ಕೆರೆ ತುಂಬುವಂತೆ ಒತ್ತಾಯಿಸಿ ಮನವಿ

0
18

ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಮತ್ತು ಕಾಲುವೆ ದುರಸ್ತಿ ಕಾರ್ಯ ಮಾಡುವಂತೆ ಮತ್ತು ಕೆರೆಗಳಿಗೆ ನೀರು ತುಂಬುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಜೆಡಿಎಸ್ ಘಟಕವು ಮತ್ತು ರೈತರಿಂದ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನಾ ಮೆರವಣಿಗೆಯು ನಗರದ ಜೆಡಿಎಸ್ ಕಾರ್ಯಾಲಯದಿಂದ ಹೊರಟು ನಾನಾ ವೃತ್ತಗಳ ಮುಖಾಂತರ ಹಾಯ್ದು ಮಿನಿ ವಿಧಾನಸೌಧದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಈ ಪ್ರತಿಭಟನೆಯ ನೇತೃತ್ವವನ್ನು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ ತಾಲೂಕನಲ್ಲಿ ಮಳೆಯಿಲ್ಲದೇ ತೀವ್ರ ರೀತಿಯಲ್ಲಿ ಬರಗಾಲದಿಂದ ಸಂಕಷ್ಟದಲ್ಲಿ ಅನುಭವಿಸುತ್ತಿರುವ ರೈತರು ಈ ರೀತಿಯಾಗಿರುವ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಅಲ್ಲದೇ ದನ-ಕರುಗಳಿಗೆ ಮೇವಿನ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರಿಲ್ಲವೇ? ಅಲ್ಲದೇ ೧೨೫-೧೨೭ ಕಿ.ಮೀವರೆಗಿರುವ ಗುತ್ತಿ ಬಸವಣ್ಣ ಕಾಲುವೆಯು ಸಂಪೂರ್ಣವಾಗಿ ಒಡೆದು ಹೋಗಿದ್ದು. ಅದರ ದುರಸ್ತಿ ಕಾರ್ಯವನ್ನು ಮಾಡಬೇಕು ಹಾಗೂ ಕಾಲುವೆಗಳು ಯಾರ ಜಮೀನಿನಲ್ಲಿ ಹಾಯ್ದು ಹೋಗಿದ್ದು ಅವರಿಗೆ ಪರಿಹಾರ ನೀಡಬೇಕು. ಮತ್ತು ತಾಲೂಕಿನ ಕೆಲವು ಕೆರೆಗಳಿಗೆ ನೀರು ತುಂಬಿಸಿಲ್ಲ. ಅವುಗಳನ್ನು ಕೂಡಾ ನೀರು ತುಂಬುವ ಯೋಜನೆ ಮಾಡಬೇಕು ಅಲ್ಲದೇ ಇಂಡಿ ಹತ್ತಿರ ವಿರುವ ಕೆಸರಾಳ ತಾಂಡಾದ ಹತ್ತಿರವಿರುವ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಒಳಪಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಪತ್ರವನ್ನು ಬಿ.ಡಿ. ಪಾಟೀಲ ಅವರು ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಪ್ರಕಾಶ ಪೋತೆ, ಮಂಜು ಕಾಮಗೊಂಡ, ಈರಣ್ಣ ಸೀತಿಮನಿ, ಭಿರಪ್ಪ ಪೂಜಾರಿ, ವಿಠ್ಠಲ ಬೆನಕನಳ್ಳಿ, ಅಣ್ಣಪ್ಪ ಶಿಂಧೆ, ಜಟ್ಟೆಪ್ಪ ಸಾಲೋಟಗಿ, ಕೆಂಚಪ್ಪ ಹಲಸಂಗಿ, ಬಾಬುರಾವ ಕಾರಬಾರಿ, ದಾದಾಗೌಡ ಪಾಟೀಲ, ಬಾಬುರಾವ , ಗಂಗಪ್ಪ ಸಾಲೋಟಗಿ, ಹಣಮಂತ ಹಿರೇಕುರಬರ, ಮಹದಮದಸಾಬ ಸೈಯದ್, ಮಲ್ಲಿಕಾರ್ಜುಣ ಹಿರೇಕುರಬರ, ನಬಿರಸುಲ ಕಾರಬಾರಿ, ರಾಯಗೊಂಡ ಶಿಂಧೆ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

loading...