ಕೇಂದ್ರದ ಯೋಜನೆಗಳ ಸದುಪಯೋಗಪಡೆದುಕೊಳ್ಳಿ: ಸಂಸದ ಜೋಶಿ

0
10

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಳೆ ಹುಬ್ಬಳ್ಳಿ ನೇಕಾರ್ ನಗರದಲ್ಲಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು 350 ಕ್ಕೂ ಹೇಚ್ಚು ಪ್ರಧಾನ ಮಂತ್ರಿಗಳ ಜನ ಔಷದಿ ಕೇಂದ್ರ ಸ್ಥಾಪನೆ ಆಗಿವೆ. ಸಾಕಷ್ಟು ಯುವಜನತೆಗೆ ಅನುಕೂಲವಾಗಿದೆ, ಸ್ವ ಉದ್ಯೋಗ ಮಾಡಿಕೊಂಡು ಸ್ವಾಲಂಬಿಗಳಾಗಲು ಯುವಜನತೆಗೆ ಹೆಚ್ಚಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಆರಂಭಿಸಿ ಸಿದ್ಧಮಾಡಿ ಮಾದರಿಯಾಗಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಧನೆಗಳು ಮುದ್ರಾ ಯೋಜನೆ ಕೊಂಡಾಡಿದರು. ಪ್ರಧಾನ ಮಂತ್ರಿಗಳ ಜನಪರ ಯೋಜನೆಗಳಿಂದ ದೇಶ ಪ್ರಗತಿಯಲ್ಲಿ ಸಾಗುತ್ತಿದೆ ಎಂದರು.
ಸುರೇಶ್ ಅಂಚಟಗೇರಿ, ರಂಗಾ ಬದ್ದಿ, ಸುಭಾಷ್ ಹೊಸಮನಿ, ದೇವೇಂದ್ರಪ್ಪ ಸಿರುಗುಪ್ಪ ಇದ್ದರು.

loading...