ಕಾರ್ಯಕರ್ತರೇ ನನ್ನ ಆಸ್ತಿ: ಶ್ರೀಮಂತ ಪಾಟೀಲ

0
50

ಕಳೆದ 3 ಚುನಾವಣೆಗಳನ್ನು ಎದುರಿಸಿದ್ದೇನೆ. ಕಾರ್ಯಕರ್ತರೊಂದಿಗೆ ಹಳ್ಳಿ, ಹಳ್ಳಿಗಳಲ್ಲಿ ಮತಯಾಚನೆ ನಿಮಿತ್ತ ಸುತ್ತಾಡಿದ್ದೇನೆ. ಚುನಾವಣೆ ನಿಮಿತ್ಯ 15 ದಿನ ಅಷ್ಟೇ ಅಲ್ಲ, 1 ತಿಂಗಳ ಸುತ್ತಾಡಿದರೂ ನನಗೆ ದಣಿವಾಗುವದಿಲ್ಲ. ಕಾರ್ಯಕರ್ತರೊಂದಿಗೆ ಬೆರೆತು, ಚರ್ಚಿಸುತ್ತಾ, ಅವರೊಂದಿಗೆ ಊಟ, ತಿಂಡಿ ಮಾಡುತ್ತ ಸಂಸತದಿಂದ ಇದ್ದೇನೆ ಎಂದು ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದರು.
ಕೆಂಪವಾಡದ ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆ ವಿಶ್ರಾಂತಿ ಗೃಹದಲ್ಲಿ ಶ್ರೀಮಂತ ಪಾಟೀಲರನ್ನು, ಭೇಟಿಯಾಗಿ ವಿಚಾರಿಸದಾಗ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕರ್ತರೆ ನನ್ನ ಅಸ್ತಿ. ಅನೇಕ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನಾವು ಸಹೋದರರಂತೆ ಇದ್ದೇವೆ. ನಿನ್ನೆ ಜರುಗಿದ ಚುನಾವಣೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸುತಿದ್ದೇನೆ. ಕಾಂಗ್ರೆಸ್ ಪಕ್ಷದ ಪರ ಮತದಾರರು ಒಲವು ತೋರಿದ್ದಾರೆ. ಈ ಸಂತಸದಿಂದ ನಾನು ಎಲ್ಲಿ ಹೋಗದೆ, ಕಾರ್ಯಕರ್ತರೊಂದಿಗೆ ಬೆರೆತು, ಸಂತಸದಿಂದ ಇದ್ದೇನೆ ಎಂದು ಶ್ರೀಮಂತ ಪಾಟೀಲರು ಹೇಳಿದರು.

loading...