ಕಿರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ ‘ರಂಗೀಲಾ’ ಬೆಡಗಿ

0
17

ಎರಡು ವರ್ಷಗಳ ಹಿಂದೆ ವಿವಾಹ ಬಂಧನಕ್ಕೆ ಒಳಗಾದ ಬಳಿಕ ಬಹುತೇಕ ಕಣ್ಮರೆಯಾಗಿದ್ದ ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್ ಮತ್ತೆ ನಟನೆಯತ್ತ ಮುಖ ಮಾಡಿದ್ದು ಗೊತ್ತೇ ಇದೆ.
ಇರ್ಫಾನ್ ಖಾನ್ ನಾಯಕ ನಟನಾಗಿದ್ದ ಬ್ಲಾಕ್ ಮೇಲ್ ಚಿತ್ರದಲ್ಲಿ ‘ಆಯ್ ಹೈ’ ಎಂದು ಮೈ ಬಳುಕಿಸಿ ಮಿಂಚಿದ್ದ ಊರ್ಮಿಳಾ ಇದೀಗ ಟಿ.ವಿ. ಪರದೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಗಣೇಶ ಚತುರ್ಥಿ ಪ್ರಯುಕ್ತ ಐದು ವಾರಗಳ ಕಾಲ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗಲಿರುವ ‘ಅದ್ಭುತ್ ಗಣೇಶ ಉತ್ಸವ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಿ ಮಾಡಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಭಾಗವಹಿಸಲಿರುವ ಈ ಟಿವಿ ಶೋನಲ್ಲಿ ಊರ್ಮಿಳಾ ಅವರು ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ ‘ಬಾಜಿ ರಾವ್ ಮಸ್ತಾನಿ’ ಯ ಪಿಂಗಾ ದಪೋರಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿಗೆ ಊರ್ಮಿಳಾಗೆ ಖ್ಯಾತ ನೃತ್ಯಗಾತಿ ಶಕ್ತಿ ಮೋಹನ್ ಸಾಥ್ ನೀಡಲಿದ್ದಾರೆ.

loading...