ಕೆಸರು ಗದ್ದೆಯಂತಾದ ರಸ್ತೆಗಳು: ಸ್ಥಳೀಯರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

0
12

ಕನ್ನಡಮ್ಮ ಸುದ್ದಿ-ನರಗುಂದ: ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ. ಅದರಂತೆ ಎನ್‍ಎಚ್‍ಟಿ ಮಿಲ್ ಕ್ವಾಟರ್ಸ ಬಳಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ನಂ. 4 ರ ರಸ್ತೆಯೂ ಕೇಸರುಗದ್ದೆಯಂತಾಗಿದೆ. ಇದರಿಂದ ಶಾಲಾಮಕ್ಕಳು ಶಾಲೆಗೆ ಒಳಪ್ರವೇಶಿಸಲು ಹರಸಾಹಸ ಪಡುವಂತಾಗಿದೆ. ತಕ್ಷಣ ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳು ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕೇಂದು ಆಗ್ರಹಿಸಿ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೆಲಕಾಲ ರಸ್ತೆತಡೆ ನಡೆಸಿದರು.
ಶಾಲಾ ಭಾಗದ ರಸ್ತೆಯಲ್ಲಿ ಹೆಚ್ಚಿನ ಕೆಸರು ತುಂಬಿದ ಪರಿಣಾಮ ಮಕ್ಕಳು ನಿತ್ಯ ಎದ್ದು, ಬಿದ್ದು ಶಾಲೆಗೆ ತೆರಳುವಂತಾಗಿದೆ. ಅಲ್ಲದೇ ಶಾಲಾ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ಟಿಸಿ ಮತ್ತು ವಿದ್ಯುತ್ ಕಂಬಗಳಿವೆ. ಶಾಲಾ ಮಕ್ಕಳು ಆಟವಾಡುವ ಸಂದರ್ಭದಲ್ಲಿ ವಿದ್ಯುತ್ ಅವಾಂತರಗೊಂಡರೆ ತೊಂದರೆಗೆ ಸಿಲುಕುತ್ತಾರೆ.ಈ ಕುರಿತು ಹೆಸ್ಕಾಂ ಅಧಿಕಾರಿಗಳಲ್ಲಿ ಟಿಸಿ ಸ್ಥಳಾಂತರಗೊಳಿಸಿ ಎಂದು ಪುರಸಭೆ ಅಧಿಕಾರಿಗಳಲ್ಲಿ ರಸ್ತೆ ದುರಸ್ತಿಮಾಡಿಸಿ ಎಂದು ಅನೇಕ ಭಾರಿ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆಂದು ಅಲ್ಲಿಯ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಒಂದು ದಿನ ಗೊತ್ತುಪಡಿಸಿ ಶಾಲಾ ಆವರಣದಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಣಧೀರ ಪಡೆಯ ತಾಲೂಕ ಘಟಕದ ಅದ್ಯಕ್ಷ ಫಾರೂಖ ಮಜಿದಮನಿ, ಬಾಬೂ ಅತ್ತಾರ, ಫಕ್ರುಸಾಬ ಸವಟಗಿ, ವಿನೋದ ವಡ್ಡರ, ರೇಣುಕಾ ಕ್ಯಾಲಕೊಂಡ, ಬಾಬಾಜಾನ ಕೋಳಿಕಾಲ, ಶಿವು ಹರಣಶಿಕಾರಿ, ರವಿ ವಡ್ಡರ, ಬಸವರಾಜ ಹರಣಶಿಕಾರಿ, ಕಾಶಿಮಸಾಬ ಬಿಚಗತ್ತಿ, ಸೈದುಸಾಬ ನಾಯ್ಕರ್, ಹಸನಸಾಬ ಜವಳಿ, ಅರುಣ ಹನಸಿ, ಮಲಿಕ್‍ಜಾನ್ ಹುಣಸೀಮರದ, ಫಕ್ರುಸಾಬ ಬಾಂಗಿ ಅನೇಕರು ಆಗ್ರಹಿಸಿದ್ದಾರೆ.

loading...