ಕೆಳ ಸಮುದಾಯಗಳ ಅಭಿವೃದ್ಧಿ ಕುಂಠಿತಗೊಂಡಿವೆ: ಸಚಿವ ಸತೀಶ್

0
51

ಬೆಳಗಾವಿ 13: ಬ್ರಿಟಿಷರ ಆಡಳಿತ ಕಾಲದಿಂದಲೂ ಇಂದಿಗೂ ದೇಶದಲ್ಲಿ ಒಡೆದು ಆಳುವ ನೀತಿ ಮುಂದುವರಿದುಕೊಂಡು ಬಂದಿದ್ದರಿಂದ ಕೆಳ ಸಮುದಾಯಗಳ ಅಭಿವೃದ್ಧಿ ಕುಂಠಿತಗೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅಖಿಲ ಭಾರತ ಪಿಂಜಾರ,ನಧಾಪ, ಮನ್ಸೂರಿ ಮಹಾಮಂಡಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಮಾಜ ಸಂಘಟನೆ ಹಾಗೂ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ರೈತರೊಂದಿಗೆ ಸೌಹಾರ್ದಯುತವಾಗಿ ರೈತರು ಬೆಳೆದ ಹತ್ತಿಯಿಂದ ತಮ್ಮ ಕಸಬುಗಳನ್ನು ನಡೆಸಿಕೊಂಡ ಬಂದ ಸಮಾಜ ಇದಾಗಿದೆ. ಪಿಂಜಾರ ಸಮಾಜದ ಏಳ್ಗಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಕಾರಾತ್ಮವಾಗಿ ಸ್ಪಂಧಿಸಿದ್ದು, ಬರುವ ದಿನಗಳಲ್ಲಿ ಪಿಂಜಾರ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸೇರಿದಂತೆ ಎಲ್ಲ ರೀತಿಯಿಂದಲೂ ಸದೃಢಗೊಳಿಸಲಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಐ.ಎ.ಪಿಂಜಾರ ಮಾತನಾಡಿ. ಪಿಂಜಾರ ಸಮುದಾಯದ ಸಮಸ್ಯೆಗಳನ್ನು ಸರ್ಕಾರ ಗಮನಕ್ಕೆ ತರುವ ನಿಟ್ಟಿನಲ್ಲಿ 1990 ರಲ್ಲಿ ಸಂಘವನ್ನು ಸ್ಥಾಪಿಸಿ ಅನೇಕ ಹೋರಾಟ ಮಾಡುವುದ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದೇವೆ. ಆದರೆ, ಕೆಲವು ಸ್ವಾರ್ಥ ನಾಯಕರು ತಮ್ಮ ಲಾಭಕ್ಕಾಗಿ ಈಂತಹ ಸಂಘಟನೆಗಳನ್ನು ಬಳೆಸಿಕೊಂಡಿದ್ದಾರೆ ಹೊರತು ಈ ಸಮುದಾಯಕ್ಕೆ ಯಾವುದೇ ರೀತಿಯ ಸಹಾಯ, ಸೌವಲತ್ತುಗಳನ್ನು ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಹುಟ್ಟಿ ಬೆಳೆದ ಸಮಾಜಕ್ಕೇನು ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜ ಶ್ರಯೋಭಿವೃದ್ಧಿಗೆ ಶ್ರಮಿಸಬೇಕೆಂದು ಎಂದು ಕರೆ ನೀಡಿದರು.
ಪ್ರದಾನ ಕಾರ್ಯದರ್ಶಿ ನ್ಯಾ.ಎಫ್.ಎಸ್.ಕೊರವನಕೊಳ್ಳ ಮಾತನಾಡಿ, ಹಲವಾರು ವರ್ಷಗಳಿಂದ ಪಿಂಜಾರ ಸಮಾಜ ತುಳಿತ್ತಕ್ಕೊಳಗಾಗಿದ್ದರಿಂದ ನಮ್ಮ ಸಮಾಜದ ಜನರು ಶೈಕ್ಷಣೀಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಪಿಂಜಾರ ಸಮಾಜದ ಜನರು ಎಲ್ಲ ರಂಗದಲ್ಲಿಯೂ ಒಗ್ಗಟ್ಟಾಗಿ ಶ್ರಮಿಸಿದರೆ ನಮ್ಮ ಸಮಾಜದ ಹಕ್ಕಿಗಾಗಿ ಹೋರಾಟ ಮಾಡಲು ಬರುವ ವಿಧಾನ ಪರಿಷತ್ತ ಚುನಾವಣೆಯಲ್ಲಿ ಶಿಕ್ಷಕರ ಕೇತ್ರದಿಂದ ಐ.ಎ.ಪಿಂಜಾರ ಸ್ಪರ್ಧಿಸಲು ತಯಾರಿ ನಡೆಸಲಾಗುತ್ತದೆ ಎಂದರು.
ಆರ್.ವಾಯ್.ನಧಾಪ್, ಎ.ಡಿ ಮುಲ್ಲಾ, ಅಲಿಸಾಬ ಮುಲ್ಲಾ, ಮಹ್ಮದಗೌಸ ನಧಾಪ್, ನಜೀರ ಅಹ್ಮದ ಸೇರಿದಂತೆ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಜೀರಹ್ಮದ ನಧಾಪ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯಿಲ ನಧಾಪ ವಂದಿಸಿದರು.

loading...

LEAVE A REPLY

Please enter your comment!
Please enter your name here