ಕುಡಿಯುವ ನೀರಿನಲ್ಲಿ ಡ್ರೈನೆಜ್ ನೀರು: ಸ್ಥಳೀಯರ ಆಕ್ರೋಶ

0
48

ಕುಡಿಯುವ ನೀರಿನಲ್ಲಿ ಡ್ರೈನೆಜ್ ನೀರು: ಸ್ಥಳೀಯರ ಆಕ್ರೋಶ

ಕನ್ನಡಮ್ಮ ಸುದ್ದಿ-ಬೆಳಗಾವಿ : ಕಳೆದ ಹದಿನೈದು ದಿನಗಳಿಂದ ನಗರದ ಬಡಕಲ್ಲಗಲ್ಲಿಯಲ್ಲಿ ನಿವಾಸಿಗಳಿಗೆ ಮನೆಯ ನಲ್ಲಿಯಲ್ಲಿ ಡ್ರೈನೆಜ್ ನೀರು ಪೂರೈಕೆಯಾಗುತ್ತಿದ್ದು, ಈ ಸಮಸ್ಯೆಯ ಬಗ್ಗೆ ತಿಳಿಸಿದರು ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯ ನಳದಲ್ಲಿ ಡ್ರೈನೆಜ್‌ ಬರುತ್ತಿದ್ದು,ಕಳೆದ ಹದಿನೈದು ದಿನಗಳಿಂದ ಅದೇ ನೀರನ್ನು ಸೇವನೆ‌ ಮಾಡುತ್ತಿದ್ದೆವೆ.ಆದರೆ ಒಂದು ವಾರದಿಂದ ಸಂಪೂರ್ಣ ವಾಸನೆ, ಕೊಳಚೆಯಾಗಿ ನಲ್ಲಿಯಲ್ಲಿ ನೀರು ಬರುತ್ತಿದೆ,ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ. ಗಮನ‌ ಹರಿಸುತ್ತಿಲ್ಲ ಒಬ್ಬರ ಮೇಲೆ ಒಬ್ಬರೂ ಅಧಿಕಾರಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅಸಿಸ್ಟೆಂಟ್ ಎಂಜಿಯರ
ಅಧಿಕಾರಿ ಸ್ಥಳಕ್ಕೆ ಆಗಮಿಸಿದಾಗ ಗೆರಾವು ಹಾಕಿ ಕೂಡಲೇ ಇಲ್ಲಿ ಸ್ಥಳಿಯರು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಸಮಯ ವಿಳಂಬವಾದರೆ ಟ್ಯಾಂಕರನಲ್ಲಿ ಗಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಸ್ಥಳಿಯರೊಂದಿಗೆ ಅಧಿಕಾರಿ ಮಾತನಾಡಿ, ತಕ್ಷಣವೇ ಈ ಸಮಸ್ಯೆ ಯನ್ನು ಬಗೆ ಹರಿಸುವ ಪ್ರಯತ್ನ‌ ಮಾಡುತ್ತೆವೆ.ವಿಳಂಬ ವಾದರೆ ಟ್ಯಾಂಕರ ಮೂಲಕ ನೀರು ಪುರೈಸುತ್ತವೆ ಎಂದು ಭರವಸೆ ನೀಡಿದ್ದಾರೆ.

loading...