ಕೃಷಿ ಜಮೀನುಗಳ ಬೆಲೆ ಏರಿಸದಂತೆ ಮನವಿ

0
38

ಕೃಷಿ ಜಮೀನುಗಳ ಬೆಲೆ ಏರಿಸದಂತೆ ಮನವಿ

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಬೈಲಹೊಂಗಲ ಹಿರಿಯ ನೊಂದಣಿ ಅಧಿಕಾರಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಜಮೀನುಗಳ ಮೌಲ್ಯಮಾಪನವನ್ನು, ಅಧ್ಯಕ್ಷರು ಮೌಲ್ಯಮಾಪನಾ ಸಮಿತಿ ಮತ್ತು ನೋಂದಣಿ ಮಹಾಪರೀವಿಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ ಆದೇಶದನ್ವಯ ೧೮-೧೯ ನೇ ಸಾಲಿಗೆ ಜಾರಿಗೆ ಬರುವಂತೆ ಈಗಿನ ಮಾರುಕಟ್ಟೆ ಬೆಲೆಗಿಂತ ಶೇ.೧೫ ರಿಂದ ೨೦ ಪ್ರತಿಶತ ಹೆಚ್ಚಿಸಲಿದ್ದು ಅದರ ಬಗ್ಗೆ ಆಕ್ಷೆÃಪಣೆಗಳನ್ನು ಸಲ್ಲಿಸಲು ತಿಳಿಸಿದ್ದರಿಂದ ಭಾರತೀಯ ಕೃಷಿಕ ಸಮಾಜ ನವದೆಹಲಿ ವತಿಯಿಂದ ದರ ಹೆಚ್ಚಿಗೆ ಮಾಡಬಾರದು ಈಗಿನ ದರವನ್ನೆ ಮುಂದುವರೆಸಿಕೊಂಡು ಹೋಗುವದಾಗಬೇಕೆಂದು ಪ್ರಭಾರಿ ಹಿರಿಯ ನೋದಣಿ ಅಧಿಕಾರಿ ಶೈಲಾ ಗೌಡರ ಅವರಿಗೆ ಮನವಿ ಅರ್ಪಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ ಹಾಗೂ ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮನವಿ ಅರ್ಪಿಸಿ ಮಾತನಾಡಿ, ಮೊದಲೆ ನಾಲ್ಕೆöÊದು ವರ್ಷಗಳಿಂದ ಬರಗಾಲಕ್ಕೆ ತುತ್ತಾದ ರೈತರು ತಮ್ಮ ಜಮೀನುಗಳ ವಹಿವಾಟುಗಾಗಿ ಮುದ್ರಾಂಕ ಶುಲ್ಕ ಹೆಚ್ಚಾಗುತ್ತದೆ. ಅಲ್ಲದೆ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗುವದರಿಂದ ಆಸೆ ಆಮಿಷಗಳಿಗೆ ರೈತರು ಮೋರೆಹೊಗಿ ಕೃಷಿಯಿಂದ ವಿಮುಕ್ತರಾಗತಿದ್ದಾರೆ. ಇದರಿಂದ ಸಾಲದ ಸುಳಿ ಹೆಚ್ಚಾಗಿ ರೈತ ತನ್ನ ಜಮೀನವನ್ನು ಮಾರಟ ಮಾಡಿ ಕೃಷಿಯೆತರ ಉಧ್ಯಮಿಗಳು ತಮ್ಮ ತೆರಗೆ ಹಣ ಉಳಿಸುವದಗೋಸ್ಕರ ಕೃಷಿ ಭೂಮಿ ಖರೀದಿಗೆ ಮುಂದಾಗುತ್ತಿದ್ದು ರೈತರು ಜಮೀನು ಮಾರಾಟಮಾಡಿ ಆ ಭೂಮಿಯಲ್ಲಿಯೆ ರೈತ ದುಡಿಯುವ ಕೃಷಿ ಕಾರ್ಮಿಕ ವಾಗುತ್ತಿರುವದು ಕಳವಳಕಾರಿಯಾಗಿದೆ ಎಂದರು.
ಆದ್ದರಿಂದ ಹೊಸದಾಗಿ ಪ್ರಸ್ಥಾಪಿಸಿರುವ ಮಾರುಕಟ್ಟೆಯ ಮೌಲ್ಯದ ಪರಿಷ್ಕರಣೆಯ ಆದೇಶವನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಇದಕ್ಕೆ ಒಪ್ಪದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ. ರೈತ ಮುಂಖಡರಾದ ಮರುತಿ ತಿಗಡಿ, ಬಸವರಾಜ ದುಗ್ಗಾಣಿ, ನಿಂಗಪ್ಪ ಕರಿಕಟ್ಟಿ ಮುಂತಾದವರು ಇದ್ದರು.

loading...