ಕಿತ್ತೂರು ಸಂಸ್ಥಾನದ ಸಮಗ್ರ ದಾಖಲೆಗಳ ಶೋಧ ಮತ್ತು ಪ್ರಕಟಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನ

0
25

ಧಾರವಾಡ : 01 ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಕಿತ್ತೂರು ಸಂಸ್ಥಾನದ ಸಮಗ್ರ ದಾಖಲೆಗಳ ಶೋಧ ಮತ್ತು ಪ್ರಕಟಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಕಿತ್ತೂರು ಕನ್ನಡಿಗರ ಹಮ್ಮೆಯ ಸಂಸ್ಥಾನವಾಗಿದ್ದು, ಇದಕ್ಕೆ ಸಂಬಂಧಪಟ್ಟ ಇಂಗ್ಲಿಷ್, ಮರಾಠಿ ಇತ್ಯಾದಿ ಸಮಕಾಲೀನ ದಾಖಲೆಗಳನ್ನು ಸಮಗ್ರವಾಗಿ ಸಂಶೋಧಿಸಿ, ಪರಿಷ್ಕರಿಸಿ, ಕನ್ನಡಕ್ಕೆ ಅನುವಾದಿಸಬೇಕಾಗಿದೆ. ಪ್ರತಿವರ್ಷ ಜರುಗುವ ಕಿತ್ತೂರು ಉತ್ಸವದಲ್ಲಿ ಇದರ ಪ್ರಸ್ತಾಪವಾಗುತ್ತಲಿದ್ದಿತು. ಆದರೆ ನಿರ್ದಿಷ್ಟ ಯೋಜನೆ ಆರಂಭವಾಗಿರಲಿಲ್ಲ. ಈಗ ಕಿತ್ತೂರಿನ ಜಿಲ್ಲಾ ಸ್ಥಳವಾಗಿರುವ ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ತನ್ನ ಕರ್ತವ್ಯದ ಭಾಗವೆಂಬಂತೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಧಾರವಾಡ, ಪುಣೆ, ಮುಂಬೈ, ಮದ್ರಾಸ, ಹೈದರಾಬಾದ, ದಿಲ್ಲಿ, ಲಂಡನ್, ಎಡಿನ್ಬರ್ಗ ಮೊದಲಾದ ಕೇಂದ್ರಗಳಿಂದ ಸಂಗೊಳ್ಳಿ ರಾಯಣ್ಣನ ಹೋರಾಟದ ವರೆಗಿನ ದಾಖಲೆಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಈ ವರೆಗೆ ದೊಡ್ಡಭಾವೆಪ್ಪ ಮೂಗಿ, ತಲ್ಲೂರ ರಾಯನಗೌಡ, ಗ.ಸ. ಹಾಲಪ್ಪ ಮೊದಲಾದವರು ಮಾಡಿದ ಕಾರ್ಯವನ್ನು ಗಮನಿಸಿ, ಸುಮಾರು 3 ಸಾವಿರ ದಾಖಲೆಗಳನ್ನು ಶೋಧಿಸಲಾಗುತ್ತದೆ. ನರಗುಂದ ಸರಕಾರಿ ಕಾಲೇಜಿನ ಇತಿಹಾಸ ಅಧ್ಯಾಪಕ ಡಾ. ಎ.ಬಿ. ವಗ್ಗರ ಅವರು ಇದರ ನಿರ್ದೇಶಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here