ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಖಾದರ್

0
8

ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಖಾದರ್
ಬೆಳಗಾವಿ: ೨೪ಷ೭ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮೂಗಿಸಲು ಮೂರರಿಂದ ನಾಲ್ಕು ವರ್ಷವಾಗಲಿದೆ. ನಗರದಲ್ಲಿ ಅಲ್ಲಿಯವರೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಪಟ್ಟಂತೆ ಮಾಹಿತಿ ಪಡೆದು ಮಾತನಾಡಿದರು.
ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಮೂಲಗಳಾದ ರಕ್ಕಸಕೊಪ್ಪ,ಹಿಡಕಲ್ ಜಲಾಶಯಗಳ ನೀರಿನ ಮಟ್ಟವನ್ನು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ೧೦ ವಾರ್ಡ್ಗಳಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಇದೆ. ಉಳಿದ ವಾರ್ಡಗಳಿಗೆ ಕಾಮಗಾರಿ ಆಗಬೇಕಾದರೆ ನಾಲ್ಕು ವರ್ಷವಾಗಲಿದೆ. ಆದ್ದರಿಂದ ಅಲ್ಲಿಯವರೆಗೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ಶಾಸಕ ಅಭಯ ಪಾಟೀಲ ಮಾತನಾಡಿ, ಹಿಡಕಲ್,ರಕ್ಕಸಕೊಪ್ಪ ಜಲಾಶಯದಿಂದ ಪಂಪಿಗ್ ಮಾಡಲು ಪ್ರತಿ ವರ್ಷ ಒಟ್ಟು ೨೩ ಕೋಟಿ ವಿದ್ಯುತ್ ಬಿಲ್ ಬರಲಿದೆ. ಅದೇ ವೆಚ್ಚದಲ್ಲಿ ರಕ್ಕಸಕೋಪ್ಪ ಜಲಾಶಯದಲ್ಲಿ ನೀರಿ ಮಟ್ಟ ಹೆಚ್ಚಿಸುವಂತೆ ಕ್ರಮ ಕೈಗೊಂಡರೆ ಉತ್ತಮವಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಸದ ಸಮಸ್ಯೆ ; ದಿನನಿತ್ಯ ನಗರದಲ್ಲಿ ಡೋರ್ ಡೋರ್ ಕಸ ಸಂಗ್ರಹ ಮಾಡಲಾಗುತ್ತದೆ. ಪಾಲಿಕೆಯಲ್ಲಿ ಪೌರಕಾರ್ಮಿಕರ ಗುತ್ತಿಗೆದಾರರ ಖಾಯಂ ಪೌರಕಾರ್ಮಿಕರ ಕೆಲಸ ನಿರ್ವಹಿಸುತ್ತಿದ್ದಾರೆ. ಕಸ ವಿಲೇವಾರಿಯ ಬಗ್ಗೆ ಆಯುಕ್ತ ಶಶಿಧರ ಕುರೇರ ಮಾಹಿತಿ ನೀಡಿದರು. ಇದೇ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಆಗುತ್ತಿರುವ ಸಮಸ್ಯೆಗಳ ಸಚಿವರ ಗಮನಕ್ಕೆ ತಂದರು.
ಕಾರ್ ಪಾರ್ಕಿಂಗ್ ಸಮಸ್ಯೆ; ನಗರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಯಾವ ರೀತಿ ಕ್ರಮ ಕೈಗೊಂಡಿದ್ದಿರಾ ಎಂದು ಅಧಿಕಾರಿಗಳಿಗೆ ಸಚಿವರ ಪ್ರಶ್ನಿÃಸಿದರು. ಸಚಿವರಿಗೆ ಮಾಹಿತಿ ನೀಡಿದ ಆಯುಕ್ತ ಶಶಿಧರ ಕುರೇರ ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸಲು ೪.೫ ಕೋಟಿ ವೆಚ್ಚದಲ್ಲಿ ೨ ಪ್ರದೇಶದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಸಲಹೆ ನೀಡಿದ ಶಾಸಕ ಅನಿಲ ಬೆನಕೆ ಮಹಾನಗರ ಪಾಲಿಕೆಯಿಂದ ನಗರದ ಮಧ್ಯ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅದರಿಂದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿಲ್ಲ. ಆದ್ದರಿಂದ ನಗರದ ಸಂಭಾಜಿ ವೃತ್ತದ ಹತ್ತಿರದಲ್ಲಿ ಇರುವ ದಂಡು ಮಂಡಳಿಯ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲನೆ ನಡಸಿ ಚರ್ಚಿಸಿ ಎಂದು ಪಾಲಿಕೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಸ್.ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಪಾಲಿಕೆ ಅಧಿಕಾರಿಗಳು ಇದ್ದರು.

loading...