ಕೇಂದ್ರ ಮತ್ತು ರಾಜ್ಯ ಸರಕರ ಅಂಗವಿಕಲರ ಪರವಾಗಿ ಕಾರ್ಯ ಮಾಡುತ್ತಿದೆ

0
96

ವಿಕಲಚೇತನರ ಸಲಕರಣಾ ಸಮಾರಂಭದಲ್ಲಿ ಸಚಿವ ಜಾರಕಿಹೊಳಿ ಹೇಳಿಕೆ
ಬೆಳಗಾವಿ:28 ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ವಿಕಲಚೇತನರ ಪರವಾಗಿ ಕೆಸಲ ಮಾಡುತ್ತಿವೆ. ಇವುಗಳು ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರ ನಗರದ ಹೊರವಲಯದಲ್ಲಿರುವ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್‍ನಲ್ಲಿ ಭಾರತ ಸರಕಾರ, ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯತ ಬೆಳಗಾವಿ, ವಿಕಲಚೇತರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಪಂಡಿತ ದೀನ್ ದಯಾಳ್ ಉಪಾದ್ಯಾಯ ದೈಹಿಕ ವಿಕಲಚೇತನರ ಸಂಸ್ಥೆ ನವದೆಹಲಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಸಾಧನ ಸಲಕರಣೆಗ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಕಲಚೇತನರಿಗೆ ವಿಶೇಷ ಯೋಜನೆಗಳನ್ನು ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿ ವರ್ಷ ಜಿಲ್ಲೆಗೆ 25 ಲಕ್ಷ ರೂ.ಗಳ ಸಲಕರಣೆಗಳನ್ನು ನೀಡುತ್ತಿದ್ದರು. ಸಂಘ ಸಂಸ್ಥೆಗಳ ಆಸಕ್ತಿಯಿಂದ ಈ ಬಾರಿ ಒಟ್ಟು 1 ಕೋಟಿ ರೂ.ಗಳ ವಿಕಲಚೇತರ ಸಲಕರಣೆಗಳು ಬಂದಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಜಾರಕಿಹೊಳಿ ನುಡಿದರು.
ಸಂಸದ ಸುರೇಶ ಅಂಗಡಿ ಮಾತನಾಡುತ್ತ, ದೇಶದ ಬಡತನ ಹಾಗೂ ಅಂಗವಿಕರ ಬಗ್ಗೆ ವಿಶೇಷ ಕಾಳಜಿವಹಿಸಿದ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದೆ. ಬರುವ ದಿನಗಳಲ್ಲಿ ವಿಕಲಚೇತನರ ಮಕ್ಕಳಿಗೆ ತಂತ್ರಜ್ಞಾನದಿಂದ ಕೂಡಿದ ಸಲಕರಣೆಗಳನ್ನು ನೀಡುವಂತೆ ಪ್ರಧಾನಿಯಲ್ಲಿ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದರು.
ಭಾರತ ಸರಕಾರ ವಿಕಲಚೇತನರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಆದರಿಂದ ಪಾಲಕರು ವಿಲಕಚೇನತ ಮಕ್ಕಳು ದೇವರು ಕೊಟ್ಟ ಶಾಪ ಎಂದು ಪರಿಗಣಿಸಬಾರದು ನಿಮ್ಮ ಸೇವೆ ಮಾಡಲು ಅಧಿಕಾರಿಗಳು ಇದ್ದಾರೆ. ಅದು ದೇವರು ಕೊಟ್ಟ ವರ ಎಂದು ಭಾವಿಸಿ ಎಲ್ಲರೂ ಸಂತೋಷದಿಂದ ಬದುಕಬೇಕೆಂದು ಅವರು ಕರೆ ನೀಡಿದರು.
ಅಂಗವಿಕಲರ ಪ್ರಮಾಣ ಪತ್ರ ನೀಡುವಲ್ಲಿ ಸರಕಾರಿ ಅಧಿಕಾರಿಗಳು ಹಾಗೂ ವೈದ್ಯರು ವಿನಾಕರಣ ವಿಳಂಭ ಮಾಡುತ್ತಿದ್ದಾರೆ. ಅದು ನಿಲ್ಲಬೇಕು ದೂರದ ಹಳ್ಳಿಗಳಿಂದ ನಗರಕ್ಕೆ ಸಾಕಷ್ಟು ಹಣ ಖರ್ಚುಮಾಡಿಕೊಂಡು ಪ್ರಮಾಣ ಪತ್ರಕ್ಕೆ ಅಂಗವಿಕಲ ಮಕ್ಕಳ ಪಾಲಕರು ಬಂದಿರುತ್ತಾರೆ. ಅವರಿಗೆ ಪ್ರಾಮಾಣಿಕವಾಗಿ ಆದಷ್ಟು ಬೇಗನೆ ಅವರಿಗೆ ಪ್ರಮಾಣ ಪತ್ರ ನೀಡಿ ಸಹಕರಿಸಬೇಕೆಂದು ಅಧಿಕಾರಿಗಳಿಗಳಲ್ಲಿ ಸಂಸದ ಅಂಗಡಿ ಮನವಿ ಮಾಡಿಕೊಂಡರು.
ಪಾಲಕರು ಅಂಗವಿಕಲ ಮಕ್ಕಳಲ್ಲಿ ದೈರ್ಯ ತುಂಬುವ ಕಾರ್ಯಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕ ಸಭೆಯಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಸ್ಥಾನ ಕಲ್ಪಿಸಿಕೊಡುವಂತೆ ಕೇಳಿಕೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಬೆಳಗಾವಿಯ 5 ತಾಲೂಕುಗಳಲ್ಲಿ ಒಟ್ಟು 678 ಅರ್ಹ ಅಂಗವಿಕಲ ಫಲಾನುಭವಿಗಳು ಅರ್ಜಿಗಳನ್ನು ಅಧಿಕಾರಿಗಳು ಇತ್ಯರ್ಥಗೊಳಿಸಿಲ್ಲ. ಶೀಗ್ರವೇ ಅವರ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಅವರಿಗೂ ಸರಕಾರದ ಸಲಕರಣೆಗಳನ್ನು ವಿತರಿಸುವ ಕಾರ್ಯಮಾಡಬೇಕೆಂದು ಸಂಸದ ಸುರೇಶ ಅಂಗಡಿ ಹೇಳಿದರು.ಇದೇ ಸಂದರ್ಭದಲ್ಲಿ ಒಟ್ಟು 839 ಅರ್ಹ ಫಲಾನುಭವಿಗಳಿಗೆ, ಕೃತಕ ಕೈ, ಕಾಲುಗಳು, ವಿಲ್ಹಚೇರಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ವಿತರಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್.ಜಯರಾಮ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಪ್ಪಾಸಾಹೇಬ ನರಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯ ಉಪ ನಿರ್ದೇಶಕ ಬಿ.ಎ. ವಂಟಮುರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಕುಲಕರ್ಣಿ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here