತಮ್ಮ ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವಂತೆ ಮಾಡುವದು ಇಂದಿನ ಅವಶ್ಯಕತೆಯಾಗಿದೆ ಎಂದೂ ರಮೇಶ ಜಾರಕಿಹೊಳಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ ಜಿ.ಎಸ್.ಮಹಾಜನ್ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ, ಎಪಿಎಂಸಿ ಅಧ್ಯಕ್ಷ ಮಡ್ಡೆಪ್ಪ ತೋಳಿನವರ, ನಗರಾಧ್ಯಕ್ಷೆ ಶ್ರೀಮತಿ ಲಗಮವ್ವ ಸುಲಧಾಳ, ಶಿವನಗೌಡ ಪಾಟೀಲ, ಸೋಮಶೇಖರ ಮಗದುಮ್, ಸಮಾಜ ಕಲ್ಯಾಣ ಅಧಿüಕಾರಿ ಎಸ್.ವಿ. ಕಲ್ಲಪ್ಪನವರ, ನಗರಸಭೆ ಸದಸ್ಯ ಗಿರೀಶ ಖೋತ, ಘಟಪ್ರಭಾದ ಮಹಾಂತೇಶ ಶಾಸ್ತ್ರಿ, ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ಎನ್.ಬಿ.ಜಾಬನ್ನವರ, ಉಪತಹಶೀಲ್ದಾರ ಎಸ್. ಕೆ. ಕುಲಕರ್ಣಿ ಸೇರಿದಂತೆ ಭೋವಿ (ವಡ್ಡರ) ಸಮಾಜದ ಮುಖಂಡರು ಉಪಸ್ಥಿತರಿದ್ದರು.
ನಂತರ ತಾಪಂ. ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೀಳಗಿಯ ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಜಿಲ್ಲಾ ಸದಸ್ಯ ಗುರುರಾಜ ಲೋತಿ ಅವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಅವರ ಜೀವನದ ಕುರಿತು ಉಪನ್ಯಾಸ ನೀಡಿದರು.
ಎಸ್. ಜಿ. ವಲ್ಯಾಪೂರೆ ಸ್ವಾಗತಿಸಿದರು. ಟಿ. ಬಿ. ಬಿಲ್ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here