ಕುದುರೆಮನಿಯಾಟದಲ್ಲಿ   ಅಂದರ್ ಬಹಾರ್ ಯಾರು ? ಅಮಾನತ್ತಾದ ಪಿಐ ಪರ ಜಾರಕಿಹೊಳಿ ಬ್ರದರ್ಸ್ – ದಾಳಿ ವೇಳೆ ಹಿಂದಿರುಗಿದರಾ ಹೂಗಾರ !

0
135

ಕುದುರೆಮನಿಯಾಟದಲ್ಲಿ   ಅಂದರ್ ಬಹಾರ್ ಯಾರು ?

ಅಮಾನತ್ತಾದ ಪಿಐ ಪರ ಜಾರಕಿಹೊಳಿ ಬ್ರದರ್ಸ್ – ದಾಳಿ ವೇಳೆ ಹಿಂದಿರುಗಿದರಾ ಹೂಗಾರ !

ಆನಂದ ಭಮ್ಮಣ್ಣವರ

ಬೆಳಗಾವಿ:ನಗರದ ಪೋಲಿಸ ಆಯುಕ್ತರ ವ್ಯಾಪ್ತಿಗೆ ಬರುವ ಕುದುರೆಮನಿಯಲ್ಲಿ ಅಕ್ರಮವಾಗಿ ಮಟಕಾ,ಜೂಜಾಟ ನಡೆದ ಪ್ರಕರಣ ಜಿಲ್ಲೆಯಲ್ಲಿ ತಲ್ಲಣಗೋಳಿಸಿದೆ. ಒಂದೂ ವರ್ಷದಿಂದ ಇಲ್ಲಿ ಅಕ್ರಮವಾಗಿ ಜೂಟಾಟ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ದಾಳಿ ಮಾಡಿರಲಿಲ್ಲ.ಈಗ ದಾಳಿ ನಡೆಸಿದ ವೇಳೆ ಸ್ತಳಿಯ ಕಾಕತಿ ಮತ್ತು ಗ್ರಾಮೀಣ ಠಾಣೆಯ ಪೋಲಿಸರು ಭಾಗಿಯಾಗಿಲ್ಲ.ದಾಳಿಯಲ್ಲಿ ಕರ್ತವ್ಯೆಲೋಪದ ಆರೋದಡಿ ಅಮಾನತಾದ ರಮೇಶ ಗೋಕಾಕ ಬೆನ್ನಿಗೆ ಸಚಿವ ರಮೇಶ ಜಾರಕಿಹೊಳಿ ಶಾಸಕ ಸತೀಶ ಜಾರಕಿಹೋಳಿ ನಿಂತಿರುವುದು ಚರ್ಚೆಗೆ ಗ್ರಾಸವಾಗಿದೆ .

ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕುದುರೆಮನಿಯಲ್ಲಿ ಕಳೆದ ಆರು ತಿಂಗಳಿನಿಂದ ಅಕ್ರಮವಾಗಿ ಮಟಕಾ ಹಾಗೂ ಜೂಜಾಟ ಜೋರಾಗಿ ನಡೆಯುತ್ತಿತ್ತು. ಸ್ಥಳೀಯ ಠಾಣೆಯ ಹಿರಿಯ ಪೋಲಿಸ ಅಧಿಕಾರಿಗಳು ಶಾಮೀಲಾಗಿ ದಂದೆ ಕೋರರಿಗೆ ರಕ್ಷಣೆಯಾಗಿ ನಿಂತಿದ್ದರು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಏಕಾಏಕಿ ದಾಳಿ ಮಾಡುವ ಹಿಂದೆ ಕಾಣದ ಕೈಗಳ ಕೈವಾಡವಿದೆ . ದಾಳಿ ಮಾಡಲು ತೆರಳಿದ್ದ ಸಿಸಿಬಿ ಪಿಐ ರಮೇಶ ಹೂಗಾರ ತಲೆಗೆ ಪೆಟ್ಟು ಬಿದ್ದಿದೆÉ ಎಂದು ದಾಳಿಯ ವೇಳೆ ಹಿಂದಿರುಗಿದ್ದಾರೆ ಎಂದು ಹೇಳಲಾಗುತ್ತಿದೆ.ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕರ್ತವ್ಯ ಲೋಪ ಎಸಗಿದ ಕಾಕತಿ ಸಿಪಿಐ ರಮೇಶ ಗೋಕಾಕ ಅಮಾನತಾಗಿದ್ದಾರೆ. ಆದರೆ ಕಾಕತಿ ಸಿಪಿಐ ಅವರಿಗೆ ಇಷ್ಟು ದಿನ ದಾಳಿ ಮಾಡದಂತೆ ಒತ್ತಡ ಯಾರು ಹಾಕಿದ್ದರು?ಈಗ ಏಕಾಏಕಿ ದಾಳಿ ನಡೆಸಲು ಹೇಳಿದವರು ಯಾರು?ದಾಳಿ ಸಂಬಂಧ ಉನ್ನತ ಅಧಿಕಾರಿಗಳ ಮದ್ಯ ಭಿನ್ನಾಪ್ರಾಯವಿತ್ತಾ? ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ದಾಳಿ ವಿಷಯ ಆಯುಕ್ತರಿಗೆ ಏಕೆ ತಿಳಿಸÀಲಿಲ್ಲ ?

ಇಷ್ಟು ದೊಡ್ಡ ಪ್ರಮಾಣದ ಜೂಜಾಟದ ದಂದೆ ಬಗ್ಗೆ ಪೊಲೀಸ್ ಕಮೀಷನ್‍ರೆಗೆ ತಿಳಿಸದೆ ಅಧಿಕಾರಿಗಳು ದಾಳಿ ನಡೆಸಿದ್ದಾರೆÉ ಎಂದು ಹೇಳಲಾಗುತ್ತಿದೆ. ದಾಳಿ ನಡೆಸಿದ್ದು ಬೇರೆಯವರು ಪ್ರಕರಣದ ಎಪ್‍ಐಆರ್ ದಾಖಲಿಸಿದ್ದು ಬೇರೆಯ ಅಧಿಕಾರಿಗಳು ಎಂದು ತಿಳಿದು ಬಂದಿದೆ. ದಾಳಿ ನಡೆಸಿದವರೆ ಯಾಕೆ ಎಪ್‍ಐಆರ್ ದಾಖಲಿಸಲಿಲ್ಲ ಎಂಬವುದು ನಿಗೂಡವಾಗಿದೆ.

ಅಲ್ಲಿ ನಡೆಯುತ್ತಿದ್ದದು ಜೂಜಾಟ ಅಷ್ಟೇನಾ?

ಕುದುರೆಮನಿಯಲ್ಲಿ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಜೂಜಾಟದಲ್ಲಿ ತೊಡಗಿದ್ದ 40 ಜನರನ್ನು ಬಂಧಿಸಿ ಕೊರ್ಟ್‍ಗೆ ಹಾಜರ ಪಡೆಸಿದ್ದರು.ಆದರೆ ಅಲ್ಲಿ ಕೇವಲ ಜೂಜಾಟ ಮಾತ್ರ ನಡೆಯುತ್ತಿತಾ?ಹಾಗಾದರೆ ಮಟಕಾ ದಂಧೆ ನಡೆಯುತ್ತಿರಲಿಲ್ಲವೆ.ಪೊಲೀಸ್ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಮಟ್ಕಾ ದಂಧೆಕೊರರನ್ನು ರಕ್ಷಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಕಾಕತಿ ಸಿಪಿಐ ಪರ ಜಾರಕಿಹೊಳಿ ಸಹೋದರರು:

ಕುದುರೆಮನಿ ಜೂಜಾಟದ ಜೂಟಾಟವಾಡಿದ ಕಾಕತಿ ಸಿಪಿಐ ರಮೇಶ ಗೋಕಾಕ ಆರು ತಿಂಗಳಿನಿಂದ ಈ ಅಕ್ರಮ ಜೂಜಾಟ ಮತ್ತು ಮಟಕಾ ದಂದೆ ಅವ್ಯಾತವಾಗಿ ನಡೆಯುತ್ತಿದ್ದರು ಸುಮ್ಮನಿದದ್ದು ಇದರಲ್ಲಿ ಪೊಲೀಸರರು ಶಾಮೀಲು ಎಂಬುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ದಾಳಿಗೆ ತೆರಳಿದ್ದ ಕಾಕತಿ ಪಿಐ ಅರ್ದಕ್ಕೆ ನೆಪ ಹೇಳಿ ಪರಾರಿಯಾಗಿದ್ದಾರೂ ಏಕೆ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಇತ್ತ ಅಮಾನತಾದ ಸಿಪಿಐ ಗೋಕಾಕ ಪರವಾಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ ಶಾಸಕ ಸತೀಶ ಜಾರಕಿಹೊಳಿ ಮತ್ತು ಸಚಿವ ರಮೇಶ ಜಾರಕಿಹೊಳಿ ನಿಂತಿದ್ದಾರೆ.ಕಾಕತಿ ಸಿಪಿಐ ಪರವಾಗಿ ಮತ್ತು ಪೋಲಿಸ್ ಕಮಿಶನ್‍ರ ವಿರುದ್ದ ಗೃಹ ಸಚಿವರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಭಾಕ್ಸ್

ಗೋಕಾಕ ಅಮಾನತು ಇದೆ ಮೊದಲಲ್ಲ:

ಸಿಪಿಐ ರಮೇಶ ಗೋಕಾಕ ನಗರದ ಖಂಜರ ಗಲ್ಲಿಯ ಗಲಾಟೆ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿ ಮಾರ್ಕೆಟ್ ಠಾಣೆಯಿಂದ ಕಾಕತಿಗೆ ವರ್ಗಾವಣೆಯಾದ್ದರು.ಕಾಕತಿ ವ್ಯಾಪ್ತಿಗೆ ಬರುವ ಕುದುರೆಮನಿಯಲ್ಲಿನ ಜೂಜಾಟ ಇವರಿಗೆ ತಿಳಿದಿರಲಿಲ್ಲವೇ?ಆದ್ದರಿಂದ ಕರ್ತವ್ಯಲೋಪ ಸಾಬಿತಾಗಿದೆ.ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ನಗರ ಪೊಲೀಸ್ ಇಲಾಖೆ ಸಿಪಿಐ ರಮೇಶ ಗೋಕಾಕರನ್ನು ಅಮಾನತು ಮಾಡಿ ಆದೇಶ ಹೋರಡಿಸಿದ್ದಾರೆ.

loading...