ಕಿತ್ತೂರು ರಾಜರ ಆಶ್ರಯದಿಂದ ಸಾಹಿತ್ಯ ವೃದ್ದಿ- ನಾವಲಗಿ

0
49

ನಿಪ್ಪಾಣಿ 23: 5-6 ದಶಕಗಳಲ್ಲಿ ರಾಜಾಶ್ರಯ ನೀಡದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಂದೂ ಕಾವ್ಯ ಕೃತಿಗಳು ರಚನೆಗೊಂಡಿರಲಿಲ್ಲಾ ಕಿತ್ತೂರು ರಾಜರು ನೀಡಿದ ಸಹಕಾರದಿಂದ ಜಿಲ್ಲೆಯಲ್ಲಿ ಅನೇಕ ಕವಿಗಳು, ಲೇಖಕರು ರೂಪಗೊಂಡರೆಂದು ಡಾ. ಸಿ.ಕೆ.ನಾವಲಗಿ ಹೇಳಿದರು.

ಅವರು ನಿಪ್ಪಾಣಿಯ ಕೆಎಲ್ಇ ಸಂಸ್ತೆಯ ಜಿ.ಐ ಬಾಗೇವಾಡಿ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕ್ಕತಿ ಕುರಿತು ನಡೆದ ಗೋಷ್ಠಿಯಲ್ಲಿ ಕಾವ್ಯ ಕುರಿತು ಮಾತನಾಡುತ್ತಿದ್ದರು. 1800 ರಿಂದ 1950 ಇಸ್ವಿಯಲ್ಲಿ ಜಿಲ್ಲೆಯಲ್ಲಿ ಜಾನಪದ ಪರ್ವವೆಂದು ಹೇಳಬಹುದು, ಆ ಇಸ್ವಿಯಲ್ಲಿ ಅನೇಕ ಜಾನಪದ ವಿದ್ವಾಂಷರು ಜಿಲ್ಲೆಯಲ್ಲಿ ಆಗಿಹೋಗಿದ್ದಾರೆಂದು ಅವರು ಹೇಳಿದರು. ಬೆಟಗೇರಿ ಕೃಷ್ಣಶರ್ಮಾ ಅವರು ನವೋಧಯದ ಆದಿಕವಿ ಹಾಗೂ ಸರಜೂ ಕಾಟ್ಕರ ಅವರು ಅಂತ್ಯಕವಿಯೆಂದು ಬಣ್ಣಿಸಿದರು.

ಇಂದಿನ ಯುವ-ಯುವತಿಯರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದರೆ ಉತ್ತಮ ಕವಿಗಳಾಗಿ ಬೆಳೆಯಲು ಸಾದ್ಯ, ಜಿಲ್ಲೆಯ ಮಹಿಳೆಯರು ಕಾವ್ಯದ ದೃಷ್ಠಿಯಿಂದ ತುಂಬಾ ಮುಂದುವರೆಯುವ ಅವಶ್ಯ ಎಂದರು.

ಗದ್ಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ರಸೆಲ್ ಎಂಬ ಇಂಗ್ಲೀಷ್ ಅಧಿಕಾರಿ ಜಿಲ್ಲೆಗೆ ಬಂದಾಗ ಅವರು ಬೇರೆ ಬೇರೆ ಜಿಲ್ಲೆಗಳ ಸಂಸ್ಕ್ಕತ ಹಾಗೂ ಇನ್ನಿತರ ಭಾಷೆಗಳ ಶಿಕ್ಷಕರನ್ನು ಕರೆಯಿಸಿಕೊಂಡು ಸರಕಾರಿ ಶಿಕ್ಷಕರ ತರಬೆತಿ ಕೇಂದ್ರವನ್ನು ಪ್ರಾರಂಭಿಸುವುದರ ಮೂಲಕ ಜಿಲ್ಲೆಯಲ್ಲಿ ಗದ್ಯ, ಕಾದಂಬರಿಗಳ ಸೃಷ್ಠಿಗೆ ಕಾರಣರಾದರು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಗದ್ಯ ಕಾವ್ಯಕ್ಕೆ ಪ್ರಚೋದನೆ ನೀಡಿದವರು ಗಂಗಾಧರ ತೂರಮುರಿ ಅವರು ಎಂದು ಹೇಳಿದ ಅವರು ಜಿಲ್ಲೆಯ ಅನೇಕ ಸಾಹಿತಿಗಳು ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯಕ್ಕೆ ಸೀಮಿತವಾಗಿದ್ದಾ ರೆಂದು ತಿಳಿಸಿದರು. ನಿಪ್ಪಾಣಿ ವಾಡೆಯ ಕುರಿತು ಮಾತನಾಡಿದ ಡಾ.ಸಂತೋಷ ಹಾನಗಲ್ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ರುವ ಅನೇಕ ವಾಡೆಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಸ್ಮಾರಕವನ್ನಾಗಿ ಮಾಡುವುದರ ಮೂಲಕ ವಾಡೆಗಳನ್ನು ರಕ್ಷಿಸುವ ಅಗತ್ಯವಿದೆ, ಸಾರ್ವಜನಿಕರು ವಾಡೆಗಳ ಬಗ್ಗೆ ಅಸಡ್ಡೆ ತೊರದೆ ಅವುಗಳ ಉಳವಿಗಾಗಿ ಶ್ರಮೀಸಿದರೆ ಸರಕಾರ ತಾನೆ ಸಂರಕ್ಷಣೆ ಮಾಡುತ್ತದೆಂದು ಹೇಳಿದರು. ಹಿರಿಯ ಸಾಹಿತಿ ಡಾ.ವ್ಹಿ.ಎಸ್.ಮಾಳಿ ಆಶಯ ನುಡಿಯಲ್ಲಿ ಮಾತನಾಡಿ ಸಮ್ಮೇಳನ ಗಳು ದೇಷವನ್ನು ಸೃಷ್ಠಿ ಮಾಡದೇ ಪ್ರೀತಿಯನ್ನು ಹಂಚ್ಚಿಕೊಳ್ಳುವಂತಾಗಬೇಕೆಂದು ಹೇಳಿದರು.

ಡಾ. ಸ್ಮಿತಾ ಸುರೇಬಾನಕರ ಅಧ್ಯಕ್ಷತೆ ವಹಿಸಿದರು. ಚಿಂಚಣಿಯ ಅಲ್ಲಂಪ್ರಭು ಮಹಾಸ್ವಾಮಿಗಳು ಸಮ್ಮೇಳನಾಧ್ಯಕ್ಷ ಸರಜೂ ಕಾಟ್ಕರ, ಡಾ. ಬಸವರಾಜ ಜಗಜಂಪಿ, ಪ್ರಾಚಾರ್ಯ. ಬಿ.ಎಸ್.ಗವಿಮಠ, ಡಾ. ದಯಾನಂದ ನೂಲಿ, ಆನಂದ ಆರ್ವಾರೆ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಗಾರ್ಗಿ ಸ್ವಾಗತಿಸಿದರು. ನೀತಾ ವಿಜಾಪೂರೆ ಕಾಯ್ಕ್ತ್ರಮ ನಿರೂಪಿಸಿದರು. ಈ.ಎಸ್.ಸೋನಾರ ವಂದಿಸಿದರು.

 

loading...

LEAVE A REPLY

Please enter your comment!
Please enter your name here