ಕೇಂದ್ರದಿಂದ ಬರ ನಿರ್ವಹಣೆಗೆ ಅನುದಾನ ಬಂದಿಲ್ಲ : ಪಾಟೀಲ ಅಸಮಾಧಾನ

0
33

ಬಾಗಲಕೋಟೆ, ದಿ. 22ರಂದು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಜಿ.ಪಂ. 5ನೇ ಸಾಮಾನ್ಯ ಸಭೆಯಲ್ಲಿ ಬಾಗಲಕೋಟ ಜಿಲ್ಲೆ ಬರಗಾಲ ಪೀಡಿತ ಎಂದು ಘೋಷಿಸಿ, ಘೋಷಿಸಿದ ಪ್ರದೇಶದ ಗ್ರಾಮಗಳಿಗೆ ಅನುದಾನ ನೀಡಿದ ಮಾಹಿತಿ ಕೇಳಿದ ಜಿ.ಪಂ.ಸದಸ್ಯರ ನೇರವಾದ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಮತ್ತು ಅಧ್ಯಕ್ಷರುಗಳ ಸದಸ್ಯರ ಮನವೊಲಿಸಲು ಹರಸಾಹಸ ಪಟ್ಟ ಪ್ರಸಂಗ ಜಿ.ಪಂ.ನ 5ನೇ ಸಾಮಾನ್ಯ ಸಭೆಯಲ್ಲಿ ಸಾಮಾನ್ಯವಾಗಿತ್ತು.

ಈ ವರ್ಷದ ಮಳೆಯ ಕೊರತೆಯಿಂದ ಮತ್ತು ಕೃಷ್ಣಾ ನದಿಯ ನೀರು ಕೊರತೆಯಾಗು ವಿಷಯಗಳನ್ನರಿತು, ಸಮಿತಿಯ ಸಮೀಕ್ಷೆಯಂತೆ ಉತ್ತರ ಕರ್ನಾಟಕದ ಬಾಗಲಕೋಟ ಜಿಲ್ಲೆಯನ್ನು 3 ಹಂತದಲ್ಲಿ ಬರಗಾಲಪೀಡಿತ ಜಿಲ್ಲೆ ಎಂದು ಘೋಷಿಸಲಾಯಿತು. ಅದಕ್ಕಾಗಿ ಘೋಷಿತ ಪ್ರದೇಶಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಮತ್ತು ಧನಕರುಗಳಿಗೆ ಮೇವು ಹಾಗೂ ಬರಗಾಲ ಕಾಮಗಾರಿಗಳಿಗಾಗಿ ಸೂಕ್ತ ಅನುದಾನ ನೀಡುವುದಕ್ಕಾಗಿ ಸರ್ಕಾರ ಟಾಸ್ಕ್ ಪೋರ್ಸ ಸಮಿತಿಯೊಂದನ್ನು ರಚಿಸಿ, ಸಮಿತಿಯ ಸಮೀಕ್ಷೆಯಂತೆ ವರದಿ ಪಡೆದು ಅನುದಾನ ನೀಡುವಲ್ಲಿ ಬಾಗಲಕೋಟ ಜಿಲ್ಲೆ ಸಂಪೂರ್ಣ ವಿಫಲವಾದುದ್ದನ್ನು ಮನಗಂಡ ಜಿ.ಪಂ. ಸದಸ್ಯರುಗಳು ಸಾಮಾನ್ಯ ಸಭೆಯಲ್ಲಿ ಕೃಷ್ಣಾ ನದಿಯ ನೀರು ಕ್ರಮೇಣವಾಗಿ ಬತ್ತಿಹೋಗುತ್ತಿದೆ. ದನ-ಕರುಗಳು ಮೇವಿಲ್ಲದೆ ಬಳಲುತ್ತಿವೆ.

ಜಿಲ್ಲೆಯ ಈ ಪರಿಸ್ಥಿತಿಗೆ ಸರ್ಕಾರ ಬಿಡುಗಡೆ ಮಾಡಿದ ಹಣ ಎಷ್ಟೌ ಅದರಲ್ಲಿ ಯಾವ ಯಾವ ಗ್ರಾಮಗಳಲ್ಲಿ, ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಬಳಕೆಯಾಗಿದೆ, ಬಳಕೆಯಾದ ಹಣದಲ್ಲಿ ಎಷ್ಟು ಕೆಲಸ ಪರಿಪೂರ್ಣವಾಗಿದೆ ಎಂಬ ಜ್ವಲಂತ್ ಸಮಸ್ಯೆಯ ಪ್ರಶ್ನೆಯನ್ನು ಜಿ.ಪಂ. ಸಭೆಯಲ್ಲಿ ಸದಸ್ಯರುಗಳು ಎತ್ತರ ಧ್ವನಿಯಲ್ಲಿ ಕೇಳಿದಾಗ ಅಷ್ಟೆ ನಿಸ್ಸಾಯಕ ಉತ್ತರವನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸಿಆರ್ಎಫ್ ನಿಂದ ಜಿಲ್ಲೆಯ ಬರಗಾಲದ ವ್ಯವಸ್ಥೆಗೆ ಯಾವುದೇ ವಿಶೇಷವಾದ ಅನುದಾನ ಇನ್ನುವರೆಗೂ ಬಂದಿಲ್ಲ ಎಂದು ಕೈಚೆಲ್ಲಿದರು. ಇದಕ್ಕೆ ಪ್ರತಿಯಾಗಿ ಅನುದಾನವಿಲ್ಲವೆಂದ ಮೇಲೆ ಬರಗಾಲ ಜಿಲ್ಲೆ ಎಂದು ಘೋಷಿಸುವುದೇಕೆ ಎಂದು ಸದಸ್ಯರುಗಳು ಪ್ರತಿಭಟಿಸುವುದರೊಂದಿಗೆ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಕಾರ್ಯ ಚಟುವಟಿಕೆಗಳು ಸೂಕ್ತವಾಗಿ ನಡೆಯುತ್ತಿಲ್ಲ. ಸದಸ್ಯರ ಮಾತಿಗೆ ಬೆಲೆಯಿಲ್ಲ, ಅಧ್ಯಕ್ಷರುಗಳ ಅಧಿಕಾರ ಮುಂದುವರಿಕೆಗೆ ಮಾತ್ರ ಜಿಲ್ಲಾ ಪಂಚಾಯತ್ ಕೆಲಸ ಕಾರ್ಯಗಳು ನಡೆದಿವೆ ಹೊರತಾಗಿ ಪಂಚಾಯತಿಗಳ ನೋವನ್ನು ಅಲ್ಲಿನ ಜನರ ಸಂಕಷ್ಟಗಳನ್ನು ಗಾಳಿಗೆ ತುರಿದ ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾಡಳಿತ ಏನು ಮಾಡುತ್ತಿವೆ. ಇಂದಿನ ಸಭೆಯಲ್ಲಿ ಯಾವುದಾದರೊಂದು ತೀರ್ಮಾನವಾಗುವವರೆಗೂ ನಾವು ಇಲ್ಲಿಂದ ಕದಲುವದಿಲ್ಲ ಎಂದು ಸದಸ್ಯರುಗಳಾದ ವಿಠ್ಠಲ ಚೂರಿ, ಬಸವಂತಪ್ಪ ಮೇಟಿಯವರು ದಿಟ್ಟ ನಿಲುವಿನಿಂದ ಸಭೆಯಲ್ಲಿ ಚರ್ಚಿಸಿದರು.

ಸದಸ್ಯರುಗಳ ಪ್ರಶ್ನೆಗಳಿಗೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಉತ್ತರ ನೀಡಲು ತಡವರಿಸಿದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು ಜಿಲ್ಲೆಯಾಧ್ಯಂತ ಬರಗಾಲ ವ್ಯಾಪಕವಾಗಿ ಹರಡುತ್ತಿದ್ದರಿಂದ ತಕ್ಷಣ ಜನರಿಗೆ ಕುಡಿಯುವ ನೀರು, ಧನಕರುಗಳುಗೆ ಮೇವು ಒದಗಿಸುವು ನಿಟ್ಟಿನಲ್ಲಿ ಜಿಲ್ಲಾಡಳಿತದಲ್ಲಿರುವ ಎನ್ಆರ್ಆಯ್ಜಿ ಯ ಅನುದಾನವನ್ನು ಡಬಲ್ಆಕ್ಸ್ನ್ ಪ್ಲಾನ್ನಲ್ಲಿ ಬಳಸಲು ನಮಗೆ ಅಧಿಕಾರ ನೀಡಿದೆ.

ಅದಕ್ಕಾಗಿ ಹಳೇ ಕೊಳವೆ ಭಾವಿಗಳನ್ನು ಆಳಕ್ಕೆ ಕೊರೆಸಿ ನೀರು ಒದಗಿಸುವ ಕಾರ್ಯ ನಡೆದಿದೆ, 76ಗ್ರಾಮಗಳಿಗೆ ಈ ಸಮಸ್ಯೆಗಾಗಿ 272 ಪೈಂಟ್ ಗುರುತಿಸಿ ಕೆಲಸ ಮಾಡಲು 42.22 ಲಕ್ಷ ನೀಡಲಾಗಿದೆ. ಸಾವಳಗಿಯ ನೀರಿನ ಸಮಸ್ಯೆ ಬಗೆಹರಿಸಲು 5.76ಲಕ್ಷ ಮೊತ್ತವನ್ನು ಪೈಪ್ಲಾಯಿನ್ಗಾಗಿ ನೀಡಿದ್ದಾರೆ ಒಟ್ಟು ಜಿಲ್ಲೆಯ 174 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 150.70 ಲಕ್ಷ ಅನುದಾನ ನೀಡಲಾಗಿದೆ. ಅದರಲ್ಲಿ 73 ಗ್ರಾಮಗಳಿಗೆ 71.18 ಲಕ್ಷ ಕಾಂಟಿಜೆನ್ಸ್ ಬಿಡುಗಡೆಯಾಗಿದೆ, ಕುಡಿಯುವ ನೀರಿಗಾಗಿ 271.84ಲಕ್ಷ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ದನಕರುಗಳಿಗಾಗಿ ಮೇವು ವಿಲೇವಾರಿಗೆ 7ಲಕ್ಷ ಮತ್ತು ಜಮಖಂಡಿ, ಬದಾಮಿ, ಹುನಗುಂದ ತಾಲ್ಲೂಕಿನ ಮೇವಿನ ಬ್ಯಾಂಕಿಗಾಗಿ, ಮೇವು ಸಂಗ್ರಹಣೆಗಾಗಿ 21ಲಕ್ಷ ಬಿಡುಗಡೆ ಮಾಡಲಾಗಿದೆ. ಈ ರೀತಿಯ ಅನೇಕ ಸಾಂಖಿಕ ಮಾಹಿತಿಯನ್ನು ನೀಡಿದ ಕಾರ್ಯನಿರ್ವಾಹನ ಅಧಿಕಾರಿಗಳ ಮಾತಿಗೆ ಒಪ್ಪದ ಸದಸ್ಯರುಗಳು ಖಾಲಿ ಲೆಕ್ಕಾಚಾರ ಅರ್ಥವಿಲ್ಲದ ಕೆಲಸ, ಲೆಕ್ಕ ಹಾಕುವದರಿಲ್ಲಿಯೇ ಬರಗಾಲ ಮುಗಿದು ಹೋಗುತ್ತದೆ. ಎಲ್ಲರ ಸತ್ತ ಮೇಲೆ ಅನುದಾನ ಬರುತ್ತದೆ 25ರೂ.ಗಳಿಗೆ 1ಸೂಡ ಕಣಿಕೆಯಾಗಿದೆ ಸದಸ್ಯರುಗಳಾದ ನಮ್ಮನ್ನು ಗ್ರಾಮದ ಜನ ಕೇಳುವ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇಲ್ಲದಂತಾಗಿದೆ ಹೀಗೆ ಇನ್ನೂ ಕೆಲವು ದಿನ ಹೋದರೆ ಜನ ನಮ್ಮ ಬಟ್ಟೆ ಹರಿಯುತ್ತಾರೆ. ಈ ವಿಚಾರ ಎ.ಸಿ. ರೂಂನಲ್ಲಿ ಕುಳಿತು ಕ್ರೀಯಾಯೋಜನೆ ಮಾಡುವ ಅಧಿಕಾರಿಗಳಿಗೆ ತಿಳಿಯುವದಿಲ್ಲ, ಒಂದು ಬಾರಿ ಗ್ರಾಮಗಳನ್ನು ಸುತ್ತಾಡಿದರೆ ಅದರ ಪರಸ್ಥಿತಿ ಅರ್ಥವಾಗುತ್ತದೆ ಎಂದು ಸಮಸ್ಯ ಮೇಲೆ ಸಮಸ್ಯೆಗಳನ್ನು 4ಘಂಟೆಗಳ ಕಾಲ ಚರ್ಚಿಸಿದರು ಸದಸ್ಯರುಗಳಿಗೆ ಸಮರ್ಪಕ ಉತ್ತರ ದೊರೆಯದಿರುವುದು ಪ್ರಸ್ತುತ ಸರ್ಕಾರದ ಕಾರ್ಯನೀತಿಗೆ ಹಿಡಿದ ಕೈಗನ್ನಡಿಯಾಗಿತ್ತು.  5ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಇನ್ನೊಂದು ಮಹತ್ವದ ಪ್ರಶ್ನೆಯನ್ನು ಚರ್ಚಿಸಿದರು ಕೆಳೆದ ಸಾಮಾನ್ಯ ಸಭೆಯಲ್ಲಿ ನಿಗಧಿತ ಸಮಯಕ್ಕೆ ಸಭೆಗೆ ಎಲ್ಲ ಅಧಿಕಾರಿಗಳು, ಸದಸ್ಯರುಗಳು ಹಾಜರಿರಬೇಕು ಎಂಬ ಕಟ್ಟುನಿಟ್ಟಿನ ಆದೇಶವಿದ್ದರು ಇಂದು ಮತ್ತೆ ಸಭೆ ಒಂದು ಘಂಟೆ ತಡವಾಗಿ ನಡೆದರು ಅನೇಕರು ಸಭೆಗೆ ವಿಳಂಬ ಮಾಡಿ ಬಂದವರ ವಿರುದ್ಧ ಮತ್ತು ಗೈರುಹಾಜರಾದವರ ವಿರುದ್ಧ ಏನು ಕ್ರಮ ಕೈಗೊಳ್ಳುವೀರಿ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯತಿಯ ಕಾರ್ಯಾವೈಖರಿ ಕುರಿತು ಖಂಡಿಸುವುದರ ಜೊತೆಗೆ ಮಲತಾಯಿ ಧೋರಣೆ ಗ್ರಾಮಗಳಿಗೆ ಒದಗಿಸಬೇಕದ ಸೌಲಭ್ಯಗಳಲ್ಲಿಯೂ ವ್ಯಾಪಕವಾದ ರಾಜಕೀಯ ನಡೆಯುತ್ತಿದೆ ಹೀಗಾದರೆ ಜಿಲ್ಲಾ ಪಂಚಾಯತಿಗೆ ಅಧ್ಯಕ್ಷರುಗಳು ಏಕೆ, ಸದಸ್ಯರುಗಳು ಏಕೆ, ಎಂದು ಸದಸ್ಯರುಗಳು ನೊಂದ ಮನಸ್ಸಿನಿಂದ ಚರ್ಚಿಸಿದ ವಿಷಯಗಳು ಸಭೆಯ ನಂತರ ಯಾವ ರೀತಿ ಕಾರ್ಯಗತಗೊಳ್ಳುತ್ತವೆ ಎಂಬುದನ್ನು ಜನ ಕಾಯ್ದು ನೋಡಬೇಕಷ್ಟೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಎಸ್.ಜಿ.ಪಾಟೀಲ, ಜಿ.ಪಂ. ಇಲಾಖೆ ಅಧಿಕಾರಿಗಳು ಮತ್ತು ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

loading...

LEAVE A REPLY

Please enter your comment!
Please enter your name here