ಕೆಎಲ್‌ಇ ಬೆಳವಣಿಗೆಯಲ್ಲಿ ಲಿಂಗರಾಜ ಪಾತ್ರ ಮಹತ್ವದ್ದು

0
52

ನಿಪ್ಪಾಣಿ 12: ತ್ಯಾಗ, ಬಲಿದಾನ, ದೂರದೃಷ್ಟಿ, ಸಾಮಾಜಿಕ ಕಳಕಳಿ ಹೊಂದಿದ ವಿರಳ ವ್ಯಕ್ತಿತ್ವ ಪ್ರಾತಃಸ್ಮರಣೀಯ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಆದರ್ಶ, ಅಕ್ಷರ ಪ್ರೇಮಗಳಿಂದಾಗಿ ಕೆ.ಎಲ್‌.ಇ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆಯಲು ಕಾರಣವಾಗಿದೆ ಎಂದು ಬೈಲಹೊಂಗಲದ ಕೆಆರ್‌ಸಿಇಎಸ್‌ಜೆ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಸಂಗಮನಾಥ ಲೋಕಾಪುರ ಹೇಳಿದರು. ಕೆಎಲ್‌ಇ ಸಂಸ್ಥೆ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಸ್ಥಳೀಯ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ತ್ಯಾಗವೀರ ಸಿರಸಂಗಿ ಲಿಂಗರಾಜರ 157ನೇ ಜಯಂತಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾ. ಡಾ.ಎಮ್‌.ಬಿ.ಕೋಥಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇತ್ತೀಚೆಗೆ ಲಿಂಗರಾಜ ಜಯಂತಿಯ ಪ್ರಯುಕ್ತವಾಗಿ ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಜರುಗಿದ್ದ ಸಮೂಹ ಗೀತೆ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಆಶಾ ಮಾಳಗಿ, ಅಕ್ಷತಾ ಬಾಡದವರ, ಅರುಣಾ ಹೆಗಡೆ ಮತ್ತು ಶೃತಿ ಹಳೆಮನಿಯವರಿಗೆ ನಗದು ಸಹಿತ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.45ಕ್ಕೂ ಹೆಚ್ಚಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.2017-18ನೇ ಸಾಲಿನ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ ಪಡೆದ ಸಮೀನಾ ಬಾಗವಾನ, ಸಂಧ್ಯಾ ಕುಂಬಾರ(ತೃತೀಯ ಸ್ಥಾನ), ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಣಾಲಿ ನಾಗರಾಳೆ, ಶ್ರದ್ಧಾ ಪೊತದಾರ(4ನೇ ಸ್ಥಾನ), ಪೂನಂ ಚೌಗುಲೆ(7ನೇ ಸ್ಥಾನ), ಜಿಲ್ಲಾ ಮಟ್ಟದಲ್ಲಿ ಮೊದಲನೆ ಸ್ಥಾನ ಪಡೆದ ಶುಭಾಂಗಿ ವಾಡಕರ, ಅರ್ಜೂ ಗುಲ್ಬರ್ಗಾ(ದ್ವಿತೀಯ), ರಿತಿಕಾ ಜಾಧವ(5ನೇ ಸ್ಥಾನ), ಸಂಪ್ರೀತಾ ಕುಪ್ಪಾನಟ್ಟಿ(6ನೇ ಸ್ಥಾನ), ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರದೀಪ ಚಿಪರೆ, ಕೋಮಲ ಭಡಗಾವೆ(ದ್ವಿತೀಯ), ಅಕ್ಷತಾ ಪಾಟೀಲ(ತೃತೀಯ) ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆಎಲ್‌ಇ ಸಂಸ್ಥೆಯ ಸ್ಥಳೀಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಾದ ಡಾ.ಜೆ.ಕೆ.ಸಾಬೋಜಿ, ಪ್ರಾ. ಪಿ.ಆಯ್‌.ಪಾಟೀಲ ಪ್ರಾಧ್ಯಾಪಕ, ವಿದ್ಯಾರ್ಥಿ ಬಳಗ,ಸಿಬ್ಬಂದಿ ಉಪಸ್ಥಿತರಿದ್ದರು.ಶೃತಿ ಹಳೆಮನಿ ಹಾಗೂ ಸಂಗಡಿಗರು ನಾಡಗೀತೆ ಗೀತೆ ಹಾಡಿದರು. ಪಪೂ ಪ್ರಾ. ಡಾ.ಎಸ್‌.ಬಿ.ಸೊಲಬನ್ನವರ ಸ್ವಾಗತಿಸಿದರು. ಡಾ.ಡಿ.ವಿ.ಬಡಿಗೇರ ಪರಿಚಯಿಸಿದರು. ಡಾ.ಗಂಗಾಬಿಕಾ ಚೌಗಲಾ ಮತ್ತು ಪ್ರೊ.ಶುಭಂ ಕುಲಕರ್ಣಿ ನಿರೂಪಿಸಿದರು. ಬಿ.ಎಚ್‌.ಪರಮನಟ್ಟಿ ವಂದಿಸಿದರು.

loading...