ಕೃಷಿಯಲ್ಲಿ ನೂತನ ತಾಂತ್ರಿಕತೆ ಅವಶ್ಯ: ಪಿ.ಸಿ.ಗದ್ದಿಗೌಡರ

0
35

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ವಿದೇಶಗಳಲ್ಲಿ ಬೆಳೆಯುವ ವೈವಿಧ್ಯಮಯ ಬೆಳೆಗಳನ್ನು ಪ್ರದರ್ಶಿಸಲಾದ ಈ ತೋಟಗಾರಿಕೆ ಮೇಳದಲ್ಲಿ ರೈತರು ಭಾಗವಹಿಸಿ ತಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳವ್ಯದರ ಮೂಲಕ ಪ್ರಾತ್ಯಕ್ಷಿಕೆಗಳಿಂದ ಪ್ರಾಯೋಗಿಕವಾಗಿ ಪ್ರದರ್ಶಿಸಲ್ಪಟ್ಟ ಹೊಸ ಹೊಸ ತಳಿಗಳ ತೋಟಗಾರಿಕೆ ಬೆಳೆಗಳನ್ನು ರೈತಬಾಂಧವರು ವೀಕ್ಷಿಸಿ ಅನುಭವ ಪಡೆಯಬೇಕೆಂದು ಪಿ.ಸಿ.ಗದ್ದಿಗೌಡರ ಕರೆ ನೀಡಿದರು.
ತೋಟಗಾರಿಕೆ ವಿವಿಯ ಆವರಣದಲ್ಲಿ ನಡೆದ ಎರಡನೇ ದಿನದ ತೋಟಗಾರಿಕೆ ಬೃಹತ್‌ ಮೇಳದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ರೈತ ದಿನಾಚರಣೆ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಿಹಿಸಿ ಮಾತನಾಡಲು ಅವಕಾಶ ಸಿಕ್ಕಿದ್ದು ತಮ್ಮ ಸುದೈವ ಎನ್ನುತ್ತಾ, ಚೌಧರಿ ಚರಣಸಿಂಗ್‌ ರವರ ಯಶೋಗಾಥೆಯನ್ನು ಸ್ಮರಿಸಿದರು.
ವಿಜ್ಞಾನಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಎದುರಾಗುವ ತೊಂದರೆಗಳನ್ನು ಮೆಟ್ಟಿನಿಂತು ಹೊಸ ಹೊಸ ವಿಧಾನ, ಯಂತ್ರೋಪಕರಣಗಳನ್ನು ಕೃಷಿಯಲ್ಲಿ ಬಳಕೆ ಮಾಡಿದರೆ ಕೃಷಿಯಿಂದ ಸ್ವಾವಲಂಬಿ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗುತ್ತದೆ. ಆರೋಗ್ಯಕ್ಕೆ ಉತ್ತಮ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಔಷಧಿಗಳಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುವತ್ತ ರೈತರು ಗಮನಹರಿಸಬೇಕು. ಹೆಚ್ಚು ಆದಾಯ ಪಡೆಯುವತ್ತ ಗಮನಹರಿಸುವುದರ ಜೊತೆಗೆ ಗುಣಮಟ್ಟದ ಬೆಳೆ ಬೆಳೆಯಬೇಕು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಬಹಳ ಪರಿಶ್ರಮದಿಂದ ಆಯೋಜಿಸಿ ಪ್ರದರ್ಶಿಸಿದ ವೈವಿಧ್ಯಮಯ ತಳಿಗಳ ಬೆಳೆ, ಔಷಧಿ ಸಸ್ಯ, ಯಂತ್ರೋಪಕರಣ ಹಾಗೂ ಸಾಗುವಳಿ ಪ್ರಾತ್ಯಕ್ಷಿಕೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು. ಪ್ರಗತಿಪರ ರೈತರಾದ ಮಲ್ಲಣ್ಣ ನಾಗರಾಳ ಮಾತನಾಡಿ ಈಗ ಊಟದ ಮನೆ, ತೋಟದ ಬೆಳೆ, ಆಟದ ಬಯಲು ರಾಷ್ಟ್ರಕ್ಕೆ ಅತೀ ಅವಶ್ಯವಾಗಿದೆ. ಮಸಾರಿ, ಎರಿ ಹಾಗೂ ನೀರಾವರಿ ಹೊಲದ ಬಗ್ಗೆ ತಿಳಿಸುತ್ತಾ ಜಾನಪದ ಶೈಲಿಯಲ್ಲಿ ಸಮೃದ್ಧ ಬೆಳೆಯನ್ನು ರೈತ ಬೆಳೆಯಬೇಕಾದರೆ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬೇಕೆಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಡಾ.ಯೋಗಿರಾಜ್‌ ಪಾಟೀಲ್‌, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಬಿ.ಎಂ.ದೇಸಾಯಿ, ಶಿವಮೊಗ್ಗ ರೈತ ಮಂಡಳಿ ನಿರ್ದೇಶಕರು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಹೆಚ್‌.ಬಿ. ಲಿಂಗಯ್ಯ, ಶಿಕ್ಷಣ ನಿರ್ದೇಶಕರು, ಡಾ.ಕೆ.ಎಂ.ಇಂದಿರೇಶ್‌, ಕುಲಸಚಿವ ಡಾ.ವಿ.ನಾಚೇಗೌಡ, ಸಂಶೋಧನಾ ನಿರ್ದೇಶಕ ಡಾ. ವೈ.ಕೆ. ಕೋಟಿಕಲ್‌, ವಿಸ್ತರಣಾ ನಿರ್ದೇಶಕ ಡಾ. ಎನ್‌. ಬಸವರಾಜ, ಡೀನ್‌, ಸ್ನಾತಕೋತ್ತರ, ಡಾ. ಎಮ್‌.ಎಸ್‌. ಕುಲಕರ್ಣಿ, ಡೀನ್‌, ವಿದ್ಯಾರ್ಥಿ ಕಲ್ಯಾಣ, ಡಾ. ಕೆ.ಎನ್‌. ಕಟ್ಟಿಮನಿ, ಆಡಳಿತಾಧಿಕಾರಿ ಡಾ. ಆರ್‌.ಸಿ. ಜಗದೀಶ ಸ್ಭೆರಿದಂತೆ ಇತರರು ಉಪಸ್ಥಿತರಿದ್ದರು.

loading...