ಕೃಷಿ ಯಾಂತ್ರೀಕರಣ ಮಾಹಿತಿ ಕಾರ್ಯಾಗಾರ

0
31

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು: ರೈತರು ಕೃಷಿ ಭೂಮಿಯನ್ನು ಉಳುಮೆ ಮಾಡುವುದಕ್ಕೆ ಸಾಕು ಪ್ರಾಣಿಗಳನ್ನು ಬಳಸಿಕೊಂಡು ಎತ್ತು ಮತ್ತು ಕೋಣಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳು ಕಡಿಮೆಯಾಗಿದ್ದು ಹಾಗೂ ಸಮಯಕ್ಕೆ ಸರಿಯಾಗಿ ಮಳೆ ಆಗದೇ ರೈತರು ಸಂಕಷ್ಟಕ್ಕಿಡಾಗುತ್ತಿದ್ದರು ಎಂದು ಸಂಪನ್ಮೂಲ ವ್ಯಕ್ತಿವಿ.ಎಸ್‌.ಕಿರಗೇರಿ ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದರು.
ತಾಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷಿ ಯಾಂತ್ರೀಕರಣ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಉಳುಮೆ ಮಾಡದೇ ಬೆಳೆಗಳನ್ನು ಬೆಳೆಯದೇ ಕೂಲಿ ಕಾರ್ಮಿಕರ ಕೊರತೆಯಿಂದ ಜೀವನ ಕಷ್ಟದಾಯಕವಾಗಿತ್ತು. ಇತ್ತೀಚಿಗೆ ವಿಜ್ಞಾನ ಬೆಳದಂತೆ ತಾಂತ್ರಿಕತೆಯಿಂದ ಯಂತ್ರಗಳನ್ನು ಬಳಕೆ ಮಾಡಿಕೊಂಡು ಭೂಮಿಯನ್ನು ಉಳುಮೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಉಳುಮೆ ಮಾಡಿ ಭೂಮಿಯನ್ನು ಹಸನ ಮಾಡಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯಬಹುದು ಮತ್ತು ರೈತನ ಶ್ರಮ ಕೂಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತಿದೆ, ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಬಸವರಾಜ ಅಂಗಡಿ ಮಾತನಾಡಿ, ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆ ಕೇಂದ್ರವನ್ನು ಮಾಡಿದ್ದು ರೈತರಿಗೆ ಕಡಿಮೆ ಭಾಡಿಗೆ ದರದಲ್ಲಿ ಲಭ್ಯವಿರುತ್ತವೆ. ಯಂತ್ರಧಾರೆಯ ಉದ್ದೇಶ ಕಾರ್ಮಿಕರ ಕೊರತೆ ಉತ್ಪಾದನೆ ಮತ್ತು ಹೆಚ್ಚಳ ಕೃಷಿ ಚಟುವಟಿಕೆಗಳ ಅನುಷ್ಠಾನ ರೈತರಿಗೆ ನ್ಯಾಯಯುತ ಬಾಡಿಗೆ ಅತ್ಯಾವಶ್ಯಕ ಯಂತ್ರಗಳ ಮೂಲಕ ಕೃಷಿಯತ್ತ ಆಕರ್ಷಣೆ ಯಂತ್ರಧಾರೆಯ ಉದ್ದೇಶವಾಗಿರುತ್ತದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಬಾನವಳ್ಳಿ ಕಾರ್ಯಾಗಾರ ಉದ್ಘಾಟಿಸಿದರು. ರೈತ ಸಂಘದ ಅಧ್ಯಕ್ಷ ಸುಭಾಸ ನ್ಯಾಮ್ತಿ, ಯೋಜನಾಧಿಕಾರಿಗಳು ಈಶ್ವರಎಮ್‌.ಎಸ್‌, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಪಾಲಾಕ್ಷಪ್ಪ ಕಡೆಮನಿ, ವಲಯದ ಸೇವಾಪ್ರತಿನಿಧಿಗಳು ಹರೀಶ ಕರಿಯಿಜ್ಜಿ ಇದ್ದರು.

loading...