ಕಾಳಿ ನದಿಯಿಂದ ನೀರನ್ನೂ ಮಲಪ್ರಭಾ-ಘಟಪ್ರಭಾ ನದಿಗೆ ಜೋಡಣೆ ಮಾಡಲು ಬಿಡೊದಿಲ್ಲ: ಸುನೀಲ ಹೆಗಡೆ

0
36

 

ದಾಂಡೇಲಿ: ಉತ್ತರ ಕರ್ನಾಟಕದ ಬೆಳಗಾವಿ, ಧಾರವಡÀ, ಬಾಗಲಕೋಟ, ಗದಗ ಜಿಲ್ಲೆಗಳ ಸಮಗ್ರ ನೀರಾವರಿ ಹಾಗೂ ಕುಡಿಯುವ ನೀರಿನ ಸಮೃದ್ದಿಗಾಗಿ ಘಟಪ್ರಬಾ ಹಾಗೂ ಮಲಪ್ರಭಾ ನದಿಗಳಿಗೆ ಕಾಳಿ ನದಿಯನ್ನು ಜೋಡಿಸುವ ಪ್ರಸ್ತಾವನೆ ಅವೈಜ್ಞಾನಿಕದಿಂದ ಕೂಡಿದೆ. ಯಾವುದೇ ಕಾರಣಕ್ಕೂ ಕಾಳಿ ನದಿಯಿಂದ ಒಂದು ಹನಿ ನೀರನ್ನೂ ಮಲಪ್ರಭಾ-ಘಟಪ್ರಭಾ ನದಿಗೆ ಜೋಡಣೆ ಮಾಡಲು ಬಿಡೊದಿಲ್ಲ.
ಒಂದುವೇಳೆ ಇಂಥಹ ಯೋಜನೆಗೆ ಕೈ ಹಾಕಿದ್ದೆÃಯಾದಲ್ಲಿ ಪಕ್ಷಾತೀತವಾಗಿ ಹೋರಾಟಕ್ಕಿಳಿಯುವುದು ನಿಶ್ಚಿತ ಎಂದು ಮಾಜಿ ಶಾಸಕ ಸುನೀಲ ಹೆಗಡೆಯವರು ಗುಡುಗಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕಾಳಿ ನದಿ ಇದು ವಿಶೇಷವಾಗಿ ವಿದ್ಯುತ್ ಯೋಜನೆಗಾಗಿ ಮೀಸಲಿಟ್ಟ ನದಿ. ಈ ನದಿ ತನ್ನ ತಡದಲ್ಲಿರುವ ಜೊಯಿಡಾ, ದಾಂಡೇಲಿ, ಕಾರವಾರಗಳ ಜನರ ಬದುಕನ್ನು ಹಸನಾಗಿಸುವ ನದಿಯಾಗಿದೆ. ಜೊಯಿಡಾ, ದಾಂಡೇಲಿಯ ಪ್ರವಾಸೋದ್ಯಮಕ್ಕೆ, ಕಾರವಾರದ ಮೀನುಗಾರಿಕೆಗೆ ಸಂಪತ್ಭರಿತ ನದಿಯಾಗಿದೆ.

ಈ ನದಿಯ ಮೂಲ ಸ್ವರೂಪವನ್ನು ಬದಲಿಸುವುದರಿಂದ ನದಿ ತಟದ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇಲ್ಲಿಯ ನಿಸರ್ಗವನ್ನು ಸಂರಕ್ಷಿಸುವುದರ ಮೂಲಕ ಕಾಳಿ ಈ ಭಾಗದ ಜೀವನಡಿಯಾಗಿದೆ. ಕಾಳಿ ನದಿ ವ್ಯಾಪ್ತಿಯಲ್ಲಿ ವನ್ಯಜೀವಿ, ಹುಲಿ ಸಂರಕ್ಷಿತ ಪ್ರದೇಶಗಳಿರುವುದರಿಂದ ಮತ್ತು ಒಳ ಹರಿವು ಕಡಿಮೆ ಪ್ರಮಾಣದಲ್ಲಿರುವುದರಿಂದ ಕಾಳಿ ನದಿಯ ನೀರನ್ನು ಇನ್ನೊಂದು ನದಿಗೆ ಜೋಡಣೆ ಮಾಡಲು ಅಸಾಧ್ಯ ಎಂದು ಸುನೀಲ ಹೆಗಡೆ ಹೇಳಿದರು.
ನದಿ ಜೋಡಣೆ, ನದಿ ತಿರುವು ಯೋಜನೆ ಜಾರಿಯಾಗಬೇಕಾದರೇ ಕೇಂದ್ರ ಸರಕಾರದ ಜಲ ಮಂಡಳಿಯಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಏಕಾಏಕಿ ಅವೈಜ್ಞಾನಿಕವಾದ ಯೋಜನಾ ವರದಿಯನ್ನು ಸಂಗಮೇಶ ನಿರಾಣಿಯವರು ಸಿದ್ದಪಡಿಸಿ ಎರಡು ಭಾಗದ ಜನರ ನಡುವೆ ವೈಷಮ್ಯದ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಮತ್ತು ರಾಜಕೀಯ ಬೆಳೆ ಬೇಯಿಸಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಯಿದನ್ನು ಉಗ್ರವಾಗಿ ಖಂಡಿಸುತ್ತೆÃವೆ ಎಂದು ಸುನೀಲ ಹೆಗಡೆ ಹೇಳಿದರು. ಕಾಳಿ ಉಳಿವಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲು ಒಂದು ವೇದಿಕೆ ಸಿದ್ದಪಡಿಸಿ, ಕಾಳಿ ನದಿಯನ್ನು ಉಳಿಸಲು ಪ್ರಾಮಾಣಿಕ ಹೋರಾಟ ಮಾಡಲು ನಾವು ಸಿದ್ದವಾಗಿದ್ದೆÃವೆ. ಕಾಳಿ ನದಿ ಜೋಡಣೆಯ ವಿಷಯದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಂದಾಗಿ ಹೋರಾಟ ಮಾಡಲು ಮುಂದಾಗುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗಿದೆ ಎಂದರು. ಕಾಳಿ ನದಿ ನೀರನ್ನು ಜೋಡಿಸುವ ಅವಿವೇಕಿ ಯೋಜನೆಯನ್ನು ಉಗ್ರವಾಗಿ ಖಂಡಿಸುವುದಾಗಿ ಸುನೀಲ ಹೆಗಡೆ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಹಳಿಯಾಳ ಘಟಕದ ಅಧ್ಯಕ್ಷ ಶಿವಾಜಿ ನರಸನಿ, ಜೊಯಿಡಾ ಘಟಕದ ಅಧ್ಯಕ್ಷ ತುಕರಾಮ ಮಾಂಜ್ರೆÃಕರ, ಪಕ್ಷದ ಪ್ರಧಾನ ಕರ‍್ಯದರ್ಶಿಗಳಾದ ನರೇಂದ್ರ ಚೌವ್ಹಾಣ್, ಸುಭಾಸ ಅರವೇಕರ, ನಗರ ಸಭಾ ಸದಸ್ಯರುಗಳಾದ ವಿಷ್ಣು ವಾಜ್ವೆ, ರೋಶನಜಿತ್, ದಶರಥ ಬಂಡಿವಡ್ಡರ, ಬುಧವಂತ ಗೌಡ ಪಾಟೀಲ, ವಿಜಯ್ ಕೋಲೆಕಾರ, ಮಹಾದೇವಿ ಭದ್ರಶೆಟ್ಟಿ, ರಮಾ ರವೀಂದ್ರ, ಪಕ್ಷದ ಮುಖಂಡರುಗಳಾದ ಮಂಜುನಾಥ ಪಾಟೀಲ, ಶಾರದ ಪರಶುರಾಮ, ಗುರು ಮಠಪತಿ, ರವೀಂದ್ರ ಶಾ, ಎಂ.ಎಸ್.ನಾಯ್ಕ, ಚಂದ್ರಕಾಂತ ಕ್ಷಿÃರಸಾಗರ, ಚಿದಾನಂದ ಕಲಶೆಟ್ಟಿ, ಹಸಿನಾ ಮಕಾಂದಾರ ಮೊದಲಾದವರು ಉಪಸ್ಥಿತರಿದ್ದರು.

loading...