ಕಿತ್ತೂರ ಉತ್ಸವದಲ್ಲಿ ಜನಮನ ಸೆಳೆದ ಸೈಕಿಂಗ್‌ ಸ್ಪರ್ಧೆ

0
51

ಚನ್ನಮ್ಮ ಕಿತ್ತೂರು : ಐತಿಹಾಸಿಕ ರಾಜ ಮನೆತನಗಳು ಹಬ್ಬಗಳು ಮತ್ತು ಕಲೆ ಸಂಸ್ಕೃತಿಗೆ ನೀಡುವಷ್ಠು ಒತ್ತನ್ನು ಕ್ರೀಡೆಗೂ ನೀಡುತಿದ್ದರು. ಈ ನಿಟ್ಟಿನಲ್ಲಿ ವಿಜಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣದ ಸಂಯೋಗದಲ್ಲಿ ಸೈಕ್ಲೀಂಗ್‌, ವಾಲಿಬಾಲ್‌, ಹಾಗೂ ಕಬ್ಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಿ ಗತವೈಭವವನ್ನು ಮೆಲುಕು ಹಾಕುವಂತೆ ಮಾಡಿದೆ.
ಬೆಳಗ್ಗೆ 7.30 ಕ್ಕೆ ಕಿತ್ತೂರಿಂದ ಅಂದಾಜು 20 ಕಿಮೀ ದೂರವಿರುವ ಸಂಗೊಳ್ಳಿ ಮಹಾದ್ವಾರದವರೆಗೆ ಹಾಗೂ ಮರಳಿ ಕಿತ್ತೂರಿನ ಅರಳಿಕಟ್ಟಿಯವರೆಗೆ ಪುರುಷರ ಹಾಗೂ ಇದೇ ಮಾರ್ಗದಲ್ಲಿ 10 ಕಿಮೀ ದೂರದ ವರೆಗೆ ಮಹಿಳೆಯರ ಸೈಕ್ಲೀಂಗ್‌ ಸ್ಪರ್ಧೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ ಅದ್ಯಕ್ಷ ಹನೀಪ್‌ ಸುತಗಟ್ಟಿ, ಯುವಕರು ದೇಶದ ಆಸ್ತಿಯಾಗಿದ್ದು ಈ ನಿಟ್ಟಿನಲ್ಲಿ ಯುವಕರು ದೇಶಿ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವದರ ಮೂಲಕ ಉಳಿಸಿ ಬೆಳಸಬೇಕು ಹಾಗೂ ಎಲ್ಲ ಸ್ಪರ್ದಾಳುಗಳು ಕ್ರೀಡಾ ಮನೋಭಾವನೆಯಿಂದ ಆಟದಲ್ಲಿ ಪಾಲ್ಗೋಳ್ಳಬೆಕೆಂದು ಕಿವಿಮಾತನ್ನು ಹೇಳಿದರು.
ಪುರುಷರ ಸೈಕ್ಲಿಂಗ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗೋಕಾಕದ ಬಸವರಾಜ ದಳವಾಯಿ, ದ್ವೀತಿಯ ಸ್ಥಾನವನ್ನು ಚಿಕ್ಕೋಡಿಯ ಬಾಳಾಸಾಬ ಬೆಳಕೋಡ ಹಾಗೂ ತೃತೀಯ ಸ್ಥಾನವನ್ನು ರಾಯಭಾಗದ ಬೋರಗೊಡ ಪಡೆಯುವದರ ಮೂಲಕ ಗೆಲುವಿನ ನಗೆ ಬಿರಿದರು. ಮಹಿಳೆಯರ ಸೈಕ್ಲೀಂಗ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೆಳಗಾವಿಯ ಪೂಜಾ ಮುಚ್ಚಂಡಿ, ದ್ವೀತಿಯ ಸ್ಥಾನವನ್ನು ಬೆಳಗಾವಿಯ ಹರಿಣಿ ಎಸ್‌, ತೃತೀಯ ಸ್ಥಾನವನ್ನು ಬೆಳಗಾವಿಯ ರೋಹಿಣಿ ಪಾಟೀಲ ಪಡೆಯುವದರ ಮೂಲಕ ವೀರ ರಾಣಿ ಚನ್ನಮ್ಮಾಜಿಗೆ ವೀರವಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡ ಇಲಾಖೆ ಉಪನಿರ್ದೆಶಕಿ ಸುಚಿತ್ರಾ ನಲವಿಗಿ, ಕಿತ್ತೂರು ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ, ಸಿಪಿಐ ಶ್ರೀನಿವಾಸ ಹುಂಡಿ, ಎಸ್‌.ವಿ.ಜಮಾದಾರ್‌, ರವಿ ಜಾಲಿಕಟ್ಟಿ, ಎಮ್‌.ಪಿ.ಮಕನೂರು. ಹಾಜರಿದ್ದರು.

loading...