ಕೆ.ಜಿ.ಹಳ್ಳಿಯಲ್ಲಿ ಗಲಾಟೆ ಕಂಟ್ರೋಲ್‌ ಬರಲಿಲ್ಲ ಅಂದ್ರೆ ಶೂಟ್ ಅಂಡ್ ಸೈಟ್ ಮಾಡಿ: ಕೇಂದ್ರ ಸಚಿವ ಅಂಗಡಿ

0
33

ಬೆಳಗಾವಿ

ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ಗಲಾಟೆ ಕಂಟ್ರೋಲ್ ಬರದೆ ಇದ್ದರೆ ಶೂಟ್ ಅಂಡ್ ಸೈಟ್ ಮಾಡಿ ಗಲಾಟೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಬೆಳಗಾವಿ ಬಿಮ್ಸ್ ನಲ್ಲಿ ಇದೇ ರೀತಿ ನಡೆದಿತ್ತು. ಆ್ಯಂಬುಲೆನ್ಸ್ ಬೆಂಕಿಯನ್ನು 20 ನಿಮಿಷದಲ್ಲಿ ಗಲಾಟೆ ನಡೆದಿತ್ತು. ಬೆಂಗಳೂರಿನಲ್ಲಿ ಮತ್ತೆ ಇಂಥ ಘಟನೆ ನಡೆದಿರುವುದು ಅತ್ಯಂತ ಖಂಡನೀಯ. ಇದು ದೇಶ ದ್ರೋಹಿಗಳು ಮಾಡೋ ಕೃತ್ಯ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರ ಹೆಸರು ಹಾಳು ಮಾಡುವ ದುರುದೇಷದಿಂದ ಕೃತ್ಯ ಮಾಡಲಾಗುತ್ತಿದೆ. ಗಲಾಟೆ ಹಿಂದೆ ಕೆಲ ವ್ಯಕ್ತಿಗಳು ವ್ಯಸ್ಥಿತ ಸಂಚು ರೂಪಿಸಿದ್ದಾರೆ. ಪೊಲೀಸ ಠಾಣೆ ಬೆಂಕಿ ಹಚ್ಚುವ ವ್ಯಕ್ತಿಗಳಿಗೆ ಏನ್ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಪತ್ರಕರ್ತರ ಹಲ್ಲೆ ಸಹ ಖಂಡನೀಯ ಎಂದ ಸುರೇಶ ಅಂಗಡಿ.

ಗಲಭರಯಲ್ಲಿ ಅಮಾಯಕರು ಬಲಿ ಆಗಬಾರದು ಎಂದರೇ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಪ್ರಕರಣ ನಿಭಾಯಿಸಲು ಸಮರ್ಥವಾಗಿದೆ, ಕೇಂದ್ರದಿಂದ ಅವ್ಯಶ್ಯಕತೆ ಬಿದ್ದರೇ ಸಹಾಯ ತೆಗೆದುಕೊಳ್ಳಬಹುದು.ಕಂಟ್ರೋಲ್ ಬರದೇ ಇದ್ರೆ ಶೂಟ್ ಅಂಡ್ ಸೈಟ್ ಮಾಡಿ ಎಂದು ಕಾರವಾಗಿ ಪ್ರತಿಕ್ರಯಿಸಿದರು.

loading...